ಉತ್ತಮ ಸೇವೆ ನೀಡಲು ಪ್ರಮಾಣಿಕ ಪ್ರಯತ್ನ; ಮುದಿಯಪ್ಪ ಮುಧೋಳ
ಗಜೇಂದ್ರಗಡ: (Oct_14_2024)
ಗಜೇಂದ್ರಗಡ ಪುರಸಭೆ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರಾಗಿ ನೇಮಕರಾದ ಮುದಿಯಪ್ಪ ಮುಧೋಳ ಅವರಿಗೆ ಕ್ರಾಂತಿಸೂರ್ಯ ಜೈಭೀಮ್ ಸೇನೆ ಗಜೇಂದ್ರಗಡ ತಾಲೂಕು ಹಾಗೂ ನಗರ ಘಟಕದ ಪದಾಧಿಕಾರಿಗಳು ಸೋಮವಾರ ಸನ್ಮಾನಿಸಿದರು.
ಈ ವೇಳೆ ಕ್ರಾಂತಿಸೂರ್ಯ ಜೈಭೀಮ್ ಸೇನೆ ರಾಜ್ಯ ಸಂಚಾಲಕ ಪ್ರಕಾಶ ರಾಠೋಡ ಮಾತನಾಡಿ,
ನಮ್ಮ ಸಂವಿಧಾನವು ನಮಗೆ ಅತ್ಯಂತ ಪವಿತ್ರವಾದ ಗ್ರಂಥವಾಗಿದ್ದು, ಇದು ನಮ್ಮ ಜೀವನ, ನಮ್ಮ ಸಮಾಜ, ನಮ್ಮ ಸಂಪ್ರದಾಯಗಳು, ನಮ್ಮ ಮೌಲ್ಯಗಳು ಮತ್ತು ನಮ್ಮ ಎಲ್ಲಾ ಸವಾಲುಗಳಿಗೆ ಪರಿಹಾರವಾಗಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ಸದ್ಗುಣಗಳು ಮೈಗೂಡಿಸಿಕೊಂಡು ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಮ್ಮ ಸೇವೆ ಗಜೇಂದ್ರಗಡ ಪಟ್ಟಣಕ್ಕೆ ದೊರೆಯಲಿ ಎಂದು ಶುಭ ಹಾರೈಸಿದರು.
ಸ್ಥಾಯಿ ಸಮಿತಿಯ ಚೇರಮನ್ನ ಮುದಿಯಪ್ಪ ಮುಧೋಳ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಯೋಜಿತ ಅಭಿವೃದ್ಧಿ ಕಾರ್ಯಗಳ ಮೇಲೆ ಏಕಕಾಲದಲ್ಲಿ ಒತ್ತು ನೀಡುವುದರೊಂದಿಗೆ ನಗರ ಪ್ರದೇಶಗಳ ತ್ವರಿತ ಬೆಳವಣಿಗೆ ಒತ್ತು ನೀಡುವುದರೊಂದಿಗೆ ಗಜೇಂದ್ರಗಡವನ್ನು ಸ್ವಚ್ಛ, ಸುಂದರ, ಸ್ವಾಸ್ಥ್ಯ ನಗರವನ್ನಾಗಿ ಮಾಡಲು ಹೆಚ್ಚಿನ ಒತ್ತು ನೀಡಲಾಗುವುದು. ಸಂಘಟಕರ, ಪ್ರಗತಿಪರ ಚಿಂತಕರ, ಸಾರ್ವಜನಿಕರ ಸಲಹೆ ಸಹಕಾರ ಪಡೆದು ಗಜೇಂದ್ರಗಡ ಪುರಸಭೆ ಇನ್ನಷ್ಟು ಜನ ಸ್ನೇಹಿ ಮಾಡುವೆ. ಪುರಸಭೆ ಯಲ್ಲಿ ಸಹಜವಾಗಿ ಸಮಸ್ಯೆ ಇರಲಿದ್ದು, ಜನರ ಧ್ವನಿಯಾಗಿ ಸೇವೆ ಮಾಡುವುದರೊಂದಿಗೆ ಮೂಲ ಸೌಕರ್ಯ ಒದಗಿಸುವತ್ತ ಗಮನ ಹರಿಸುವೆ ಎಂದು ಹೇಳಿದ ಅವರು, ಕ್ರಾಂತಿಸೂರ್ಯ ನೀಡಿರುವ ಮನವಿಯನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಜೈಭೀಮ್ ಸೇನೆಯ ತಾಲೂಕು ಅಧ್ಯಕ್ಷ ಕನಕಪ್ಪ ಕಲ್ಲೊಡ್ಡರ, ಫಕೀರಪ್ಪ ನಿಡಗುಂದಿ, ರವಿ ಗುಗ್ಗಲೋತ್ತರ, ಪ್ರಭು ನಿಡಗುಂದಿ, ಮುತ್ತು ರಾಠೋಡ, ಅಶೋಕ ಭಜೇಂತ್ರಿ, ಲಕ್ಷ್ಮಣ ಭಜೇಂತ್ರಿ, ಲಕ್ಷ್ಮಣ ಬಂಕದ, ರಮೇಶ ತಳವಾರ, ಗೋವಿಂದ ಮನ್ನೇರಾಳ, ಮಂಜು ಪೂಜಾರ, ದುರಗಪ್ಪ ಮಾಳಗಿಮನಿ, ಲೋಕಪ್ಪ ನಿಡಗುಂದಿ, ರವಿ ನಿಡಗುಂದಿ, ಅಮಿತ್ ಭಜಂತ್ರಿ ಶಿವು ಬನ್ನಿಗೋಳ, ರಾಘು ಬಳೋಟಗಿ, ಸಂದೀಪ ಕಲ್ಲೊಡ್ಡರ, ವಿಠಲ ಗೌಡರ, ಸಂತು ಚಳಗೇರಿ, ಮಂಜು ಪೂಜಾರ ಸೇರಿದಂತೆ ಇತರರು ಇದ್ದರು.
Post a Comment