Gajendragad : ಮತದಾರರ ಸಾಕ್ಷರತಾ ರಸಪ್ರಶ್ನೆ ಕಾರ್ಯಕ್ರಮ : ಇಟಗಿಯ ಇಬ್ಬರು ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಗಜೇಂದ್ರಗಡ : (Nov_08_2024)
ನಾವು ಉತ್ತಮ ಜೀವನ ನಡೆಸಲು, ಉತ್ತಮ ನಾಗರಿಕರಾಗಲು, ದೇಶದ ಬಗ್ಗೆ ಚಿಂತನೆ ನಡೆಸಲು, ಅಭಿವೃದ್ಧಿಗೆ ಹೀಗೆ ಪ್ರತಿಯೊಂದು ಆಯಾಮಗಳನ್ನ ತಿಳಿದುಕೊಳ್ಳಲು ಓದು ಬಹು ಮುಖ್ಯ. ಶಿಕ್ಷಣ ಪ್ರತಿಯೊಂದು ಸಮಸ್ಯೆಗಳ ಪರಿಹಾರಕ್ಕೆ ಉತ್ತಮ ಆರಂಭಕ್ಕೆ ನಾಂದೀಯಾಗಲಿದೆ ಎಂಬುದನ್ನ ಗಜೇಂದ್ರಗಡ ತಾಲೂಕಿನ ಇಟಗಿ ಗ್ರಾಮದ
ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿಯರಾದ ನಿಖಿತಾ ಮಾಲಿಪಾಟೀಲ್ ಮತ್ತು ಕವಿತಾ ತಳವಾರ ಮತದಾರರಿಗೆ ಸಾಕ್ಷರತೆಯನ್ನ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಚುನಾವಣಾ ಆಯೋಗ ನಡೆಸಿದ, ತಾಲೂಕಾ ಮಟ್ಟದ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಇಬ್ಬರು ವಿದ್ಯಾರ್ಥಿನಿಯರಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಎಫ್.ಹೆಚ್ ಡಾಲಾಯತ್, ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷ ಹೇಮಂತಗೌಡಮಾಲಿ ಪಾಟೀಲ್ ಮತ್ತು ಎಸ್.ಡಿ.ಎಂ.ಸಿ ಸರ್ವ ಸದಸ್ಯರು ಜೊತೆಗೆ ಶಾಲಾ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.
1 comment