ಬೆಂಗಳೂರು : (Oct_18_2025)
ಎಸ್ ಡಿ ಆರ್ ಪ್ರೊಡಕ್ಷನ್ ಅವರ ದ್ವಿತೀಯ ಚಿತ್ರ ‘ಮಾವುತ’ ಚಲನಚಿತ್ರ ಸಂಪೂರ್ಣ ಸಿದ್ದವಾಗಿದ್ದು ಶೀಘ್ರವೇ ತೆರೆಗೆ ಬರಲಿದೆ .
ಹೆಸರೇ ಸೂಚಿಸುವಂತೆ ಮಾವುತ ಹಾಗೂ ಆನೆಯ ಭಾಂದವ್ಯದ ಕಾಡಿನ ಕಥಾ ಹಂದರವುಳ್ಳ ಚಿತ್ರ. ಈ ಚಿತ್ರವು ಈಗಾಗಲೇ ಶಿವಮೊಗ್ಗದ ಸಕ್ರೆಬೈಲು ಅರಣ್ಯ , ಹೊಸ ನಗರದ ಶ್ರೀ ರಾಮಚಂದ್ರಪುರ ಮಠ, ನಿಟ್ಟೂರು ಹಾಗೂ ಸುತ್ತ ಮುತ್ತ ೪೫ ದಿನಗಳ ಕಾಲ ಚಿತ್ರೀಕರಿಸಲಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ನವೆಂಬರ್ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದ್ದಾನೆ. ಸಕ್ರೆಬೈಲಿನ "ಸಾಗರ್ " ಎಂಬ ಆನೆಯು ನಟಿಸಿರುವುದು ಈ ಚಿತ್ರದ ವಿಶೇಷ.
ಚಿತ್ರಕ್ಕೆ ಲಕ್ಷ್ಮೀಪತಿ ಬಾಲಾಜಿ ಬಂಡವಾಳ ಹಾಕುವುದರೊಂದಿಗೆ ನಾಯಕ ನಟನಾಗಿ ಅಭಿನಯಿಸಿದ್ದು, ಸಹ ನಿರ್ಮಾಪಕರಾಗಿ ಮುರುಳಿಧರ ತಿಪ್ಪುರ್, ಚಲುವರಾಜ್ ಎನ್ ಅವರು ಸಾಥ್ ಕೊಟ್ಟಿದ್ದಾರೆ. ರವಿಶಂಕರನಾಗ್ ರವರು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಹೊಣೆ ಹೊತ್ತಿದ್ದಾರೆ. ಛಾಯಾಗ್ರಾಹಕ ವೀನಸ್ ಮೂರ್ತಿಯವರು ಅದ್ಭುತ ಕೈಚಳಕ ತೋರಿದ್ದು, ವಿನು ಮನಸುರವರ ಸಂಗೀತದಲ್ಲಿ ನಾಲ್ಕು ಹಾಡುಗಳು ಅದ್ದೂರಿಯಾಗಿ ಮೂಡಿ ಬಂದಿವೆ, ರವಿವರ್ಮ ಹಿನ್ನೆಲೆ ಸಂಗೀತ ಸೊಗಸಾಗಿದೆ. ವೆಂಕಿ ಯುಡಿವಿ ಸಂಕಲನ, ಕಮಲ್ ಗೋಯಲ್ ಡಿಐ ,ಅಕ್ಷಯ್ ಅವರ ಸಿಜಿ ಕಾರ್ಯ ಹಾಗೂ ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆಯಲ್ಲಿ ಚಿತ್ರವು ತುಂಬಾ ಚೆನ್ನಾಗಿ ಮೂಡಿಬಂದಿದೆ. ಪಿಆರ್ ಓ ಸುಧೀಂದ್ರ ವೆಂಕಟೇಶ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರಾಗಿದ್ದಾರೆ. ಚಿತ್ರದ ತಾರಾಬಳಗದಲ್ಲಿ ಲಕ್ಷ್ಮೀಪತಿ ಬಾಲಾಜಿ, ಮಹಾಲಕ್ಷ್ಮಿ, ದಿವ್ಯಶ್ರೀ , ಥ್ರಿಲರ್ಮಂಜು, ಪದ್ಮವಾಸಂತಿ, ಬಲರಾಜ್ವಾಡಿ , ಲಯ ಕೋಕಿಲ, ನಂಜು ಸಿದ್ದಪ್ಪ , ಕೈಲಾಶ್ ಕುಟ್ಟಪ್ಪ , ಮೈಸೂರ್ ಸುಂದರ್ ,ಮೈಸೂರ್ ಮಂಜುಳ ಮೊದಲಾದವರು ಅಭಿನಯಿಸಿದ್ದಾರೆ.
**
ಡಾ.ಪ್ರಭು ಗಂಜಿಹಾಳ
ಮೊ-೯೪೪೮೭೭೫೩೪೬
Post a Comment