-->
Bookmark

Nellur : ಪಾಂಡುರಂಗ ದೇವಸ್ಥಾನಕ್ಕೆ ಒಂದುವರೆ ಲಕ್ಷ ಅನುದಾನ : ಮಹಾಬಲೇಶ್ವರ ಪಟಗಾರ್

Nellur : ಪಾಂಡುರಂಗ ದೇವಸ್ಥಾನಕ್ಕೆ ಒಂದುವರೆ ಲಕ್ಷ ಅನುದಾನ : ಮಹಾಬಲೇಶ್ವರ ಪಟಗಾರ್ 

ನೆಲ್ಲೂರು : (Oct_16_2025)
ಗ್ರಾಮದದಲ್ಲಿ ಪಾಂಡುರಂಗ ದೇವಸ್ಥಾನ ನಿರ್ಮಾಣಕ್ಕೆ ಅಡೆ ತಡೆ ಉಂಟಾಗಿದ್ದರಿಂದ ದೇವಸ್ಥಾನ ಪೂರ್ಣಗೊಳಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೇವಸ್ಥಾನಕ್ಕೆ ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ಡಿಡಿ ವಿತರಿಸಿದರು. ಡಿಡಿ ವಿತರಣೆ ವೇಳೆ, ಯೋಜನಾಧಿಕಾರಿಗಳಾದ ಮಹಾಬಲೇಶ್ವರ ಪಟಗಾರ್, ಸೇರಿದಂತೆ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಸಾಕ್ಷಿಯಾದ್ರು. 

ಈ ವೇಳೆ, ಮಾತನಾಡಿದ ತಾಲೂಕಾ ಮಾನ್ಯ ಯೋಜನಾಧಿಕಾರಿಗಳಾದ ಮಹಾಬಲೇಶ್ವರ ಪಟಗಾರ್, ಶ್ರೀ ಕ್ಷೇತ್ರ ಜನರ ಸೇವೆಗಾಗಿಯೇ ಇದೆ. ಬಡವರ ಪಾಲಿನ ಆಶಾ ಕಿರಣವಾಗಿದೆ. ಹಲವಾರು ಯೋಜನೆಗಳಿದ್ದು, ಸಾರ್ವಜನಿಕರು ಈ ಯೋಜನೆಯ ಲಾಭ ಪಡೆಯಬೇಕೆಂದು ಮನವಿ ಮಾಡಿದರು. 
ಇನ್ನೂ, ಜನರ ಆರೋಗ್ಯ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.

ಬಸಲಿಂಗಯ್ಯ ಹಿರೇಮಠ, ಸತ್ಯಪ್ಪ ವಾಲಿಕರ್, ರಾಮಪ್ಪ ತಳವಾರ್, ಕುಮಾರಾಯ ಜುಪ್ತಿಮಠ, ಗ್ರಾ.ಪಂ. ಸದಸ್ಯ ದೇವಿಂದ್ರ ಲಮಾಣಿ, ಮಾಗುಂಡಯ್ಯ ನರಗುಂದ್ ವೀರನಗೌಡ ಗೌಡರ್,
ಮಾಗುಂಡಪ್ಪ ಇಸರನಾಳ, ಪಾಂಡುರಂಗ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಶರಣಪ್ಪ ಕಾರ್ಬಾರಿ, ನವೀನ ರಾಥೋಡ್, ಹನುಮಂತ ಭಜಂತ್ರಿ, ನಾಗಪ್ಪ ಲಮಾಣಿ, ಗುರು ಬಸವ ತೋಟದ್, ಗ್ರಾ.ಪಂ ಉಪಾಧ್ಯಕ್ಷರಾದ ಈರಣ್ಣ ಅಂಗಡಿ, ಭದ್ರಪ್ಪ ರಾಥೋಡ್, ಸಂಗಪ್ಪ ಚವಾಣ್, ವಸಂತ್ ರಾಥೋಡ್, ರಮೇಶ್ ಲಮಾಣಿ, ಶರಣಪ್ಪ ಕಿತ್ತೂರು, ವೀರನಗೌಡ ಚಂಪನಗೌಡ್ರು, ಅಂದಯ್ಯ ಸಿಪಾಯಿ, ರುದ್ರಯ್ಯ ಜಿಗಳೂರು, ಖಾನಪ್ಪ ಗೌಡ್ರ, ನಿಂಗರಾಜ್ ಬಡಿಗೇರ್, ನಿಂಗರಾಜ್ ಅಂಗಡಿ, 
ಹನುಮಂತ ದೊಡ್ಡಮನಿ, ಈರಪ್ಪ ಮಾದರ್, ಶಿವರಾಜ್ ಭಜಂತ್ರಿ, ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
Post a Comment

Post a Comment