-->
Bookmark

Gajendragad : ಮಕ್ಕಳ ಪ್ರತಿಭೆ ಅನಾವರಣಕ್ಕೆ ಸರ್ಕಾರದಿಂದ ಇಂತಹ ಕಾರ್ಯಕ್ರಮ ಆಯೋಜನೆ : ಶಾಸಕ ಜಿ.ಎಸ್. ಪಾಟೀಲ್

Gajendragad : ಮಕ್ಕಳ ಪ್ರತಿಭೆ ಅನಾವರಣಕ್ಕೆ ಸರ್ಕಾರದಿಂದ ಇಂತಹ ಕಾರ್ಯಕ್ರಮ ಆಯೋಜನೆ : ಶಾಸಕ ಜಿ.ಎಸ್. ಪಾಟೀಲ್ 
ಗಜೇಂದ್ರಗಡ : (Dec_10_2023)

ಮಕ್ಕಳ ಪ್ರತಿಭೆ ಅನಾವರಣ ಗೊಳಿಸಲು ಸರ್ಕಾರ ಇಂತಹ ಕಾರ್ಯಕ್ರಮ ಜಾರಿಗೆ ತಂದಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗೆ ಅನುಕೂಲವಾಗಲಿದೆ ಎಂದು ಶಾಸಕ ಜಿ.ಎಸ್ ಪಾಟೀಲ್ ಅಭಿಪ್ರಾಯ ಪಟ್ಟರು. 
ಗದಗ ಜಿಲ್ಲೆ ಇಟಗಿ ಗ್ರಾಮದಲ್ಲಿ ನಡೆದ ಪುಸ್ತಕ ಲೋಕಾರ್ಪಣೆ  ಮತ್ತು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನಕ್ಕೆ ಸಂಬಂಧಿಸಿದ ಒಉಸ್ತಕ ಇದಾಗಿದ್ದು, ಕಣ್ಣು, ಕಿವಿ ಸೇರಿದಂತೆ ಪ್ರಕೃತಿಯಲ್ಲಿ ಲಭ್ಯ ವಿರುವ ಹಲವು ವಿಸ್ಮಯಗಳು ಈ ಪುಸ್ತಕದಲ್ಲಿವೆ. ಇದು ವಿದ್ಯಾರ್ಥಿಗಳಿಗೆ ಮತ್ತು ಪಾಲಕ, ಪೋಷಕರಿಗೆ ಹಲವು ಮಾಹಿತಿಯನ್ನ ನೀಡಲಿದೆ ಎಂದು ಶಾಸಕ ಜಿ.ಎಸ್.‌ ಪಾಟೀಲ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಮತ್ತು ಜೀವ ದ್ಯುತಿ ಪುಸ್ತಕದ ಬರೆದಿರುವ ಬಗ್ಗೆ ಐ.ಎಸ್. ಮಾದರ್ ಮಾತನಾಡಿ, ಪುಸ್ತಕ ರಚನೆ ಅಷ್ಟು ಸುಲಭವಾಗಿರಲಿಲ್ಲ. ಮುಂದಿನ ಪೀಳಿಗೆಗೆ ಅಗತ್ಯ ವಿರುವ ಹಲವು ವಿಷಯಗಳು ಇದರಲ್ಲಿ ಅಡಗಿವೆ ಎಂದು ತಿಳಿಸಿದರು. 
ಇನ್ನೂ, ಶಿಕ್ಷಕರಾದ ಅಬ್ದುಲ್ ಕರಿಮ್ ಒಂಟಿ ಮಾತನಾಡಿ, ಸಾಹಿತ್ಯ ನಿಂತ ನೀರಾಗಿಲ್ಲ‌. ಅದು ಸದಾ ಚಲಿಸುತ್ತಿದೆ. ಹೀಗಾಗಿ, ಅದರ ಪ್ಯಾಪ್ತಿ ವ್ಯಾಪಿಸುತ್ತಿದೆ ಎಂದು ಹೇಳಿದರು. 
ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹ ಅದ್ದೂರಿಯಾಗಿ ನಡೆಯಿತು. ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಅವರ ಆಸಕ್ತಿಯಾನುಸಾರ, ಅಭಿರುಚಿಗೆ ತಕ್ಕಂತೆ ಜೀವನ ಆಯ್ಕೆಗಳು ನಡೆಯಲಿ ಎಂದು ಹಲವರು ತಮ್ಮ ಅಭಿಪ್ರಾಯ ತಿಳಿಸಿದರು. 
ಕಾರ್ಯಕ್ರಮದಲ್ಲಿ  ಗದಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಶಾಧ್ಯಕ್ಷರಾದ ಎ.ಕೆ ಒಂಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹೇಶ್ ಕುರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಶ್ರೀಮತಿ ಬಿ.ಎನ್. ಕ್ಯಾತನಗೌಡರ್, ಶಾಲಾ ಶಿಕ್ಷಕರ ಸಂಘದ ರೋಣ ತಾಲೂಕು ಕಾರ್ಯದರ್ಶಿ ಸಿ‌.ಕೆ ಕೇಸರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗಜೇಂದ್ರಗಡ ತಾಲೂಕು ಕಾರ್ಯದರ್ಶಿಗಳಾದ ಎಸ್.ಕೆ ಸರಗಣಾಚಾರಿ, ಪ್ರಥಮಿಕ ಶಾಲಾ ಶಿಕ್ಷಕರ ಸಂಘದ ಗಜೇಂದ್ರಗಡ ತಾಲೂಕಾಧ್ಯಕ್ಷ ವಿ.ಎ ಹಾದಿಮನಿ, ಪ್ರಥಮಿಕ ಶಾಲಾ ಶಿಕ್ಷಕರ ಸಂಘದ ರೋಣ ತಾಲೂಕಾಧ್ಯಕ್ಷ ವೈ.ಡಿ ಗಾಣಗೇರ್, ಬಿಇಒ ಆರ್. ಎನ್. ಹುಳ್ಳಿ, ಬಿಆರ್ ಸಿ, ಸಮನ್ವಯಾಧಿಕಾರಿ ಪಣಿಬಂಧ, ಅಕ್ಷರ ದಾಸೋಹ ಅಧಿಕಾರಿ ಬಸವರಾಜ್ ಅಂಗಡಿ, ಸಿ.ಆರ್.ಪಿ ಗಳಾದ ಆರ್ ಜಿ. ಮ್ಯಾಕಲ್, ಶ್ರೀಧರ್ ಯಂಕಂಚಿ, ವಿ.ಆರ್. ವನ್ನಾಲ್, ಆರ್. ಎಸ್. ಅಂಬೋರೆ ಗಜೇಂದ್ರಗಡ ಮತ್ತು ರೋಣ ತಾಲೂಕಿನ ಎಲ್ಲ ಸಿ.ಆರ್.ಪಿಗಳು ಲ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು, ಪೋಷಕರು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಎಂ.ಎ ಫಣಿಬಂದ ಸ್ವಾಗತಿಸಿದ್ರೆ, ಆರ್. ಎನ್. ಹುಳ್ಳಿ ಪ್ರಸ್ತಾವಿಕ ನುಡಿಗಳನ್ನಾಡಿದರು.
Post a Comment

Post a Comment