-->
Bookmark

Gajendragad : ಗದಗ ಜಿಲ್ಲೆಯಲ್ಲಿ ಮಕಾಡೆ ಮಲಗಿದ ಕಸಾಪ

Gajendragad : ಗದಗ ಜಿಲ್ಲೆಯಲ್ಲಿ ಮಕಾಡೆ ಮಲಗಿದ ಕಸಾಪ 

ಜಿಲ್ಲಾ ಸಮ್ಮೇಳನ ಮತ್ತೆ ಮುಂದೂಡಿಕೆ 

ಕಸಾಪ ಅಭಿವೃದ್ಧಿ ಮಂಗಮಾಯ 

ಗಜೇಂದ್ರಗಡ : (Nov_26_2024)

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮ್ಮೇಳನ ಮತ್ತೆ ಮುಂದೂಡಲಾಗಿದೆ.‌ ಈ ವಿಷಯವನ್ನ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ್ ಹೇಳಿದ್ದಾರೆ. ಕಸಾಪ ಚುನಾವಣಾ ಸಂಧರ್ಭದಲ್ಲಿ ರಾಶಿ ರಾಶಿ ಆಶ್ವಾಸನೆಗಳನ್ನ ಕೊಟ್ಟ ವಿವೇಕಾನಂದರು ಸಾಹಿತ್ಯ ಪರಿಷತ್ ಅಭಿವೃದ್ಧಿ ಎಂಬ ಮಾತು ಬಂದಾಗ ಮಂಗಮಾಯವಾಗಿದ್ದಾರೆ. ಮೂರು ವರ್ಷ ವಾದ್ರೂ ಇವರಿಗೆ ಜಿಲ್ಲಾ ಸಮ್ಮೆಳನ ನಡೆಸಲಾಗುತ್ತಿಲ್ಲ ಎಂದಾದರೇ, ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ ಮಕಾಡೆ ಮಲಗಿದೆ ಎಂದು ಆಜೀವ ಸದಸ್ಯರು ಬೇಸರ ವ್ಯಕ್ತಪಡಿಸುತ್ತಾರೆ. 

ಈ ಹಿಂದೆ ಜಿಲ್ಲೆ ಸೇರಿದಂತೆ ಗಜೇಂದ್ರಗಡ ತಾಲೂಕಿನಲ್ಲಿ ಕೇವಲ ಭವನಗಳಾಗಿವೆ. ಸನ್ಮಾನಗಳಾಗಿವೆ. ಇದರಿಂದ ಸಾಹಿತ್ಯ ಪರಿಷತ್ ಅಭಿವೃದ್ಧಿಯಾಗಲ್ಲ ಎಂದು ಬೊಬ್ಬೆ ಹೊಡೆದಿದ್ದ ವಿವೇಕಾನಂದಗೌಡ ಪಾಟೀಲ್ ಅವರ ಬೆಂಬಲಿಗರು ಈಗ ತೆರೆಮರೆಯಲ್ಲಿ ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ‌. ಜಿಲ್ಲೆ ತಾಲೂಕಿನ ಆಜೀವ ಸದಸ್ಯರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಏಕ ಮುಖ ನಿರ್ಣಯಗಳು ತೆಗೆದುಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನಗಳು ಹೆಚ್ಚಾಗಿವೆ ಎನ್ನುತ್ತಾರೆ ಸಾಹಿತ್ಯಾಸಕ್ತರು‌. 

ಜಿಲ್ಲೆಯ ತಾಲೂಕಾಧ್ಯಕ್ಷರೆಲ್ಲ ಶಿಕ್ಷಕರಾಗಿದ್ದು, ಮತ್ತೊಂದು ಶಿಕ್ಷಕರ ಸಂಘ ಕಟ್ಟಿದ್ದಾರೆಯೇ ಹೊರತು ಸಾಹಿತ್ಯ ಪರಿಷತ್ ಅಲ್ಲ ಎಂಬುದು ಜಿಲ್ಲಾಧ್ಯಕ್ಷರ ಗಮನಕ್ಕೆ ಬಾರದಿರುವುದು ವಿಪರ್ಯಾಸ. ಮತ್ತೊಂದೆಡೆ, ಮಂಡ್ಯದಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಸಾಹಿತ್ಯೇತರರು ಬೇಡ ಎಂಬ ಕೂಗಿಗೆ ಮಣಿದು. ಸಾಹಿತಿಗಳನ್ನೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಆದ್ರೆ, ಕಸಾಪ ತಾಲೂಕಾಧ್ಯಕ್ಷರು ಸಾಹಿತ್ಯದೆಡೆ ಆಸಕ್ತಿ ಹೊಂದಿದ್ದಾರೆಯೇ ಎಂಬ ಪ್ರಶ್ನೆ ಕಾಡತೊಡಗಿದೆ. ಪುಸ್ತಕ ಬರೆಯದ, ಸಾಹಿತ್ಯದ ಗಂಧ ಗಾಳಿಯ ಪರಿವೆ ಇಲ್ಲದವರೂ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷರಾಗಿದ್ದಾರೆ ಎಂಬ ಆರೋಪಗಳು ತಾಲೂಕಿನಲ್ಲಿ ಆಗಾಗ ಕೇಳಿ ಬರುತ್ತಿವೆ.  ಹೀಗಿದ್ದಾಗ, ಸಾಹಿತ್ಯ ಪರಿಷತ್ ಬೆಳೆಯುವುದಾದರೂ ಹೇಗೆ ಎನ್ನುತ್ತಾರೆ ಸಾರ್ವಜನಿಕರು... 

2025ರ ಜನೇವರಿಯಲ್ಲಿ ಸಮ್ಮೇಳನ ನಡೆಸಲಿದ್ದೇವೆ ಎನ್ನುತ್ತಾರೆ. ಅಂದರೇ, ಮತ್ತೆ ಚುನಾವಣೆಗೆ ಒಂದು ವರ್ಷ ವಿದ್ದಾಗ ಇವರ ಕಾರ್ಯ ಚಟುವಟಿಕೆಗಳು ಪ್ರಾರಂಭವಾಗಲಿವೆ ಎಂಬುದು ಸ್ಪಷ್ಟವಾಗುತ್ತದೆ. ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಕಳೆದ ಕಸಾಪ  ಚುನಾವಣೆಯಲ್ಲಿ ವಿವೇಕಾನಂದಗೌಡ ಪಾಟೀಲ್ ಅವರು ಕೊಟ್ಟ ಆಶ್ವಾಸನೆಗಳು, ಕಸಾಪ ಚುನಾವಣಾ ಪ್ರಚಾರದಲ್ಲಿ ಮಾಡಿದ ಭಾಷಣಗಳನ್ನ ವೀಕ್ಷರ ಮುಂದೆ ಇಡಲಿದೆ ಕಿರಾ ನ್ಯೂಸ್ ಕನ್ನಡ.‌

ಕಳೆದ ಬಾರಿಯ ಕಸಾಪ ಚುನಾವಣೆ ಸಂಧರ್ಭದಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಪ್ರತಿಷ್ಠಿತ ಎ.ಸಿ.ಎನ್ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಅವರು ಮಾಡಿದ ಭಾಷಣಗಳು, Interviewಗಳನ್ನ ಕಿರಾ ನ್ಯೂಸ್ ಓದುಗರಿಗೆ, ವೀಕ್ಷಕರಿಗೆ ಮುಂಬರುವ ದಿನಗಳಲ್ಲಿ ಲಭ್ಯವಾಗಲಿದೆ. 

ಕಸಾಪ ಕಟ್ಟಿ ಬೆಳೆಸುವ ಜವಾಬ್ದಾರಿ ನಮ್ಮನಿಮ್ಮೆಲ್ಲರ ಮೇಲಿದೆ. ಬೇಜವಾಬ್ದಾರಿ ಬಿಡೋಣ, ಕಸಾಪ ಅಭಿವೃದ್ಧಿ ಮಾಡೋಣ... 

ಕೃಷ್ಣ ರಾಠೋಡ್
ಸಂಪಾದಕರು, 
ಕಿರಾ ನ್ಯೂಸ್ ಕನ್ನಡ, 
ಗಜೇಂದ್ರಗಡ. 
ಮೊ : 8197474996
Post a Comment

Post a Comment