-->
Bookmark

ಕಲ್ಪನೆಗೆ ಸಿಗದ ತಾಯಿ-ಮಗನ ಕರುಳಬಳ್ಳಿಯ ಸಂಬಂಧ

ಕಲ್ಪನೆಗೆ ಸಿಗದ ತಾಯಿ-ಮಗನ ಕರುಳಬಳ್ಳಿಯ ಸಂಬಂಧ

ನನಗಾಗಿ ʼವಿಸ್ಮಯʼ ಲೋಕವನ್ನು ನೀಡಿದಳು ನನ್ನವ್ವ
( ಚಂದ್ರು ರಾಠೋಡ್ ಅವರ Facebook ಪೇಜ್ ನಿಂದ )

ಜಗತ್ತಿನ ಎಲ್ಲಾ ಸಂಬಂಧಗಳನ್ನು ಭಾವನಾತ್ಮಕವಾಗಿ ಮನಸ್ಸಿನಲ್ಲಿ ಕಲ್ಪಿಸಬಹುದು, ಮಾತಿನಲ್ಲಿ ಹೇಳಬಹುದು ಆದರೆ ತಾಯಿಯ ಪ್ರೀತಿ, ಅವಳ ಕರುಳಬಳ್ಳಿಯ ಸಂಬಂಧ ಮಾತ್ರ ಕಲ್ಪನೆಗೆ ಸಿಗದು. ಅದನ್ನು ವಿಶ್ವದಲ್ಲಿರುವ ಯಾವುದಕ್ಕೂ ಹೋಲಿಸಲಾಗುವುದಿಲ್ಲ. ಯಾಕೆಂದರೆ ಅದೊಂದು ಕೇಳಿದ್ದನ್ನು ಕೊಡುವ ಕಾಮಧೇನು, ಪ್ರೀತಿ-ತ್ಯಾಗ, ಮಮತೆಗಳ ಪರಿಶುದ್ಧ ರೂಪ.

  ನನ್ನವ್ವ ಜಾಲಮ್ಮ ದೈಹಿಕವಾಗಿ ದೂರವಾಗಿ 2024ರ ನವೆಂಬರ್‌–21ಕ್ಕೆ 9 ವರ್ಷವಾದವು. ಪ್ರತಿವರ್ಷ ಅವಳು ನೆನೆಪುಗಳ ಮೆಲಕು ಹಾಕಿ ಅಕ್ಷರಗಳ ರೂಪದಲ್ಲಿ ಬರೆದು ಹಂಚಿಕೊಂಡಾಗ ಮನಸ್ಸಿಗೆ ಸ್ವಲ್ಪ ಸಮಾಧಾನ ಸಿಗುತ್ತದೆ. ಅದಕ್ಕೆ ಅಗಲಿದ ಅಮ್ಮನಿಗೆ ಪ್ರತಿ ವರ್ಷದಂತೆ ಈ ವರ್ಷವೂ ಅಕ್ಷರದ ಅರ್ಪಣೆ ಮಾಡುತ್ತಿರುವೆ.

  ಆಗಿನ ಕಡು ಬಡತನದ ಕಾಲಘಟ್ಟದಲ್ಲಿ ಹೊಟ್ಟೆ ತುಂಬಿದರಾಯಿತು ಎನ್ನುವ ಹಾಗೂ ಹೊಟ್ಟೆ-ಬಟ್ಟೆಗಾಗಿ ಬಡಿದಾಡುವ ಬದುಕಿನ ಮಧ್ಯೆ ನನ್ನ ಮಗಾ ಒಬ್ಬನಾದರು ಶಾಲಿ ಕಲಿಯಲಿ ಅಂತ, ಅಕ್ಷರ ಜ್ಞಾನಕ್ಕಾಗಿ ಹಂಬಲಿಸಿದ ಕನಸೂಗಾರ್ತಿ ನನ್ನವ್ವ. ಅಂದು ಅವಳು ನೀಡಿದ ಭಿಕ್ಷೆಯಿಂದ ಇಂದು ನಾನು ಓದುತ್ತಿದ್ದೇನೆ, ಬರೆಯುತ್ತಿದ್ದೇನೆ ಹಾಗೂ ಉತ್ತಮವಾದ ಜೀವನವನ್ನು ಕಂಡುಕೊಂಡಿದ್ದೇನೆ.
 
  ಅಡವಿ ಅರಣ್ಯದಲ್ಲಿರುವ ಯಾರದೋ ಹೊಲದಲ್ಲಿ ಜೋಳದ ದಂಟಿನ ಗುಡಿಸಲು ಹಾಕಿ, ಕರೆಂಟ್‌ ಇಲ್ಲದ ಕತ್ತಲೆಯಲ್ಲಿ, ತಾನೇ ದೀಪದ ಬೆಳಕಾಗಿ ನಮ್ಮ ಜೀವನವನ್ನು ಬೆಳಗಿದ ದೇವತೆ ನನ್ನವ್ವ. ಹೊಲ ಮನೆ ಇಲ್ಲದಿದ್ರು ನನ್ನ ಮಗಾ ಸಾಹುಕಾರ, ಸಂಪತ್ತು ಇಲ್ಲದಿದ್ರು ನನ್ನ ಮಗಾ ಬಂಗಾರ, ರಾಜ್ಯಭಾರ ಇಲ್ಲದಿದ್ರು ನನ್ನ ಮಗಾ ರಾಜಕುಮಾರ ಎಂದು ಗುಣಗಾನ ಮಾಡುತ್ತಿದ್ದ ಅವಳ ಮಾತುಗಳನ್ನು ಹಾಗೂ ಯಾರೋ ನೀಡಿದ ಹೊಸ ಬಟ್ಟೆಯನ್ನು ತೊಡಿಸಿ ಎಷ್ಟು ಸುಂದರ ಕಾಣುತಿಯ ಚಂದಿರಾ… ಎಂದು ಮುದ್ದು ಮಾಡುತ್ತಿದ್ದ ಅವಳ ನಿಷ್ಕಲ್ಮಶ ಪ್ರೀತಿಯನ್ನು ಎಷ್ಟು ಹೋಗಳಿದರು ಕಡಿಮೆಯೇ.

  ಅದೆಕೋ ಗೊತ್ತಿಲ್ಲ ನೀ ಬಿಟ್ಟು ಹೋದ ಘಳಿಗೆ, ಮರೆಯಲಾಗುತ್ತಿಲ್ಲ ನನಗೆ. ನೆನಪಿನಾಳಾದ ನೋವು ಚುಚ್ಚುತ್ತಿದೆ ಎದೆಗೆ, ದುಃಖ ತಡೆಲಾಗುತ್ತಿಲ್ಲ ಮನಸಿಗೆ. ಭಾವನೆ ಕಣ್ಣೀರಾಗಿ ಹರಿಯುತ್ತಿದೆ, ಮೌನದಿ ಮನಸ್ಸು ಅಳುತ್ತಿದೆ, ಯಾರಿಗೂ ಹೇಳದ ಕೆಲವು ಮಾತುಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಬೇಕಿದೆ, ನಿನ್ನ ಕೈ ತುತ್ತು ತಿನ್ನುವ ಆಸೆಯಾಗಿದೆ, ನಿನ್ನ ಮಡಿಲಲ್ಲಿ ಮಲಗಬೇಕಿದೆ. ನೀ ಹೇಳುವ ಕತೆ, ಹಾಡು ಕೇಳಬೇಕಿದೆ. ಹಣೆಗೆ ಕುಂಕಮವಿಟ್ಟು ಲಂಬಾಣಿ (ಬಂಜಾರ) ಸಂಸ್ಖೃತಿ ಉಡುಗೆಯಲ್ಲಿ ಮಾಡುವ ನಿನ್ನ ನೃತ್ಯ ನೋಡಬೇಕಿದೆ. ಹೇ ಜಾಲಮ್ಮ.. ಒಮ್ಮೆ ಬಾರಮ್ಮ..
 
  ಅಮ್ಮನ ಮಡಿಲೆಂದರೆ ಒಂದು ಹಾರ್ದಿಕ ಅಪ್ಪುಗೆ. ನಿರಂತರ ಶ್ರೇಯಸ್ಸು, ಅಭಿವೃದ್ಧಿ ಕೋರುವ ಹಾರೈಕೆಯ ತಾಣ. ಕೊನೆಯವರೆಗೂ ಮಕ್ಕಳಿಗೋಸ್ಕರ ಮಿಡಿವ ಅಂತಃಕರಣ ಎನ್ನುತ್ತಾರೆ. ಆ ತಾಯಿಯ ಮಡಿಲಿನ ಪ್ರೀತಿಯನ್ನು ಅನುಭವಿಸಿದ ಅದೃಷ್ಟವಂತ ನಾನು. ಹಾಗಾಗಿ ನಾನು ಸಹ ಹೇಳುವೆ ತಾಯಿಯ ಮಡಿಲು ಸ್ವರ್ಗಕಿಂತ ಮಿಗಿಲು ಎಂದು..

  ಸದಾ ನಗು ಮೊಗದ ದೇವತೆಯಾಗಿ ಕಾಣುತ್ತಿದ್ದ ನನ್ನವ್ವ ದೈಹಿಕವಾಗಿ ಮಾತ್ರ ದೂರವಾಗಿರಬಹುದು. ಆದರೆ ಇಂದಿಗೂ ಕಾಣದ ಕಣ್ಣಲ್ಲಿ ಗೋಚರಿಸುವ ದೇವತೆಯಂತೆ ನನ್ನನ್ನು ಕಾಳಜಿ ಮಾಡುತ್ತಾಳೆ, ನನಗೆ ನೋವು, ಕಷ್ಟಗಳು ಬಂದರೆ ದೇವತೆಯಾಗಿ ಬಂದು ನಿವಾರಿಸಿ ಆಶೀರ್ವದಿಸುತ್ತಾಳೆ ಎನ್ನುವ ನಂಬಿಕೆ ನನ್ನಲ್ಲಿದೆ..

  ಯಾವಾಗಲೂ ನಾನು ನನ್ನವ್ವನ ನೆನೆಯುವುದನ್ನು ಕಂಡ ದೇವರು, ನನ್ನ ತಾಯಿಯನ್ನು ಮಗಳ ರೂಪದಲ್ಲಿ ನನ್ನ ಹೆಂಡಿತಿಯ ಮಡಿಲಲ್ಲಿ ಮರು ಜನ್ಮ ನೀಡುವ ಮೂಲಕ ʼವಿಸ್ಮಯʼ ಲೋಕವನ್ನು ಸೃಷ್ಟಿಸಿದ್ದಾನೆ. ಈಗ ತಾಯಿರೂಪದ ಮಗಳಿಗೆ ನಾಲ್ಕು ತಿಂಗಳು ಎನ್ನುವ ಖುಷಿ ನಮ್ಮಲ್ಲಿದೆ….
ಸದಾ ನೀ ತೋರಿದ ಮಾರ್ಗದಲ್ಲಿ ಸಾಗುತ್ತಿರುವೆ.. ನೀ ನೀಡಿದ ಪ್ರೀತಿಯಂತೆ ನಾ ಬದುಕುತ್ತಿರುವೆ..

ಲವ್‌ ಯು ಮುದ್ದು ಮದರ್‌ ಇಂಡಿಯಾ ಜಾಲಮ್ಮ.. 

ಇಂತಿ ನಿನ್ನ ಕಂದ,
ಚಂದ್ರು ಎಂ. ರಾಥೋಡ್
ಮೊಬೈಲ್: 7676296140
__________________________________________
Wonderful  relationship between mother-son
unimaginable love bond exist in the world

 -- (from Chandru Rathod's Facebook page) 

All the relationships of the world can be imagined in the mind emotionally, can be said in words but mother's love, Her gut relationship is unimaginable. It cannot be compared to anything in the universe. Because it is a pure form of lust, love-sacrifice and love. Nannavva Jalamma (my mother and jalamma is the name of his mother) became physically distant and it was 9 years on November-21, 2024.

 Every year when she reminisces. Chandru wi writes a strong and shares in the form of letters, then his mind gets relax. Like every year, he is  offering letters to his departed mother this year. 

As a author he writes that, mother was a dreamer who longed for literacy, that my son should learn to become one of the best days in the period of extreme poverty. Today I am reading, writing and finding a better life because of the alms given by her then. Nannava, the goddess who lit up our lives as the light of the lamp, in the darkness without electricity, put a hut of corn stalks in someone's field in the forest forest.

 There is no farm house, my son is a sahukara, if there is no wealth, my son is gold, I am not a state burden, my son is not a prince, how much of a beautiful look of Chandira who used to wear the new clothes given by someone and how beautiful Chandira... I don't know why you left me, I can't forget. The pain of memory is piercing the chest, the sadness is unstoppable to the mind. The feeling is flowing in tears, the silent mind is crying, I have to share with you some words that I have not told anyone, I want to kiss your hand, sleep in your lap. You have to listen to the story and song you tell. You have to see your dance performed in Lambani (Banjara) culture dress with kunkama on your forehead. Hey Jalamma.. Baramma once.. 
  Mom's lap is a hearty hug. A place of constant merit, development wish. Until the end, it is called Midiva Antahkarana for children. I am fortunate to have experienced the love of that mother's lap. So I also say that the mother's lap is more than heaven.. Nannavva, who was always seen as a smiling goddess, could only be physically distant. But I believe that even today, she cares me like an angel that is visible in the unseen eye, if I get pain and difficulties, she will come as an angel and bless me. God, who always saw me soaking in myself, created the world of wonder by rebirthing my mother in the lap of my wife in the form of a daughter. Now we are happy that the mother's daughter is four months old. I am always moving on the path you have shown me.. I am living like the love you gave. Rathod. Mobile: 7676296140


Post a Comment

Post a Comment