-->
Bookmark

Belagavi : ಏಕಾಗ್ರತೆ, ಪರಿಪೂರ್ಣ ಜೀವನಕ್ಕೆ ಯೋಗ ಒಂದೆ ಮಾರ್ಗ : ರಮ್ಯಾ & ಅಶ್ವಿನ್ ಅಭಿಮತ

Belagavi : ಏಕಾಗ್ರತೆ, ಪರಿಪೂರ್ಣ ಜೀವನಕ್ಕೆ ಯೋಗ ಒಂದೆ ಮಾರ್ಗ : ರಮ್ಯಾ & ಅಶ್ವಿನ್ ಅಭಿಮತ 

ಬೆಳಗಾವಿ : (Dec_31_2025)
ಜೀವನದಲ್ಲಿ ಏಕಾಗ್ರತೆ, ಯಶಸ್ಸು, ಪರಿಪೂರ್ಣತೆಗೆ ಯೋಗವೇ ಮಾರ್ಗ ಎಂಬ ಸಂದೇಶವನ್ನ ಬೆಳಗಾವಿಯಲ್ಲಿ ನಡೆಯುತ್ತಿರುವ ಸ್ಕೌಟ್ಸ್ & ಗೈಡ್ಸ್ ನ ಜಾಂಬೋರೇಟ್ ನಲ್ಲಿ ಸಾರಲಾಯಿತು. ಯಾಕೆ ಯೋಗ ಅಂದ್ರೆ, ಜೀವನದ ಜಂಜಾಟದಲ್ಲಿ ಮತ್ತು ವಿದ್ಯಾಭ್ಯಾಸ, ಆಟೋಟದೊಂದಿಗೆ ವಿದ್ಯಾರ್ಥಿಗಳು ಬಹಳಷ್ಟು ಗೊಂದಲದಲ್ಲಿರುತ್ತಾರೆ. ಮನಸ್ಸಿನ ಶಾಂತತೆ ಕಾಪಾಡಲು ವಿದ್ಯಾರ್ಥಿಗಳಿಗಷ್ಟೆ ಅಲ್ಲದೇ, ಎಲ್ಲರಿಯೂ ಯೋಗ ಜೀವನ ಸಿದ್ಧಿಗೆ ಮಾರ್ಗವಾಗಿದೆ. ಜಾಂಬೋರೇಟ್ ನಲ್ಲಿ ಕೂಡಿದ ಸುಮಾರು 5 ಸಾವಿರ ಮತ್ತು  ಸರಿ ಸುಮಾರು ಒಂದುವರೆ ಸಾವಿರ ಮೆಂಟರ್ ಗಳು ಒಂದೆಡೆ ಸೇರಿದ್ದರು. ಈ ವೇಳೆ, ಕೊನೆಯ ದಿನ ಮುಖ್ಯವೇದಿಕೆಯಲ್ಲಿ ಡಿಸೆಂಬರ್ 31 ರಂದು ಎಲ್ಲರಿಗೂ ಯೋಗವನ್ನ ಹೇಳಿಕೊಡಲಾಯ್ತು.
ಉತ್ತಮ ಜೀವನ ನಡೆಸಿ, ಆದರ್ಶ ವಿದ್ಯಾರ್ಥಿಗಳಾದ್ರೆ, ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತೀರಿ ಎಂದು ಯೋಗ ಗುರುಗಳಾದ ರಮ್ಯಾ ಮತ್ತು ಅಶ್ವಿನ್ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ವಿದ್ಯಾರ್ಥಿಗಳು ಯೋಗದಿಂದ ದಣಿದ ಮೈ ಮನಸ್ಸನ್ನ ಹದಮಾಡಿಕೊಂಡರು. 
ಈ ಯೋಗ ನಮಗೆ ಒಂದೆ‌ ದಿನ ಕಲಿಸದೇ, ನಮ್ಮ ದಿನನಿತ್ಯದ ಜೀವನದಲ್ಲೂ ಅಳವಡಿಸಿಕೊಳ್ಳುತ್ತೇವೆ ಎಂದು ವಿದ್ಯಾರ್ಥಿನಿಯೊಬ್ಬರು ತಮ್ಮ ಅನಿಸಿಕೆ ಹಂಚಿಕೊಂಡರು. 
ಇತ್ತ, ಯೋಗ ಗುರುಗಳಾ ರಮ್ಯಾ ಮತ್ತು ಅಶ್ವಿನ್ ಮಾತನಾಡಿ, ದಣಿವರಿಸಲು ಯೋಗ ಬಹಳ ಮುಖ್ಯ ಆಧುನಿಕರಣದ ಉಪಕರಣಗಳು ದೇಹವನ್ನ ಬಲಾಡ್ಯ ಮಾಡಬಹುದು. ಆದ್ರೆ, ಮನ್ಸನ್ನ ಹತೋಟಿಯಲ್ಲಿಟ್ಟು, ಸಮಬಲದ ಜೀವನ ನಡೆಸಲು ಯೋಗ ದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು. 
ಹಠಯೋಗ, ಕರ್ಮಯೋಗ, ಮಂತ್ರಯೋಗ, ಭಕ್ತಿಯೋಗ, ಜ್ಞಾನ ಯೋಗ, ರಾಜ ಯೋಗ ಹೀಗೆ ಯೋಗದ ವಿಧಾನಗಳನ್ನ ವಿವರಿಸಿದರು. 
ಮಧುಮೇಹ, ರಕ್ತದೊತ್ತಡ, ಧಡುತಿ ದೇಹ ಸೇರಿದಂತೆ ಎಲ್ಲರಿಗೂ ಮನೆ ಮದ್ದು ಈ ಯೋಗ. ಪ್ರತಿ ದಿನವೂ ಯೋಗ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಇದೆಲ್ಲವನ್ನ ಯೋಗ ಪ್ರಾಣ ವಿದ್ಯಾಸಾಧನ ಯೋಗ ಗುರುಗುರುಗಳು ರಮ್ಯಾ ಮತ್ತು ಅಶ್ವಿನ್ ಆಗಿದ್ದಾರೆ. ಈ ಇಬ್ಬರು ಯೋಗದಲ್ಲಿ ಪ್ರಾವಿಣ್ಯತೆಯನ್ನ ಹೊಂದಿದ್ದು ಹಲವಾರು ವರ್ಷಗಳಿಂದ ಯೋಗವನ್ನ ಕಲಿಸುತ್ತಾ ಬಂದಿದ್ದಾರೆ. 
ಈ ಯೋಗದಿಂದ ಮಕ್ಕಳಿಗೆ ಅನುಕೂಲವಾಗಿದೆ. ವಿದ್ಯಾರ್ಥಿಗಳಿಗೆ ಯೋಗವನ್ನ ಕಲಿದಿ ಕೊಟ್ಟ ಯೋಗ ಪ್ರಾಣ ವಿದ್ಯಾಸಾಧನದ ಯೋಗ ಗುರುಗಳಿಗೆ ಸ್ಕೌಟ್ಸ್ & ಗೈಡ್ಸ್ ರಾಜ್ಯ ಮುಖ್ಯಾಯುಕ್ತರಾದ ಪಿ.ಜಿ. ಸಿಂಧ್ಯ ಅವರು ಧನ್ಯವಾದ ತಿಳಿಸಿದ್ದಾರೆ. 

ವರದಿ 
ಚೈತ್ರ & ಮೌನೇಶ್ ವಿಶ್ವಬ್ರಾಹ್ಮಣ
Post a Comment

Post a Comment