Gajendragad : ಜನರ ಗಮನ ಬೇರೆಡೆ ಸೆಳೆಯಲು ಆರ್.ಎಸ್.ಎಸ್ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ : RSS ಮುಖಂಡ ರಾಮಪ್ಪ ರಾಠೋಡ್
ಗಜೇಂದ್ರಗಡ :
ಕಾಂಗ್ರೆಸ್ ಸರ್ಕಾರ ಮಾಡಬೇಕಾದ ಕೆಲಸ ಬಹಳಷ್ಟಿದೆ. ಜನರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಸರ್ಕಾರ ಜನರ ಗಮನ ಬೇರೆಡೆ ಸೆಳೆಯಲು ಆರ್.ಎಸ್.ಎಸ್ ಗೆ ಸರ್ಕಾರಿ ಜಾಗದಲ್ಲಿ ಅನುಮತಿ ನಿರಾಕರಿಸುತ್ತಿದ್ದಾರೆ ಎಂದು ಆರ್.ಎಸ್.ಎಸ್ ಯುವ ಮುಖಂಡರಾದ ರಾಮಪ್ಪ ರಾಠೋಡ್ ಹೇಳಿದರು. ಕಿರಾ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಅವರು, ಆರ್.ಎಸ್.ಎಸ್ ಬಗ್ಗೆ ಹಗುರವಾಗಿ ಮಾತನಾಡಬಾರದು. ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಉತ್ತರ ಮಳೆಗೆ ತತ್ತರಿಸಿದೆ. ರಾಜ್ಯದುದ್ದಗಲಕ್ಕೂ ಅಭಿವೃದ್ಧಿ ಮರೀಚಿಕೆಯಾಗಿದೆ. ಹೀಗಿರುವಾಗ ಸರ್ಕಾರ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದೆ ಎಂದು ಹೇಳಿದರು.
ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿಗೆ ನೀಡುತ್ತಿದ್ದಾರೆ. ಉಳಿದಂತೆ ಕಾಂಗ್ರೆಸ್ ನ ಯಾವ ಮುಖಂಡರು ಈ ಬಗ್ಗೆ ಮಾತಾಡ್ತಿಲ್ಲ. ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಆರ್.ಎಸ್.ಎಸ್ ವಿಷಯವನ್ನ ತಂದಿದ್ದಾರೆ.
ಸರ್ಕಾರ ಆರ್.ಎಸ್.ಎಸ್. ಬಗ್ಗೆ ಮಾತನಾಡಿದರೇ, ಹಿಂದುಗಳೆಲ್ಲ ಒಂದಾಗಿ ಹೋರಾಟ ಮಾಡುತ್ತೇವೆ ಎಂದು ಸರ್ಕಾರವನ್ನ ಎಚ್ಚರಿಸಿದ್ದಾರೆ ರಾಮಪ್ಪ ರಾಠೋಡ್ ಅವರು. ಜೊತೆಗೆ ನಾವು ಲಾಠಿ ಹಿಡಿದು ಒಡಾಡುತ್ತೇವೆ. ಆದ್ರೆ ಸಮಾಜದಲ್ಲಿ ಶಾಂತಿ ಕದಡಲು ಅಲ್ಲ. ಬದಲಾಗಿ ಆತ್ಮ ರಕ್ಷಣೆಗಾಗಿ ಎಂದು ಸಮಜಾಯಿಸಿ ನೀಡಿದ್ದಾರೆ.
Post a Comment