ಪದ್ಮಶಾಲಿ ಸಮಾಜದ ಶ್ರೀಮತಿ ರೇಣುಕಾ ಏವೂರ್ ಅವರಿಗೆ ಹುಬ್ಬಳ್ಳಿ, ಗದಗ, ಗಜೇಂದ್ರಗಡದ ಪದ್ಮಶಾಲಿ ಸಮಾಜದ ಮುಖಂಡರು ಸನ್ಮಾನಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆರಿಗೆ ಆದ್ಯತೆ ನೀಡಿ, ರೇಣುಕಾ ಏವೂರ್ ಅವರನ್ನ ಚುಟುಕು ಸಾಹಿತ್ಯದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾಧ್ಯಕ್ಷ, ತಾಲೂಕಾಧ್ಯಕ್ಷರಿಗೆ ಅಭಿನಂದನೆ ತಿಳಿಸಿದರು.
ಶ್ರೀಮತಿ ರೆಣುಕಾ ಏವೂರ್ ಅವರು ಪದ್ಮಶಾಲಿ ಸಮಾಜಕ್ಕೆ ಗೌರವ ತಂದಿದ್ದಾರೆ ಎಂದು ಮುಖಂಡರು ಅಭಿಮಾನದ ಮಾತುಗಳನ್ನಾಡಿದರು.
ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವ ಸತ್ಯ_ಮಿತ್ಯ ಪತ್ರಿಕೆಯ ಸಂಪಾದಕರಾದ ಚನ್ನು ಸಮಗಂಡಿವರು ಮಾತನಾಡಿ, ಮಹಿಳೆಯರಿಗೆ ಅಧ್ಯತೆ ನೀಡಿರುವುದು ಸಂತಸದ ವಿಷಯ. ಸಮಾನತೆಯ ಸಮಾಜವನ್ನ ಕಟ್ಟಲು ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಮತಿ ರೇಣುಕಾ ಏವೂರ್ ಹುಬ್ಬಳ್ಳಿ ಸಮಾಜದ ಮುಖಂಡರಾದ ಗೋವಿಂದಪ್ಪ ಚುಂಚಾ, ಗದಗ್ ಸಮಾಜದ ಬಿ.ಟಿ ಚುಂಚಾ, ಗಜೇಂದ್ರಗಡ ಸಮಾಜದ ವತಿಯಿಂದ . ಶಂಕರ್ ಏವೂರ್, ಆನಂದ್ ಚುಂಚಾ ಮತ್ತು ಕೇಶಪ್ಪ .ನ. ಅರವ್, ಸತ್ಯನಿತ್ಯ ಪತ್ರಿಕೆ ಸಂಪಾದಕರಾದ ಚನ್ನು ಸಮಗಂಡಿ, ಪುಟಾಣಿ ಮನು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.



Post a Comment