ಎಸ್.ಎಸ್.ಕೆ ಸಮಾಜದ ಕೀರ್ತಿ ಹೆಚ್ಚಿಸಿದ ಡಾ. ಪದ್ಮಾ ಜೆ ಕಬಾಡಿ
ಗದಗ : (Nov_09_2024)
ಎಸ್.ಎಸ್.ಕೆ ಸಮಾಜದಲ್ಲಿ ಅರಳಿದ ಪ್ರತಿಭೆ ಶ್ರೀಮತಿ ಡಾ. ಪದ್ಮಾ ಜೆ ಕಬಾಡಿ. ಗದಗ ಪಟ್ಟಣದಲ್ಲಿ ನೆಲೆಸಿರುವ ಇವರು ಮೂಲತಃ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಹೊಂದಿರುವ ಕುಟುಂಬ.
ಸಂಗೀತ, ಸಾಹಿತ್ಯ ಇವರ ಬ್ಲಡ್ ನಲ್ಲೆ ಇದೆ. ಪೂರ್ವಜರಿಂದ ಬಳುವಳಿಯಾಗಿ ಬಂದಿದ್ದು, ಸಾಹಿತ್ಯ ಬರೆಯುವ ಕೆಲಸ ಮಾಡುತ್ತಿದ್ದ ಇವರ ತಂದೆ, ಸಮಾಜ ಮುಖಿ ಕಾರ್ಯ ಮಾಡಿದ್ದಾರೆ.
ಇವರು ಗೀಚಿದ್ದೆ ಸಾಹಿತ್ಯ ಎಂಬ ತಂದೆ ಹಾಕಿಕೊಟ್ಟ ಮಾರ್ಗವನ್ನ ಶ್ರೀಮತಿ ಡಾ. ಪದ್ಮಾ ಜೆ ಕಬಾಡಿ ಚಾಚುತಪ್ಪದೆ, ಪಾಲಿಸ್ತಾರೆ. ಇನ್ನೂ, ಸಂಗೀತದಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡು, ಹಲವು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ.
ಸಂಗೀತ, ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು, ಇವೆರಡನ್ನೂ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಯಾರಾದರೂ ಸಾಹಿತ್ಯಾಸಕ್ತರು ಬಂದ್ರೂ, ಅವರನ್ನ ಪ್ರೋತ್ಸಾಹಿಸಿ, ಅವರಲ್ಲಿ ಸಾಹಿತ್ಯ, ಸಂಗೀತದ ಅಭಿರುಚಿಗೆ ತಕ್ಕಂತೆ, ಮಾರ್ಗದರ್ಶನ ನೀಡುತ್ತಾರೆ. ತಾವೊಬ್ಬರೇ, ಬೆಳೆಯಬೇಕು ಎಂಬ ಸಂಕುಚಿತ ಮನೋಭಾವ ಇವರದ್ದಲ್ಲ. ಸಾಹಿತ್ಯ ಮತ್ತು ಸಂಗೀತ ಕ್ಷೇತ್ರ ಸಮುದ್ರದಾಳದಂತೆ, ಅದರಲ್ಲಿ ಮುತ್ತುಗಳು, ಹವಳಗಳು ಸಿಗುತ್ವೆ... ಅದಕ್ಕೆ ಆಳಕ್ಕೆ ಈಜಬೇಕು. ಈಜಿ ಜಯಿಸಬೇಕು ಎಂಬ ಮಾತನ್ನ ಶ್ರೀಮತಿ ಡಾ. ಪದ್ಮಾ ಜೆ ಕಬಾಡಿ ಹೇಳುತ್ತಾರೆ.
ಮುಂಬರುವ ದಿನಗಳಲ್ಲಿ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕಾಗಿ ತಮ್ಮ ಜೀವನ ಮುಡುಪಾಗಿಡುವ ಮಹದಾಸೆಯನ್ನ ಬಿಚ್ಚಿಡುತ್ತಾರೆ.
ಹತ್ತಾರು ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡಿರುವ ಇವರಿಗೆ ಮುಂಬರುವ ದಿನಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಬಂದರೂ ಆಶ್ಚರ್ಯ ವಿಲ್ಲ.
ಕವಿಯಾಗಿ ಕವನ ಸಂಕಲನ ಬೆರಯುವ ಇವರು, ಕಥಾ ಸಂಕಲನವನ್ನ ಸಹ ಬರೆದಿದ್ದಾರೆ.
ಎಸ್.ಎಸ್.ಕೆ ಸಮಾಜದಲ್ಲಿ ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವವರು ತುಂಬಾ ವಿರಳ. ಹೀಗಿದ್ದರೂ, ಎಸ್.ಎಸ್.ಕೆ ಸಮಾಜದ ಕೀರ್ತಿಯನ್ನ ಹೆಚ್ಚಿಸಿದ್ದಾರೆ ಶ್ರೀಮತಿ ಪದ್ಮಾ ಜೆ ಕಬಾಡಿ ಅವರು.
1 comment