ಬಡವರಿಗೂ ಸಹಾನುಭೂತಿ ತೋರುವ ವೈದ್ಯ ದಂಪತಿ
ಗಜೇಂದ್ರಗಡ : (Apr_30_2025)
ಗಜೇಂದ್ರಗಡದಲ್ಲಿ ಅನಾರೋಗ್ಯ ಪೀಡಿತರಾದ್ರೆ, ಅವರಿಗೆ emergency ಚಿಕಿತ್ಸೆ ನೀಡುವ ವೈದ್ಯರಲ್ಲಿ ಡಾ. ಕಾಶೀನಾಥ್ ಪೂಜಾರಿ ಅವರು ಕೂಡ ಒಬ್ಬರು. ಅನೇಕ ಸಂದರ್ಭಗಳಲ್ಲಿ ಹಲವಾರು ರೋಗಿಗಳನ್ನ ತುರ್ತು ಸಂಧರ್ಭದಲ್ಲಿ ಚಿಕಿತ್ಸೆ ನೀಡಿ ಯಶಸ್ವಿ ವೈದ್ಯರೆನಿಸಿದ್ದಾರೆ. ಅವರ ಕೈಗುಣದ ಚರ್ಚೆ ಎಲ್ಲೆಡೆ ಮನೆ ಮಾಡಿದೆ. ಡಾ. ಕಾಶೀನಾಥ್ ಯುವಕರಾಗಿದ್ದು, ಅತ್ಯುತ್ಸಾಹದಿಂದ ಕೆಲಸ ಮಾಡುತ್ತಾರೆ. ಬಡವರಿಗೆ ಕೈಲಾದ ಸಹಾಯವನ್ನೂ ಮಾಡಿದ ಅದೆಷ್ಟೋ ಉದಾಹರಣೆಗಳಿವೆ. ಇಂತಹ
ಎಂ.ಬಿ.ಬಿ.ಎಸ್, ಎಂಡಿ ಜನರಲ್ ಮೇಡಿಸಿನ್ ಮುಗಿಸಿರುವ ಪರಿಣಿತ ವೈದ್ಯರಾದ ಡಾ. ಕಾಶೀನಾಥ್ ಪೂಜಾರಿ ಮತ್ತು ಅವರ ಧರ್ಮ ಪತ್ನಿ ಶ್ರೀಮತಿ ಡಾ. ಸೌಭಾಗ್ಯ ಪೂಜಾರಿ ಜನರ ಸೇವೆ ಮಾಡುತ್ತಿದ್ದು, ಗಜೇಂದ್ರಗಡ ಪಟ್ಟಣದಲ್ಲಿ ಮನೆ ಮಾತಾಗಿದ್ದಾರೆ. ಈ ದಂಪತಿಗಳ ಕೆಲಸ ಕಾರ್ಯ ಮೆಚ್ಚುವ ಅದೆಷ್ಟೊ ಸಾರ್ವಜನಿಕರು ಡಾ. ಕಾಶೀನಾಥ್ ಪೂಜಾರಿ ಮತ್ತು ಡಾ. ಸೌಭಾಗ್ಯ ಅವರ ಕೆಲಸ ಕಾರ್ಯವನ್ನ ಹಾಡಿ ಹೊಗಳಿದ್ದಾರೆ.
Post a Comment