ನೆಲ್ಲೂರಿನ ಮೊಹರಂ ಹಬ್ಬದಲ್ಲಿ ಭಾರತೀಯ ಸಂಸ್ಕೃತಿ ಅನಾವರಣ
ನೆಲ್ಲೂರು : (Jul_10_2025)
ರೋಣ ತಾಲೂಕು ಸೇರಿದಂತೆ ಎಲ್ಲೆಡೆ ಮುಂಗಾರು ಉತ್ತಮ ಮಳೆಯಾಗಲಿದೆ ಎಂದು ರಾಮಣ್ಣ ಶಿವಪ್ಪ ರಾಠೋಡ್ ಹೇಳಿದ್ದಾರೆ. ನೆಲ್ಲೂರು ಗ್ರಾಮದಲ್ಲಿ ಜರುಗುವ ದೊಡ್ಡಲಾಲಸಾಬ್ ಮಸೀದಿಯಲ್ಲಿ ಮೊಹರಂ ಹಬ್ಬದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹೇಳಿಕೆ ನೀಡಿದ್ದಾರೆ. ಮೊಹರಂ ಹಬ್ಬವನ್ನ ಆಡ ಹಬ್ಬದಂತೆ ಆಚರಿಸುತ್ತಾರೆ. ದುಷ್ಟ ಶಕ್ತಿಯನ್ನ ಹೋಗಲಾಡಿಸುವ ದೈವ ಪರಂಪರೆಯೂ ನಡೆದುಕೊಂಡು ಬಂದಿದೆ. ದೊಡ್ಡಲಾಲಸಾಬ್ ಮಸೀದಿಯ ಮೊಹರಂ ಆಚರಣೆ ನೆಲ್ಲೂರು, ಪ್ಯಾಟಿ, ರೋಣ, ಗಜೇಂದ್ರಗಡ ತಾಲೂಕು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಜನರು ಬಂದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ.
ಜಾತ್ಯಾತೀತವಾಗಿ ನಡೆಯುವ ಮೊಹರಂ ಹಬ್ಬ ಕತ್ತಲ ರಾತ್ರಿಯಂದು ಬೆಳದಿಂಗಳ ಹಬ್ಬದಂತೆ ಆಚರಿಸುತ್ತಾರೆ. ದೀಡ್ ನಮಸ್ಕಾರ ಹಾಕುವವರು ಮತ್ತೊಂದೆಡೆ, ಹೆಚ್ಚೆ ಕುಣಿತದೊಂದಿಗೆ ಜಾನಪದ ಹಾಡುಗಳು ಸಾಂಸ್ಕೃತಿಕ ಪರಂಪರೆಯನ್ನ ಬಿಂಬಿಸುತ್ತದೆ. ವಿವಿಧ ಬಗೆಯ ಉಡುಗೆ ತೊಡುಗೆಯೂ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿಯೂ ನೆಲ್ಲೂರಿನ ಮೊಹರಂ ರಾಜ್ಯಕ್ಕೆ ಮಾದರಿಯಾಗಿದೆ.
ಪಾಸಿಟಿವ್ ಎನರ್ಜಿಗೆ ಹೆಸರಾಗಿರುವ ಈ ಗ್ರಾಮದಲ್ಲಿ ಕತ್ತಲ ರಾತ್ರಿಯಂದು ಎಲ್ಲರೂ ಸೇರಿ ಹೆಜ್ಜೆ ಮೇಳ ಆಡುತ್ತಾರೆ. ಮಕ್ಕಳಾಗದವರಿಗೆ ವಿಶೇಷ ಮಧ್ಯ ರಾತ್ರಿ ಎರಡು ಗಂಟೆಗೆ ದೊಡ್ಡಲಾಲಸಾಬ್ ಶರಣರು ಉಡಿ ತುಂಬುವವ ಪ್ರತಿತಿಯೂ ಜಾರಿಯಲ್ಲಿದೆ.
ಸಮಸ್ತ ಗ್ರಾಮದ ಗುರುಹಿರಿಯರು, ಯುವಕ ಮಿತ್ರುರು ಮಹಿಳೆಯರಾದಿಯಾಗಿ ಮಕ್ಕಳಿಗೂ ಸಂಸ್ಕೃತಿ ಪರಂಪರೆಯನ್ನ ಕಲಿಸುವ ಪರಿಪಾಠ ರೂಢಿಯಲ್ಲಿದೆ.
ಜೊತೆಗೆ ಪ್ರಸಕ್ತ ವರ್ಷ ಮಸೀದಿಗೆ ಸಕ್ಕರೆಯೂ ಅಪಾರ ಪ್ರಮಾಣದಲ್ಲಿ ಬಂದಿದದ್ದು, ಶಾಸಕರಾದ ಜಿ.ಎಸ್. ಪಾಟೀಲ್ ಅವರು ಪೂಜೆಯಲ್ಲಿ ಭಾಗವಹಿಸಿದ್ದು, ಸಂತಸ ತಂದಿದೆ ಎಂದು ಶ್ರೀ ಮೌಲಾಲಿ ಕಮಿಟಿವತಿಯಿಂದ ಮಾಹಿತಿ ನೀಡಿದ್ದಾರೆ.
Post a Comment