ಗಜೇಂದ್ರಗಡ : (Sept_25_2025)
ಆರೋಗ್ಯವೇ ಭಾಗ್ಯ. ಆರೋಗ್ಯ ಕಾಪಾಡಿಕೊಂಡರೇ, ಆರೋಗ್ಯ ಹಣಕ್ಕಿಂತ important ಎಂದು ಉಪನ್ಯಾಸಕಾರದ ಬಸಪ್ಪ ಜೆ ಹೇಳಿದರು. ಜೀಗೇರಿ ಗ್ರಾಮದಲ್ಲಿ ನಡೆದ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವ ಜನತೆ ಮೊಬೈಲ್ ನ ದಾಸರಾಗಿದ್ದು, ಸಾಮಾಜಿಕ ಜಾಲತಾಣದಲ್ಲೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ, ಕಲಿಕೆಯ ಜೊತೆಗೆ ಆಟೋಟ ಕೂಡ ಮುಖ್ಯ ಎನ್ನುತ್ತಾ, ನಾವು ಸೇವಿಸುವ ಆಹಾರ ಕೂಡ ಕಲ್ಮಶವಾಗಿದ್ದು, ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಖೇದ ವ್ಯಕ್ತಪಡಿಸಿದರು. ಆರೋಗ್ಯ ಕಾಪಾಡಿಕೊಳ್ಳಿ ಎಂದು ಯುವ ಜನತೆಗೆ ಸಲಹೆ ನೀಡಿದರು. ಇನ್ನೂ, ಗ್ರಾಮೀಣ ಭಾಗದಲ್ಲೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.
ಇತ್ತ, ಸಾಯಿ ದತ್ತ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ವೈದ್ಯರಾದ ಕೃಷ್ಣ ಶೆಟ್ಟರ್ ಸಹ ಶಿಬಿಯ ಯಶಸ್ವಿಯಾಗಲು ಒಬ್ಬರಿಂದ ಸಾಧ್ಯವಿಲ್ಲ. ಬದಲಾಗಿ, ಟೀಂ ವರ್ಕ್. ಎಲ್ಲರೂ ಸಮಾನವಾಗಿ ಶ್ರಮವಹಿಸಿದಾಗ ಮಾತ್ರ ಕೆಲಸ ಪರಿಪೂರ್ಣವಾಗಲಿದೆ ಎಂದು ತಿಳಿಸಿದರು. ಆರೋಗ್ಯ ಶಿಬಿರಗಳು ಗ್ರಾಮೀಣ ಭಾಗದಲ್ಲಿ ಮತ್ತಷ್ಟು, ಇನ್ನಷ್ಟು ನಡೆಯಬೇಕಿದೆ. ಇಂತಹ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಮ್ಮ ಮನದಾಳ ಹಂಚಿಕೊಂಡರು.
ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಲ್ ರಮೇಶ್ ಮರಾಠೆ, ಉಪನ್ಯಾಸಕರಾದ ಬಸಪ್ಪ ಜೆ. ಪರಶುರಾಮ್, ಬಸಮ್ಮ ತಳವಾರ್ ಸೇರಿದಂತೆ ವೈದ್ಯರಾದ ಡಾ. ಕೃಷ್ಣಕುಮಾರ್ ಶೆಟ್ಟರ್, ಡಾ. ರಾಮು ಬಿ, ಮತ್ತು ಸಿಸ್ಟರ್ ಗಳಾದ ವಿಜಯಲಕ್ಷ್ಮಿ, ದುರ್ಗಶ್ರೀ ಗ್ರಾಮದಲ್ಲಿ ಶುಗರ್, ಬಿಪಿ, ತಲೆನೋವು, ಜ್ವರ, ಮೊಣಕಾಲು ನೋವು ಸೇರಿದಂತೆ ಗ್ರಾಮಸ್ಥರ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿದ್ರೆ, ಶಿಬಿರಾರ್ಥಿಗಳಾದ ಸಿದ್ದಪ್ಪ ಪೂಜಾರ್, ವೆಂಕಟೇಶ್ ಕುಕ್ಕುಬಾಯಿ ಸಂಗಮೇಶ್ ಹುನಗುಂದ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಜೀಗೆರಿಯಲ್ಲಿ ಗಜೇಂದ್ರಗಡದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪಟ್ಟಣದ ಸಾಯಿ ದತ್ತಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಜಂಟಿಯಾಗಿ ನಡೆಸಿದ ಉಚಿತ ಆರೋಗ್ಯ ತಪಾಸಣೆ ಶಿಬಿರ ಅರ್ಥಪೂರ್ಣವಾಗಿ ನಡೆದಿದ್ದು, ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
Post a Comment