Gajendragad : ಬೋರ್ಡ್ ಇಲ್ಲದೇ ಸರ್ಕಾರಿ ಬಸ್ ಸಂಚಾರ : ಸಾರಿಗೆ ಇಲಾಖೆ ನಿರ್ಲಕ್ಷ್ಯಕ್ಕೆ "ಜಕಸ" ತಾಲೂಕಾಧ್ಯಕ್ಷ ಮಹಮ್ಮದಗೌಸ್ ಆಕ್ರೋಶ
ಗಜೇಂದ್ರಗಡ : (Jul_23_2025)
ಕೆ.ಎಸ್. ಆರ್.ಟಿ.ಸಿ ಬಸ್ ಗಳಿಗೆ ಬೋರ್ಡ್ ಹಾಕದೇ ಸಂಚಾರ ಮಾಡುತ್ತಿರುವುದು ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಸಾರಿಗೆ ಇಲಾಖೆ ವ್ಯವಸ್ಥಾಪಕರು ಎಚ್ಚೆತ್ತು ಕೊಳ್ಳದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಜಯ ಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷ ಮಹಮ್ಮದಗೌಸ್ ಅಕ್ಕಿ ಹೇಳಿದರು.
ಗಜೇಂದ್ರಗಡದಲ್ಲಿ ಹಳ್ಳಿ ಕಡೆಗೆ ಹೊರಡುವ ಬಸ್ ಅಷ್ಟೆ ಅಲ್ಲದೇ, ರೋಣ, ಬಾದಾಮಿ, ಕುಷ್ಟಗಿ ಸೇರಿದಂತೆ ಬೇರೆಡೆ ತೆರಳುವ ಬಸ್ ಗಳಿಗೆ ಬೋರ್ಡ್ ಇರುವುದೇ ಇಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಪ್ರಯಾಣಿಕರು ಸಾಕಷ್ಟು ಬಾರಿ ಸಾರ್ವಜನಿಕರು ಬಂದು ಹೇಳಿದ್ದುಂಟು. ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ, ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಸಾರ್ವಜನಿಕರೇ ಬಂದು ಹೇಳುತ್ತಾರೆ. ಇದು ಹೀಗೆ ಮುಂದುವರೆದರೆ, ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸಾರಿಗೆ ಇಲಾಖೆಗೆ ಎಚ್ಚರಿಸಿದರು. ಇನ್ನೂ, ಕೆಲ ಸಿಬ್ಬಂದಿಗಳು ಬಸ್ ಗಳನ್ನ ಕೆಕೆ ಸರ್ಕಲ್ ನಲ್ಲಿ ನಿಲ್ಲಿಸುತ್ತಾರೆ. ಇದರಿಂದ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ. ಬಸ್ಸಿಗೆ ದಿಕ್ಕಿಲ್ಲ ದೆಸೆಯಿಲ್ಲ. ಎತ್ತ ಸಾಗುತ್ತವೆ ಗೊತ್ತಾಗುತ್ತಿಲ್ಲ ಎಂದು ಗುಡುಗಿದರು.
ಸುಗಮ ಸಂಚಾರಕ್ಕಾಗಿ ಸಿಗ್ನಲ್ ಹಾಕಿದ್ದರೂ, ಸಿಗ್ನಲ್ ನಿಂದ ಕೆಲವೆ ಅಂತದಲ್ಲಿ ಬಸ್ ನಿಲ್ಲಿಸುತ್ತಾರೆ. ಸಂಚಾರ ನಿಯಮದಡಿ ಸಾಗಿ, ಸಾರ್ವಜನಿಕರಿಗೂ ಅನುಕೂಲ ಮಾಡಿಕೊಡುವ ಜವಾಬ್ದಾರಿಯನ್ನ ಸಿಬ್ಬಂದಿಗಳು ಮರೆತಿದ್ದಾರೆ. ಸಾರಿಗೆ ಇಲಾಖೆ ವ್ಯವಸ್ಥಾಪಕರು ಪಂಪರು ನಿದ್ದೆಯಲ್ಲಿದ್ದಾರೆ ಎಂದು ಮಹಮ್ಮದಗೌಸ್ ಅಕ್ಕಿ ಹೇಳಿದರು.
ಈ ವೇಳೆ, ಹಿರಿಯರಾದ ಶರಣಪ್ಪ ಚಳಗೇರಿ, ಲಾಡಸಾಬ್ ದೊಡ್ಡಮನಿ, ರಾಜು ಸರ್ಕಾವಸ್, ಯುವಕರಾದ ರಾಘವೇಂದ್ರ ಹೂಗಾರ, ಸಾದಿಕ್ ಮೋಮಿಮ್, ರಮೇಶ್ ತಳವಾರ್, ಮಾಬುಸಾಬ್ ಡಾಲಾಯತ್, ಮುತ್ತಯ್ಯ ಬಿನ್ನಾಳಮಠ, ರಮೇಶ್ ವ್ಯಾಪಾರಿ, ಹನಮಂತಪ್ಪ ಜಿಗೇರಿ, ಬಬ್ಲು ಮನಿಯಾರ್, ಗಣೇಶ್ ಮುದಗಲ್ಲ, ಶರಣಪ್ಪ ಹಲಗಿ, ಹೈದರ್ ಅಲಿ ಹುನಗುಂದ್, ಖಾಸಿಮಸಾಬ್ ಮುಚ್ಚಾಲಿ ಸೇರಿದಂತೆ ಅನೇಕರು ಜೊತೆಗಿದ್ದರು.
Post a Comment