2026ರ ದಿನದರ್ಶೀಕೆ ಬಿಡುಗಡೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ
ಸಂಘಗಳಿಂದ ಸಮಾಜದ ಶ್ರೇಯೋಭಿವೃದ್ಧಿ: ಸುದೀಂದ್ರ ಮಹಾಸ್ವಾಮಿಗಳು
ಬಾಗಲಕೋಟೆ : (Dec_21_2025)
ಸಂಘ ಸಂಸ್ಥೆಗಳ ಸಾಮಾಜಿಕ ಕಾರ್ಯಗಳಿಂದ ಸಮುದಾಯದ ಶ್ರೇಯೋಭಿವೃದ್ಧಿಯ ಸಾದ್ಯ ಎಂದು ನಾಲತವಾಡದ ಬ್ರಹ್ಮಾಂಡಭೇರಿ ಮಠದ ಪೂಜ್ಯರಾದ ಸುದೀಂದ್ರ ಮಹಾಸ್ವಾಮಿಗಳು ಹೇಳಿದರು. ಅವರು ವಿದ್ಯಾಗಿರಯ ಶ್ರೀ ಕಾಳಿಕಾಂಬಾದೇವಿಯ ದೇವಸ್ಥಾನದ ಸಭಾಭವನದಲ್ಲಿ ರವಿವಾರ ನಡೆದ ಬಾಗಲಕೋಟೆ ತಾಲೂಕಾ ಶ್ರೀ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ 2026ರ ದಿನದರ್ಶೀಕೆ ಬಿಡುಗಡೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ದಿನದರ್ಶಿ ಬಿಡುಗಡೆ ಮಾಡಿ ಮಾತನಾಡಿದರು. ಸಮಾಜದಲ್ಲಿ ವಿವಧ ಸಂಘ ಸಂಸ್ಥೆಗಳಂತೆ ಬಾಗಲಕೋಟೆಯ ತಾಲೂಕಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ಪ್ರತಿಭೆಗಳನ್ನು ಸಾಧಕರನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸುವುದು, ಜೊತೆಗೆ ಸಮುದಾಯದ ಧಾರ್ಮಿಕ ಪರಂಪರೆಯನ್ನು ಜಾಗೃತಿಯಿಂದ ಮುಂದುವರೆಸುವ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ, ಎಲ್ಲ ಕಾರ್ಯಗಳು ಯಶಸ್ವಿಯಾಗಲಿ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಾಗಲಕೋಟೆ ತಹಶಿಲ್ದಾರ್ ವಾಸುದೇವ್ ಸ್ವಾಮಿ ಮಾತನಾಡಿ, ಸಮುದಾಯ ಸಂಘಟನಾತ್ಮಕವಾಗಿ ಸರ್ಕಾರದ ಸೌಲಭ್ಯ ಪಡೆಯುಬೇಕು. ವಿಶ್ವಕರ್ಮ ಸಮಾಜ ಅತ್ಯಂತ ಪ್ರತಿಭಾವಂತ ಸಮಾಜವಾಗಿದ್ಧು, ಪ್ರತಿಭೆಗಳಿಗೆ ಕೊರತೆಯಿಲ್ಲ, ಇಂದು ಎಲ್ಲ ಕ್ಷೇತ್ರದಲ್ಲಿ ವಿಶ್ವಕರ್ಮ ಸಮಾಜದ ಸಾಧಕರು ಇದ್ದಾರೆ. ಅವರೆಲ್ಲರೂ ಮುಂದಿನ ಯುವಶಕ್ತಿಗೆ ಪ್ರೇರಣೆ. ವಿಶ್ವಕರ್ಮ ನೌಕರರ ಸಂಘ ಶಿಸ್ತು ಬದ್ದ ಮಾದರಿ ಸಂಘವಾಗಿದೆ ಎಂದರು.
ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ದೇವೇಂದ್ರ ಅಗಳತಕಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಂಘದಿಂದ ಸಮಾಜದ ಶ್ರೇಯೋಭಿವೃದ್ಧಿಗಾಗಿ ಹಮ್ಮಿಕೊಂಡ ಯೋಜನೆಗಳ ವಿವರಗಳನ್ನು ಸಂಘದಿಂದ ನಡೆದ ಅನೇಕ ಸಮಾಜ ಪರ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಪ್ರಸ್ತಾವಿಕವಾಗಿ ನಾಗರಾಜ ಕಮ್ಮಾರ್ ಮಾತನಾಡಿ, ಸಂಘ ನಡೆದು ಬಂದ ದಾರಿ ಮತ್ತು ಸಂಘದ ಅಡಿಯಲ್ಲಿ ನಡೆದ ಸಮಾಜಸೇವೆಗಳ ಬಗ್ಗೆ ವಿವರಿಸಿದರು.
ವಿದ್ಯಾಗಿರಿ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ವಸಂತರಾವ್ ಕಮ್ಮಾರ್, ನಗರದ ಖ್ಯಾತ ವೈಧ್ಯ ಡಾ.ಮನೋಹರ್ ಟಂಕಸಾಲಿ, ಶಿರೂರಿನ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮನೋಹರ್ ಪತ್ತಾರ್, ನಗರದ ಆರ್.ಟಿ.ಓ ಗಳಾದ ಶ್ರೀಮತಿ ಅಶ್ವಿನಿ ಬಡಿಗೇರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ
ನಿವೃತ್ತಿ ಹೊಂದಿದ ನೌಕರರಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಲಲಿತಾ ಅರ್ಕಸಾಲಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ರಜತ್ ಶಿಲ್ಪಿ ನಾಗಲಿಂಗಪ್ಪ ಗಂಗೂರ್, ಸಂಗೀತ ಕಲಾವಿದೆ ಸುಮಿತ್ರಾ ಪತ್ತಾರ್, ಮೌನೇಶ್ ಬಡಿಗೇರ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸುರೇಶ್ ಬಡಿಗೇರ್, ಹಿಂದೂಸ್ತಾನಿ ಸಂಗೀತ ಗಾಯನದ ವಿದ್ವತ್ ನಲ್ಲಿ 3ನೇ ರ್ಯಾಂಕ ಪಡೆದ ಅನುಪಮಾ ಪತ್ತಾರ್, ಡಾ.ಬೀಮಪ್ಪ ಬಡಿಗೇರ್ ಅವರಿಗೆ ಸಂಘದಿಂದ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಸವರಾಜ್ ಬರಗಿ, ಪ್ರಕಾಶ್ ಪತ್ತಾರ್, ಜಗನ್ನಾಥ್ ಪತ್ತಾರ್, ಮಹೇಶಕುಮಾರ್ ಪತ್ತಾರ್, ಎ.ಸದಾಶಿವ, ಡಾ.ಭೀಮಪ್ಪ ಬಡಿಗೇರ್, ರಘುನಾಥ್ ಕಮ್ಮಾರ್, ರಾಘವೇಂದ್ರ ಕಮ್ಮಾರ್, ಮಹಾದೇವ್ ಪತ್ತಾರ್, ಅಪ್ಪಾಸಾಬ ಬಡಿಗೇರ್, ಡಾ.ವಿಜಯಲಕ್ಷ್ಮೀ ಪತ್ತಾರ್, ಕಾಳಪ್ಪ ಬಡಿಗೇರ್, ಪ್ರಶಾಂತ್ ಕರಡಿಗುಡ್ಡ ರುಕ್ಮಣ್ಣ ಪಂಚಾಳ, ಚೈತ್ರ ವಿಶ್ವ ಬ್ರಾಹ್ಮಣ, ಮೌನೇಶ್ ವಿಶ್ವ ಬ್ರಾಹ್ಮಣ, ಸೇರಿದಂತೆ ಅನೇಕರು ಭಾಗವಹಿಸಿದ್ದರು.



Post a Comment