ಬಾಗಲಕೋಟೆ : ( Aug_31 _2025)
ಗಣೇಶ ಚತುರ್ಥಿ ಹಬ್ಬಕ್ಕೆ ತನ್ನದೆ ಆದ ಇತಿಹಾಸ, ಪರಂಪರೆ ಇದೆ. ಅದರಲ್ಲಿ ಮುಖ್ಯವಾಗಿ ಹೇಳುವುದಾದ್ರೆ, ಕೆರೆಕಟ್ಟೆಗಳಲ್ಲಿ ಹೂಳು ತುಂಬಿದಾಗ, ಮಣ್ಣನ್ನು ತೆಗೆದು ಆ ಮಣ್ಣಿನಿಂದ ಗಣೇಶನನ್ನ ಮಾಡುವುದು... ಕೆರೆ ಕಟ್ಟೆಗಳು ಒಂದೆಡೆ ಸ್ವಚ್ಛವಾಗುತ್ತಿದ್ದರೇ, ಮತ್ತೊಂದೆಡೆ, ಮನೆಮನಗಳಲ್ಲೂ ಗಣೇಶನ ಪೂಜೆ ಮಾಡುತ್ತಾರೆ. ಅದರಂತೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿಯನ್ನ ಸಡಗರ ಸಂಭ್ರಮದಿಂದ ಆಚರಿಸಲಾಯ್ತು. ಇಲ್ಲಿ ವಿಶೇಷವೆಂದರೇ, ಸಾರ್ವಜನಿಕರನ್ನ ಮತ್ತು ಆಸ್ಪತ್ರೆ ಸಿಬ್ಬಂದಿಗಳನ್ನ ಒಂದು ಮಾಡುವ ಪರಂಪರೆ ಕಂಡು ಬರುತ್ತದೆ. ಆಸ್ಪತ್ರೆಗೆ ಮತ್ತೆ ಬರ್ತಿವಿ ಅಂತಾ ಹೇಳಲ್ಲ... ಹೋಗಿ ಬನ್ನಿ ಅಂತಾ ಹೇಳಲೂ ಆಗುವುದಿಲ್ಲ. ಆದ್ರೆ, ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಸಾರ್ವಜನಿಕರು ನಾವು ಮತ್ತೆ ಬರ್ತಿವಿ ಅಂತಾ ಹೇಳಿ ಹೋಗಲು ಕಾರಣವೇ ಗಣೇಶ ಹಬ್ಬದ ಸಂಭ್ರಮ.
5 ದಿನಗಳ ಕಾಲ ಭಕ್ತಿ ಪೂಜೆ, ಜಾತ್ಯಾತೀತ ಸಾಮರಸ್ಯದ ಜೊತೆಗೆ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಮಹೇಶ್ ಕೋಣೆ ಸೇರಿದಂತೆ ಅಲ್ಲಿನ ಜವಾನರೂ ಕೂಡ ಒಂದಾಗಗಿ ಹಬ್ಬವನ್ನ ಆಚರಿಸುವುದು ಇಲ್ಲಿನ ಪರಂಪರೆಗೆ ಕೈಗನ್ನಡಿಯಾಗಿದೆ. ಇಲ್ಲಿ ಡಿ.ಎಸ್ ಯಾರೆ ಬಂದರೂ ಗಣೇಶ ಚತುರ್ಥಿಯ ಪರಂಪರೆಗೆ ಹೆಚ್ಚಿನ ಮೆರಗು ತಂದಿದ್ದಾರೆ. ಡಿ ಎಸ್ ಡಾ. ಮಹೇಶ್ ಕೋಣೆ ಅವರು ಬಾಗಲಕೋಟೆಗೆ ಬಂದ ನಂತರ ಇದು ಮೊದಲ ಗಣೇಶ ಹಬ್ಬವಾದ್ರೂ, ಹಬ್ಬದ ಕಳೆ ಮಾತ್ರ ಎಂದಿನಂತೆ ಜನಮನ ಗೆದ್ದಿತು.
ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ( DS ) ಡಾ. ಮಹೇಶ್ ಕೋಣೆ, ನಿವಾಸಿ ವೈದ್ಯಕೀಯ ಅಧಿಕಾರಿ(RMO) ಡಾ. ರಾಘವೇಂದ್ರ ಯರಗಾಂವಿ, ಜಿಲ್ಲಾ ಆಸ್ಪತ್ರೆಯ AAO ಲಿಂಗಣ್ಣನವರ್ಜೊತೆಗೆ ಗಜಾನನ ಯುವಕ ಮಂಡಳಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಗಣೇಶ ಚತುರ್ಥಿಯನ್ನ ಯಶಸ್ವಿಗೊಳಿಸಿದ್ದಾರೆ.
Post a Comment