-->
Bookmark

Gajendragad :ಹೋರಾಟಕ್ಕೆ "ಅಣಿ"ಯಾಗುವ ಕಾಲ...?

Gajendragad :ಹೋರಾಟಕ್ಕೆ "ಅಣಿ"ಯಾಗುವ ಕಾಲ...?

ಗಜೇಂದ್ರಗಡ : (Aug_03_2024) 

ಬ್ರಿಟಿಷರು ಈ ಹೊತ್ತು ಭಾರತದ ಮೇಲೆ ದಾಳಿ ಮಾಡಿದ್ರೆ, ನಾವು ಹೋರಾಟಕ್ಕೆ ಮುಂದಾಗುತ್ತಿದ್ವಾ?
ಈ ಪ್ರಶ್ನೆ ಯಾಕೆ ಅಂದ್ರೆ, ನಮ್ಮ ಸುತ್ತ ಮುತ್ತ ಹಲವಾರು ತಪ್ಪುಗಳು ನಿತ್ಯವೂ ಸಂಭವಿಸುತ್ತಿವೆ.  ಅವುಗಳು ಕಣ್ಮುಂದೆ ಕಂಡ್ರು, ನಮಗೆ ಸಂಬಂಧಿಸಿದ್ದಲ್ಲ ಎಂಬ ಮನೋಭಾವ ಸಮಾಜದಲ್ಲಿ ಬಳ್ಳಿಯಂತೆ ಬೆಳೆದು ನಿಂತಿದೆ.
ಇದೆಲ್ಲ ಪೂರ್ವ ಪೀಠಿಕೆ ಹಾಕಲು ಕಾರಣವಿದೆ : ಇತ್ತೀಚೆಗೆ ಗಜೇಂದ್ರಗಡದಲ್ಲಿ ಕನ್ನಡಾಂಬೆಯ ಧ್ವಜದ ಮೇಲೆ ಕೇಕ್ ಕತ್ತರಿಸಿದ ಘಟನೆ ನಡೆಯಿತು. ಕನ್ನಡ ನಾಡು, ನುಡಿಯ ಬಗೆಗೆ ಅಭಿಮಾನ ಇರುವ ಯಾರೂ ಹೀಗೆ ಮಾಡಲಾರರು. ಇಂಥ ತಪ್ಪುಗಳನ್ನು ವಿರೋಧಿಸಲು ಮುಂದಾಗಬೇಕಾದ ಕನ್ನಡ ಪರ ಸಂಘಟನೆಗಳು ಧ್ವನಿ ಅಡಗಿಸಿಕೊಂಡು ಹೊಂದಾಣಿಕೆ ಮಾಡಿಕೊಂಡಿವೆಯೇನೋ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಇತ್ತ, ಕನ್ನಡ ಧ್ವಜದ ಮೇಲೆ ಕೇಕ್ ಕತ್ತರಿಸಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡ ವ್ಯಕ್ತಿಯ ವಿಡಿಯೋ ಸಂದೇಶ ನೋಡಿದರೇ, ಕನ್ನಡ ನಾಡು, ಅದರ ಘನತೆಯನ್ನು ಲಘುವಾಗಿ ಪರಿಗಣಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. 
ಹುಟ್ಟು ಹೋರಾಟಗಾರನಂತೆ ಸಿನಿಮಿಯ ರೀತಿಯಲ್ಲಿ ಫೋಸು ಕೊಟ್ಟ ಪುಡಿ ರೌಡಿಯಂತೆ ವರ್ತನೆಯನ್ನ ವಿರೋಧಿಸಲಾಗದ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಸಮಾಜವಿದೆ. ನಾಡಿಗೆ ಅಗೌರವ ತೋರುವ ಜನ ಮತ್ತು ಅದಕ್ಕೆ ವಿರೋಧ ವ್ಯಕ್ತಪಡಿಸದೆ ಹೊಂದಾಣಿಕೆ ಮಾಡಿಕೊಳ್ಳುವ ಮನೋಭಾವದ ಹೋರಾಟಗಾರರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಕೀಳು ಮಟ್ಟದ ಅಭಿರುಚಿ ಮನಸ್ಥಿತಿಯಲ್ಲಿ ತಪ್ಪನ್ನ ಒಪ್ಪಿಕೊಂಡು, ಕನ್ನಡಾಂಬೆಗೆ ಮತ್ತೆ ಅವಮಾನಿಸಿದ್ದಾರೆ. ಇನ್ನೂ, ಮತ್ತೊಬ್ಬರು ಇದು ಕನ್ನಡ ಬಾವುಟ ಅಲ್ಲ ಎಂದು ಸಮರ್ಥಿಸುವ ಯುವ ಪೀಳಿಗೆಯನ್ನ ನಾವು ಸೃಷ್ಟಿಸಿರುವುದನ್ನು ನೋಡುತ್ತಿದ್ದೆವೆ. ತಪ್ಪು ಮಾಡಿದ ಮನುಷ್ಯ ತನ್ನನ್ನ ತಾನು ಸರಿ ಎಂದು ಹೇಳಿಕೊಂಡು ಓಡಾಡುತ್ತಿದ್ದರೇ, ಅದನ್ನ ಸಮರ್ಥಿಸುವುದು ಯಾವ ಸಂದೇಶ ನೀಡುತ್ತದೆ ಎಂಬುದನ್ನು ಸಹ ವಿಚಾರ ಮಾಡುವ ವಿಷಯವೇ...
ಈ ಮಧ್ಯೆ, ವೈಯಕ್ತಿಕ ದ್ವೇಷ ಎಂದು ಹೇಳಿಕೊಂಡು ಓಡಾಡುವವರು ನಮ್ಮ ಮಧ್ಯೆ ಇದ್ದು, ತಪ್ಪು ಮಾಡಿದವರನ್ನೆ ಬೆಂಬಲಿಸುತ್ತಿರುವವರಿಂದ ಸಮಾಜ ಸುದಾರಣೆ ಮಾಡಲು ಹೇಗೆ ಸಾಧ್ಯ ಎಂಬುದು ಚಿಂತಕರ ಅಭಿಪ್ರಾಯ...
Post a Comment

Post a Comment