ಗದಗ: (Oct_19_2025)
ಇಲ್ಲಿನ ರೋಟರಿ ಗದಗ ಸೆಂಟ್ರಲ್, ಇನ್ನರವ್ಹೀಲ್ ಕ್ಲಬ್ ಗದಗ-ಬೆಟಗೇರಿ , ಜ.ತೋಂಟದಾರ್ಯ ಇವರ ಸಂಯುಕ್ತಾಶ್ರಯದಲ್ಲಿ ತಮಿಳುನಾಡಿನ ರೋಟರಿ ಸಂಸ್ಥೆ ೩೨೧೨(ವಿರುಧನಗರ) ಪ್ರಾಯೋಜಿತ ವಿಜ್ಞಾನರಥ ಇದರ ವತಿಯಿಂದ ಜಗದ್ಗುರು ತೋಟದಾರ್ಯ ಮಠದ ಕನ್ನಡ ಮತ್ತು ಇಂಗ್ಲೀ಼ಷ ಮಾದ್ಯಮ ಪ್ರೌಢಶಾಲೆಯಲ್ಲಿ ವೈಜ್ಞಾನಿಕ ಪ್ರಯೋಗ ಪ್ರಾತ್ಯಕ್ಷಿಕೆ ಕಾರ್ಯಾಗಾರ ನಡೆಯಿತು.
ಮುಖ್ಯೋಪಾಧ್ಯಾಯ ಕೊಟ್ರೇಶ ಮೆಣಸಿನಕಾಯಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರೋಟರಿ ಗದಗ ಸೆಂಟ್ರಲ್ ಅಧ್ಯಕ್ಷ ಚೇತನ ಅಂಗಡಿ, ಖಜಾಂಚಿ ಡಾ.ಪ್ರಭು ಗಂಜಿಹಾಳ, ಚಂದ್ರಗೌಡ ಹಿರೇಗೌಡರ, ಪ್ರಕಾಶ ಉಗಲಾಟ, ಮಧುಸೂದನ ಪುಣೇಕರ ಇನ್ನರವ್ಹೀಲ್ ಕ್ಲಬ್ ಅಧ್ಯಕ್ಷೆ ಅಶ್ವಿನಿ ಜಗತಾಪ, ವೀಣಾ ಕಾವೇರಿ, ಮೀನಾಕ್ಷಿ ಕೊರವನವರ ಆಗಮಿಸಿದ್ದರು. ಸಸಿಗೆ ನೀರು ಹಾಕುವ ಮೂಲಕ ಪ್ರಯೋಗ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಲಾಯಿತು. ನಂತರ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಅನಿಲ್ ಕುಮಾರ್ ಅವರು ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರಗಳ ಮೂಲಕ ಅವರಿಂದಲೇ ಪ್ರಯೋಗಗಳನ್ನು ಮಾಡಿಸಿ ತೋರಿಸಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದಲ್ಲಿ ಆಸಕ್ತಿ ಮೂಡುವಂತೆ ಮಾಡಿದರು. ಬೆಳಕಿನ ಪ್ರತಿಫಲನ, ವಕ್ರಿಭವನ, ವಿಕಿರಣ, ಪ್ರಸರಣ ಮತ್ತು ಒಟ್ಟು ಆಂತರಿಕ ಪ್ರತಿಫಲನ ಇವುಗಳ ಕುರಿತು ವಿವರಿಸಿದರು. ಗಾಳಿಯ ಚಲನೆ,ಒತ್ತಡ, ನ್ಯೂಟನ್ ನ ಮೂರು ನಿಯಮಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ವಿವಿಧ ರಸಾಯನಿಕಗಳ ಮಿಶ್ರಣ, ರಸಾಯನಿಕ ಕ್ರಿಯೆಗಳು ಮತ್ತು ಅವುಗಳ ಪ್ರಕಾರಗಳನ್ನು ಪ್ರಾಯೋಗಿಕವಾಗಿ ಮತ್ತು ಹಲವಾರು ಪಠ್ಯಕ್ಕೆ ಸಂಬಂಧಿಸಿದಂತೆ ಪ್ರಯೋಗಗಳನ್ನು ವಿವರಣಾತ್ಮಕವಾಗಿ ಪ್ರಸ್ತುತಪಡಿಸಿದರು.
ಕಾರ್ಯಾಗಾರದಲ್ಲಿ ಎರಡುನೂರಕ್ಕೂ ಮಿಕ್ಕಿ ವಿದ್ಯಾರ್ಥಿ,ವಿದ್ಯಾರ್ಥಿನಿಯರು, ಶಿಕ್ಷಕ ಸಿಬ್ಬಂದಿವರ್ಗ, ರೋಟರಿ ಸೆಂಟ್ರಲ್ ಗದಗ ಮತ್ತು ಇನ್ನರವ್ಹೀಲ್ ಕ್ಲಬ್ ಗದಗ-ಬೆಟಗೇರಿ ಸದಸ್ಯರು,ಸದಸ್ಯೆಯರು ಪಾಲ್ಗೊಂಡಿದ್ದರು.
**
-ಡಾ.ಪ್ರಭು ಗಂಜಿಹಾಳ
ಮೊ.9448775346
Post a Comment