ಗಜೇಂದ್ರಗಡ: (DEC_23_2025)
ಮರ್ಹೂಮ್ ಯು.ಟಿ.ಫರೀಧ್ ಸ್ಮರಣಾರ್ಥ ವಾಗಿ ನೀಡುವ ೨೦೨೪. ನೇ ಸಾಲಿನ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಪ್ರಧಾನ ಹಾಗೂ ಕನ್ನಡ ಮತ್ತು ಉರ್ದು ಕವಿಗೋಷ್ಟಿ ಸಮಾರಂಭವು ಡಿ.27 ಶನಿವಾರ ಬೆಳ್ಳಿಗ್ಗೆ 10:30 ಗಂಟೆಗೆ ನಗರದ ಶ್ರೀ ಜಗದ್ಗುರು ತೋಂಟದಾರ್ಯ ಸಿ.ಬಿ.ಎಸ್.ಸಿ ಶಾಲಾ ಅವರಣದಲ್ಲಿ ನಡೆಯಲಿದ್ದು ಈ ಸಮಾರಂಭಕ್ಕೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ್, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ, ಶಾಸಕರಾದ ಜಿ.ಎಸ್.ಪಾಟೀಲ್, ಯಾಸೀರ್ ಅಹ್ಮದ ಖಾನ್ ಪಠಾಣ್ ಆಗಮಿಸಲಿದ್ದು ಜೈಲ್ ಡೈರಿ ಕೃತಿಯ ಪ್ರಶಸ್ತಿ ಪುರಸ್ಕೃತರಾದ ಡಾ.ಐ.ಜೆ.ಮ್ಯಾಗೇರಿ, ಎ.ಎಸ್.ಮಕಾನದಾರ, ಡಾ.ಹಸೀನಾ ಖಾದ್ರಿ, ಶಿಲ್ಪಾ ಮ್ಯಾಗೇರಿ, ಮೊಹಮ್ಮದ್ ಅರ್ಶದ ಹಿರೇಹಾಳ, ಮುರ್ತುಜಾಬೇಗಂ ಕೊಡಗಲಿ, ಅನ್ವರ ಅಹ್ಮದ ವಣಗೇರಿ, ಖಾಝಿ ಶಬ್ಬಿರ ಅಹ್ಮದ ಶಬ್ಬೀರ ಮನ್ಸೂರಿ, ಮುಸ್ಲಿಂ ಲೇಖಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ.ಮಹಮ್ಮದ್ ಅಲಿ, ಸೇರಿದಂತೆ ನಾಡಿನ ಹೆಸರಾಂತ ಸಾಹಿತಿಗಳು, ಚಿಂತಕರು ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.



Post a Comment