-->
Bookmark

Gagad : ಈದಿನ.ಕಾಮ್ ಸಂವಾದ ಕಾರ್ಯಕ್ರಮ : ಶರಣಪ್ಪ ಸಂಗನಾಳ್ ಮಾಹಿತಿ

Gagad : 
ಈದಿನ.ಕಾಮ್ ಸಂವಾದ ಕಾರ್ಯಕ್ರಮ : ಶರಣಪ್ಪ ಸಂಗನಾಳ ಮಾಹಿತಿ 

ಜನಸಾಮಾನ್ಯರ ಧ್ವನಿಯಾಗಿರುವ ಈದಿನ.ಕಾಮ್ ಮಾಧ್ಯಮವು ಇದೇ ಜುಲೈ 22 ರಂದು ಗಜೇಂದ್ರಗಡ ಪಟ್ಟಣದಲ್ಲಿ ಬೆಳೆಗ್ಗೆ 10ಕ್ಕೆ ಈದಿನ.ಕಾಮ್ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶರಣಪ್ಪ ಎಚ್ ಸಂಗನಾಳ ಹೇಳಿದರು.
ಗದಗ ಪಟ್ಟಣದ ಪತ್ರಿಕಾಗೋಷ್ಟಿಯಲ್ಲಿ ಈದಿನ.ಕಾಮ್ ಗದಗ ಜಿಲ್ಲಾ ವರದಿಗಾರರು ಶರಣಪ್ಪ ಎಚ್ ಸಂಗನಾಳ ಮಾತನಾಡಿ, "ಜನಸಾಮಾನ್ಯರ ಮಾಧ್ಯಮ ಎಂದು ಇಡೀ ರಾಜ್ಯದಾದ್ಯಂತ ಗುರುತಿಸಿಕೊಂಡ ಈದಿನ.ಕಾಮ್ ಮಾಧ್ಯಮವು ಇದೇ ಜುಲೈ 22ರಂದು ಗಜೇಂದ್ರಗಡ ಪಟ್ಟಣದ ಸೇವಲಾಲ್ ಸಮುದಾಯ ಭವನದಲ್ಲಿ ಬೆಳೆಗ್ಗೆ 10ಕ್ಕೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲ್ಲಾಗಿದೆ. 

ಸಂವಾದದಲ್ಲಿ ಮೂರು ವಿಷಯಗಳ ಕುರಿತು ಸಂವಾದ ನಡೆಯಲಿದೆ.  ದೇಶದಲ್ಲೇ ಅತ್ಯಂತ ನಿಖರ ಚುನಾವಣಾ ಸಮೀಕ್ಷೆ ಮಾಡಿದ್ದು ಹೇಗೆ?, ಜನಾಂದೋಲನಗಳೇ ಸೇರಿ ಮಾಧ್ಯಮ ರೂಪಿಸಿದರೆ ಇರುವ ಅನುಕೂಲವೇನು?, ಹೊಸ ಸರ್ಕಾರದ ಮುಂದೆ ಮಾಧ್ಯಮ-ಜನರು ಸೇರಿ ಮುಂದಿಡಬೇಕಾದ ಒತ್ತಾಯಗಳೇನು? ಎಂಬ ವಿಷಯಗಳ ಕುರಿತು ಈದಿನ.ಕಾಮ್ ಮಾಧ್ಯಮದ ಮುಖ್ಯಸ್ಥರು ಡಾ. ವಾಸು ಎಚ್ ವಿ ಅವರು ವಿಷಯ ಮಂಡನೆ ಮಾಡಲಿದ್ದಾರೆ

 ಸಾಹಿತಿಗಳು ಬಿ. ಎ. ಕೆಂಚರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ.  ಹಿರಿಯ ಪತ್ರಕರ್ತರು ರವೀಂದ್ರ ಹೊನವಾಡ, ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾದ್ಯಕ್ಷರು ಮುತ್ತನಗೌಡ ಚೌಡರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಕೀಲರು ಸಂಘಟಕರು  ಎಮ್ ಎಸ್ ಹಡಪದ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರು ಶರಣು‌ ಪೂಜಾರ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಎಚ್ ಎಸ್ ಸೊಂಪುರ ವೇದಿಕೆಯಲ್ಲಿ ಉಪಸ್ಥಿತರಿರುವರು.

ನಿಮ್ಮದೇ ಈದಿನ.ಕಾಮ್ ಮಾಧ್ಯಮದ ಸಂವಾದ ಕಾರ್ಯಕ್ರಮಕ್ಕೆ  ನೀವು ನಿಮ್ಮ ಸ್ನೇಹ ಬಳವನ್ನು ಕರೆತನ್ನಿ, ಯಶಸ್ವಿಗೊಳಿಸಿ.
Post a Comment

Post a Comment