-->
Bookmark

Gulbarga : ಗುಲ್ಬರ್ಗ ವಿವಿ : ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್

ಗುಲ್ಬರ್ಗ ವಿವಿ : ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ 

ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಕಲಬುರಗಿಯ ಶಿಲ್ಪಕಲಾವಿದರೂ, ಅಯೋಧ್ಯೆ ರಾಮಮಂದಿರ ಮೂರ್ತಿ ಪ್ರತಿಷ್ಠಾಪನೆ ಸಲಹಾ ಸಮಿತಿ ಸದಸ್ಯ ಮಾನಯ್ಯ ಬಡಿಗೇರ, ಬೀದರ್ ಜಿಲ್ಲೆಯ ಶಿಕ್ಷಣ ತಜ್ಞ ತಾತ್ಯಾರಾವ್‌ ಕಾಂಬಳೆ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಡಿ.ಎನ್. ಅವರು ಗೌರವ ಡಾಕ್ಟರೇಟ್ ಸ್ವೀಕರಿಸಿದರು.

ಸಮ ಕುಲಪತಿಯೂ ಆದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಕುಲಪತಿ ಪ್ರೊ. ದಯಾನಂದ ಅಗಸರ, ಕುಲಸಚಿವ ಶರಣಪ್ಪ ಸತ್ಯಂಪೇಟೆ, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ ವೇದಿಕೆಯಲ್ಲಿದ್ದಾರೆ.
Post a Comment

Post a Comment