-->
Bookmark

Gajendragad : ದ್ವಿತೀಯ ಪಿಯು ಪ್ರಾಂಜಲಿ ಶೇಕಡಾ 87% : ವಿದ್ಯಾರ್ಥಿನಿ ಸಾಧನೆಗೆ ಪ್ರಿನ್ಸಿಪಲ್ ರಾವ್ ಮೆಚ್ಚುಗೆ

gajendragad : ದ್ವಿತೀಯ ಪಿಯು ಪ್ರಾಂಜಲಿ ಶೇಕಡಾ 87% : ವಿದ್ಯಾರ್ಥಿನಿ ಸಾಧನೆಗೆ ಪ್ರಿನ್ಸಿಪಲ್ ರಾವ್ ಮೆಚ್ಚುಗೆ 
ಗಜೇಂದ್ರಗಡ : (Aprl_10_2024)
ಪ್ರಾಂಜಲಿ ತಿರುಪತಿ ಕಮತರ್ ದ್ವಿತೀಯ ಪಿಯುಸಿ ವಿಜ್ಞಾನವಿಭಾಗದಲ್ಲಿ ಶೇಕಡಾ 87 ಪ್ರತಿಶತ ಮಾಡಿದ್ದಾರೆ. ಮಗಳ ಸಾಧನೆಗೆ ತಂದೆ ತಿರುಪತಿ ಕಮತರ್ ಮತ್ತು ಶ್ರೀಮತಿ ರೇಣುಕಾ ತಿರುಪತಿ ಕಮತರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. 

ದ್ವಿತೀಯ ಪಿಯುಸಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಶ್ರೀರಾಮನಗರದಲ್ಲಿರುವ ಶ್ರೀ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಾಂಜಲಿ ಉತ್ತಮ ಅಂಕಗಳನ್ನ ಪಡೆದಿದ್ದಾರೆ. ವಿದ್ಯಾರ್ಥಿನಿ ಪ್ರಾಂಜಲಿ ಸಾಧನೆಗೆ ವಿದ್ಯಾನಿಕೇತನ ಕಾಲೇಜಿನ ಪ್ರಿನ್ಸಿಪಲ್ ಜಗನ್ನಾದ ರಾವ್ ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯೂ ಶ್ರಮ ಪಟ್ಟಿದ್ದಾರೆ ಎಂದು ಸಂತಸವನ್ನ ಕಿರಾ ನ್ಯೂಸ್ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ. 
ಇನ್ನೂ, ವಿದ್ಯಾರ್ಥಿನಿ ಮಾತನಾಡಿ, ಕಾಲೇನಿನಲ್ಲಿ ಲಕ್ಚರರ್ ಎಲ್ಲರೂ ಅತ್ತ್ಯುತ್ತಮವಾಗಿ ಕಲಿಸುತ್ತಾರೆ. ಎಲ್ಲ ಮಕ್ಕಳಿಗೂ ಆಧುನಿಕ ತಂತ್ರಜ್ಞಾನ ಬಳಸಿ ಕ್ಲಾಸಸ್ ಹೇಳುವುದು ಮತ್ತು ಮನೆಯಲ್ಲಿ ಕಲಿಯುವ ವಾತಾವರಣ ಇದೆ ಎಂದು ವಿದ್ಯಾರ್ಥಿನಿ ಕಿರಾ ನ್ಯೂಸ್ ಕನ್ನಡಕ್ಕೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. 

ಮುಂಬರುವ ದಿನಗಳಲ್ಲಿ ವಿದ್ಯಾರ್ಥಿನಿ ಇಂಜಿನಿಯರ್ ಆಗುವ ಕನಸಿದೆ ಎಂದು ತಮ್ಮ ಮನದಾಳವನ್ನ ಹಂಚಿಕೊಂಡಿದ್ದಾರೆ. ಪಿಸಿಎಂಬಿಯ ಶೇಕಡಾವಾರು ನೋಡುವುದಾದರೇ, ಶೇಕಡಾ 90% ಆಗಲಿದೆ.
Post a Comment

Post a Comment