-->
Bookmark

Gajendragad : ಬಡ ವಿರೋಧಿ ನೀತಿಗೆ ವಿರೋಧ : ಆಗಷ್ಟ್ ೧೪ರಂದು ಅಹೋರಾತ್ರಿ ಕಾರ್ಯಕ್ರಮ - ಬಾಲು ರಾಠೋಡ್Gajendragad : 

ಬಡ ವಿರೋಧಿ ನೀತಿಗೆ ವಿರೋಧ : ಆಗಷ್ಟ್ ೧೪ರಂದು ಅಹೋರಾತ್ರಿ ಕಾರ್ಯಕ್ರಮ - ಬಾಲು ರಾಠೋಡ್        

ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ.. ರೈತ ಕಾರ್ಮಿಕ ಕೂಲಿಕಾರರ ಹಕ್ಕುಗಳ ಉಳವಿಗಾಗಿ... 14 ಆಗಷ್ಟ 2023 ರಂದು ಸಂಜೆ 5.30ಕ್ಕೆ ಕೆಕೆ ಸರ್ಕಲ್ ಹತ್ತಿರ ಗಜೇಂದ್ರಗಡದಲ್ಲಿ ಆಹೋರಾತ್ರಿ ಕಾರ್ಯಕ್ರಮ ನಡೆಸಲಾಗುವದು  ಎಂದು ಕೃಷಿ ಕೂಲಿಕಾರರ ಜಿಲ್ಲಾ ಮುಖಂಡರಾದ ಬಾಲು ರಾಠೋಡ ಮಾತನಾಡಿದರು. ಭಾರತ ವಿಶಾಲ ಜನ ಸಮೂಹಗಳ ಸಮರೋಚಿತ ಹೋರಾಟಗಳಿಂದ ಮತ್ತು ಅಪಾರ ತ್ಯಾಗ ಬಲಿದಾನಗಳಿಂದ ನಾವು ಸ್ವಾತಂತ್ರ್ಯ ಪಡೆದಿದ್ದೇವೆ. ಸ್ವಾತಂತ್ರ್ಯವೆಂದರೆ ಅದು ಕೇವಲ ಬಾವುಟಗಳ ಬದಲಾವಣೆಯಲ್ಲ. ಕೇವಲ ಆಳುವರ ಬದಲಾವಣೆಯಲ್ಲ. ದೇಶದ ಎಲ್ಲ ಜನರಿಗೆ ಭೂಮಿ, ಆಹಾರ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ನ್ಯಾಯವಾದ ಕೂಲಿ ಹಕ್ಕು, ಎಲ್ಲರಿಗೂ ಸಮಾನ ಅವಕಾಶ ಸೃಷ್ಟಿ ಯಾಗಬೇುಕು. ಸ್ವಾತಂತ್ರ್ಯ ಎಂದರೆ ಹೋಸದೊಂದು ಬದುಕಿನ ನಿರೀಕ್ಷೆ. ಬಡತನ ಮತ್ತು ಶೋಚನಿಯ ಪರಿಸ್ಥಿತಿಗಳ ಮುಕ್ತಾಯ ಮಾತ್ರವಲ್ಲದೆ, ಜಾತಿವಾದ ಮತ್ತು ಕೋಮುವಾದ ಮಹಿಳೆಯರ ಮೇಲಿನ ಕ್ರೌರ್ಯದಂತ ಸಾಮಾಜಿಕ ಅನಿಷ್ಠಗಳಿಂದ ವಿಮುಕ್ತಿ ಹಾಗೂ ಪ್ರಜಾಸತ್ತಾತ್ಮಕ ಪರಿಸರದಲ್ಲಿ ಜನಗಳ ಸಾಂಸ್ಕೃತಿಕ ಅಗತ್ಯಗಳು ಇಡೆರಬೇಕು. ಆದರೆ ಇಂದು ದೇಶದಲ್ಲಿ ಆಳುವ ವರ್ಗದ ಆಡಳಿತದಿಂದ ಜನತೆಗೆ, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಬಿಕ್ಕಟ್ಟಿಗೆ ಸಿಲುಕಿ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಎಲ್ಲಾ ಸಾರ್ವಜನಿಕ ವಲಯಗಳಲ್ಲಿ  ಖಾಸಗಿಕರಣ ಮಾರಾಟದಿಂದ ಯುವಕರಿಗೆ ದೇಶದ ಜನತೆಗೆ ಯಾವದೆ ಬದ್ರತೆಯಿಲ್ಲದ ರೀತಿಯ ಶೋಷಣೆಯಪರಿಸ್ಥಿಗೆ ಕೇಂದ್ರ ಸರ್ಕಾರದ ನೀತಿಗಳೆ ಕಾರಣವಾಗಿದೆ. ಈ ಕೆಟ್ಟ ನೀತಿಯೂ ದುಡಿಯುವ, ಬಡವರ ಕಾರ್ಮಿಕರ ವಿರೋಧಿ, ಬಿಜೆಪಿ ಬಂಡವಾಳ ಶಾಹಿ ವರ್ಗದ ಪರವಾದ ನೀತಿಗೆ ದಿಕ್ಕರಿಸೋಣ‌. ಮತ್ತು ಆಗಷ್ಟ 14ರ ಆಹೋರಾತ್ರಿ ಧ್ವಜಾರೋಹಣ ಆಚರಿಸಲು ತಾಲೂಕಿನ ಅಂಗನವಾಡಿ, ಬಿಸಿಊಟ ನೌಕರರು, ಗ್ರಾಮ ಪಂಚಾಯತಿ ನೌಕರರು, ಕಟ್ಟಡ ಕಾರ್ಮಿಕರು, ಕೂಲಿಕಾರರು ರೈತರು, ದೇವದಾಸಿ ಮಹಿಳೆಯರು, ಮಕ್ಕಳು, ಮಸಣ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ತರು, ಬಗರ ಹುಕುಂ ಸಾಗುವಳಿ ರೈತರು, ಜಂಟಿಯಾಗಿ ಕರೆ ನೀಡಿವೆ. ತಾಲೂಕಿನಲ್ಲಿ ಆಹೋರಾತ್ರಿ ಸ್ವಾತಂತ್ರ್ಯ ದಿನಾಚಾರಣೆಯನ್ನು ಆಚರಿಸಲು ಜನತೆಯ ಹೋರಾಟವನ್ನು ಮುನ್ನಡೆಸಲು ಪಣತೊಡಲು ನಾವೆಲ್ಲ ಮುಂದಾಗೋಣ ಎಂದು ಕರೆನೀಡಲಾಗಿದೆ. ಎಲ್ಲರು ಹೇಚ್ಚಿನ ಸಂಖ್ಯೆಲ್ಲಿ ಭಾಗವಹಿಸಿ ಎಂದು ದೇವದಾಸಿ ಮಹಿಳೆಯರ ಹಕ್ಕುಗಳ ಹೋರಾಟಗಾರ ಬಾಲು ರಾಠೋಡ ಹೇಳಿದ್ದಾರೆ. 
Post a Comment

Post a Comment