ಗಜೇಂದ್ರಗಡ : (May_12_2025)
ಸೋಮವಾರ ಮೇ 12 ರಂದು ಗಜೇಂದ್ರಗಡದಲ್ಲೊಂದು ಅಪಘಾತ ನಡೆಯಿತು. ಅಪಘಾತದಲ್ಲಿ ಒಬ್ಬರು ಗಾಯಗೊಂಡಿದ್ದರು. ಅವರ ಬಳಿ ಚಿಕಿತ್ಸೆಗಾಗಿ ಬೇರೊಬ್ಬರಮ್ನ ಕರೆತಂದು ವಿಷಯ ವಿವರಿಸುತ್ತಿದ್ದೆ. ಆಗಲೇ ಡಾ. ಕಾಶೀನಾಥ್ ಪೂಜಾರಿ ಅವರಿಗೆ ಒಂದು ಕರೆ ಬಂದಿತು.
ಆಕ್ಸಿಡೆಂಟ್ ಪ್ರಕರಣವಾದ್ದರಿಂದ ನೀವೂ ಬರ್ತಿರಾ ಎಂದಿದ್ದರು. ಅವರ ಮಾತಿಗೆ ಧ್ವನಿ ಗೂಡಿಸಿ, ಹೋದಾಗ ಅಲ್ಲಿ "ವೈದ್ಯೋ ನಾರಾಯಣೋ ಹರಿ” ಎನ್ನುವುದು ಯಾಕೆ ಎಂದು ಹೇಳುವ ಸಂಧರ್ಭ ಕಂಡು ಬಂತು. ದಕ್ಷ ಪ್ರಾಮಾಣಿಕ ವೈದ್ಯಾಧಿಕಾರಿ ಎಂದು ಜನರು ಹೇಳುವುದು ಯಾಕೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿತ್ತು. ಡಾ. ಕಾಶೀನಾಥ್ ಎಂಬುದು ಒಂದು ಶಕ್ತಿ ಎಂದು ಹೇಳುತ್ತಾರೆ ಸಾರ್ವಜನಿರು. ಬಲವಂತರು, ಹಣ ಉಳ್ಳವರು, ಬುದ್ದಿವಂತರು Emergency Ward ನಲ್ಲಿ ಕೈ ಕಟ್ಟಿ ನಿಂತಿದ್ದರು.
ಕುಟುಂಬ ಸದಸ್ಯರು ಒಂದೆಡೆ ಕಣ್ಣೀರು ಹಾಕುತ್ತಿದ್ದರೇ, ಅವರಿಗೆ ಸಂತೈಸುವುದು ವೈದ್ಯರೆ ಆಗಿದ್ದರು.
ಸಿಸ್ಟರ್ಸ್, ಬ್ರದರ್ಸ್‌ಗಳೆಲ್ಲರೂ ಡಾ. ಕಾಶೀನಾಥ್ ಅವರ ಆದೇಶವನ್ನ ಪಾಲಿಸುತ್ತಿದ್ದರು. ಆಕ್ಸಿಡೆಂಟ್ ಕೇಸ್ ಎನ್ನುವ ಪರಿವೇ ಇಲ್ಲದೆ ಚಿಕಿತ್ಸೆ ನೀಡುತ್ತಿದ್ದಾಗ, ಆಕ್ಸಿಡೆಂಟ್ ಆದ ವ್ಯಕ್ತಿಯ ಬಾಯಿಂದ ಸಿಡಿದ ರಕ್ತವು ಅವರ ಶರ್ಟ್ ಮೇಲೆ ಸಿಡಿದಿತ್ತು. ಚಿಕಿತ್ಸೆ ನೀಡುವಾಗ ಅದೆಲ್ಲ ಸಹಜವೆಂದು ಭಾವಿಸಿದರೂ, ಗಜೇಂದ್ರಗಡದ ಮಟ್ಟಿಗೆ ಡಾ. ಕಾಶೀನಾಥ್ ಪೂಜಾರಿ ಅವರಂತಹ ವೈದ್ಯರನ್ನ ಕಂಡಿಲ್ಲ.
ಚಿಕಿತ್ಸೆ ನೀಡುವುದು ಅಷ್ಟೆ ಅಲ್ಲ, ಬದಲಾಗಿ ಗದಗಕ್ಕೆ ಕರೆದುಕೊಂಡು ಹೋಗಿ ಎಂದು ಹೇಳುವ ವೈದ್ಯರ ನಡುವೆ, ಡಾ. ಕಾಶೀನಾಥ್ ಸ್ವತಃ ಅನಾರೋಗ್ಯ ಪೀಡಿತರನ್ನ ಆ್ಯಂಬುಲೆನ್ಸ್ ಏರಿ ಅವರೊಂದಿಗೆ ತೆರಳಿದ್ದು, ಅಕ್ಷರಶಃ ದೈವರಾಗಿ ಕಂಡರು. ಡಾ. ಕಾಶೀನಾಥ್ ಅವರ ಎದೆಗಾರಿಕೆ ಕಂಡು ಒಂದು ಕ್ಷಣ ನಾನೆ ಬೆರಗಾದೆ...!!!!
ಇಂದು ಅವರ ಕೆಲಸ ಕಾರ್ಯಕ್ಕೆ ಅದೆಷ್ಟೋ ಜನ ನೆನೆಯುತ್ತಾರೆ. ಅವರೆಲ್ಲರ blessings ಡಾ. ಕಾಶೀನಾತ್ ಅವರ ಬೆನ್ನಿಗೆ ಸದಾ ಹೀಗೆ ಇರಲಿ. ಅವರ ಸೇವೆ ಇನ್ನಷ್ಟು ನೆನೆಯುವಂತಾಗಲಿ ಎಂದು ಹಾರೈಸುತ್ತ...!!!
Post a Comment