-->
Bookmark

AFP - ಸುದ್ದಿಬ್ಯೂಟಿ ಪಾರ್ಲರ್ ಮುಚ್ಚಲು ಆದೇಶ - ಭಾವ ಚಿತ್ರಕ್ಕೆ ಮಸಿ

AFP - ಸುದ್ದಿ

ಬ್ಯೂಟಿ ಪಾರ್ಲರ್ ಮುಚ್ಚಲು ಆದೇಶ - ಭಾವ ಚಿತ್ರಕ್ಕೆ ಮಸಿ 

ಅಫ್ಗಾನಿಸ್ತಾನದಲ್ಲಿರುವ ಬ್ಯೂಟಿ ಪಾರ್ಲ‌್ರಗಳನ್ನು ಒಂದು ತಿಂಗಳೊಳಗೆ ಮುಚ್ಚುವಂತೆ ಅಫ್ಘಾನಿಸ್ತಾನದ ತಾಲಿಬಾನ್ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಉಪಸಚಿವಾಲಯ ಮಂಗಳವಾರ ದೃಢಪಡಿಸಿದೆ.

ಇದರಿಂದ ಮಹಿಳೆಯರ ಹಕ್ಕುಗಳನ್ನ ಕಸಿದುಕೊಳ್ಳುವಂತಾಗಿದೆ. 'ತಮ್ಮ ಬಳಿ ಇರುವ ಎಲ್ಲಾ ಉತ್ಪನ್ನಗಳನ್ನು ಖಾಲಿ ಮಾಡಿಕೊಳ್ಳಲು ಪಾರ್ಲರ್ನವರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ.

ಇದರಿಂದ ಆ ಮಹಿಳೆಯರಿಗೂ ನಷ್ಟ ಆಗುವುದಿಲ್ಲ. ಎಲ್ಲಾ ಪಾರ್ಲರ್ ಮುಚ್ಚಿದ ನಂತರ ಮಾಧ್ಯಮದೊಂದಿಗೆ ಇದರ ಕಾರಣ ಹಂಚಿಕೊಳ್ಳುತ್ತೇವೆ' ಎಂದು ಸಚಿವಾಲಯದ ವಕ್ತಾರ ಮೊಹಮ್ಮದ್ ಸಾದೇಕ್ ಅಕಿಫ್ ಮುಹಾಜಿರ್ ಹೇಳಿದ್ದಾರೆ.

ಅಮೆರಿಕ ನೇತೃತ್ವದ ಪಡೆಗಳು ದೇಶವನ್ನು ಆಕ್ರಮಿಸಿಕೊಂಡ 20 ವರ್ಷಗಳಲ್ಲಿ ಕಾಬೂಲ್ ಮತ್ತು ಇತರ ನಗರಗಳಲ್ಲಿ ಬ್ಯೂಟಿ ಪಾರ್ಲ‌್ರಗಳು ಅಣಬೆಗಳಂತೆ ಹುಟ್ಟಿಕೊಂಡಿದ್ದವು. ಮಹಿಳೆಯರಿಗೆ ಪುರುಷರಿಂದ ದೂರವಿರುವ ಮತ್ತು ಸಾರ್ವಜನಿಕವಾಗಿ ಬೆರೆಯಲು ಇದೊಂದು ಸುರಕ್ಷಿತ ಸ್ಥಳವಾಗಿತ್ತು.

ಆಗಸ್ಟ್ 2021ರಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ, ತಾಲಿಬಾನ್ ಸರ್ಕಾರವು ಯುವತಿಯರು ಮತ್ತು ಮಹಿಳೆಯರಿಗೆ ಪ್ರೌಢಶಾಲೆ, ವಿಶ್ವವಿದ್ಯಾಲಯ, ಉದ್ಯಾನವನ, ಫನ್‌ಫೇರ್ ಮತ್ತು ಜಿಮ್‌ಗಳ ಪ್ರವೇಶವನ್ನು ನಿಷೇಧಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಲಿಬಾನಿಗಳು ಮತ್ತೊಮ್ಮೆ ಬೆತ್ತಲಾಗಿದೆ. ತಾವು ಮಾಡಿದ ಕಾನೂನು ಸರಿ ಎಂದುಕೊಂಡಿರುವ ಬಂಡುಕೊರರು, ಮಹಿಳೆಯರಿಗೆ ಆದ್ಯತೆ ನೀಡದಿರುವುದು, ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ನಿರ್ದಾರ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ. 
Post a Comment

Post a Comment