-->
Bookmark

Gajendragad : ಬದಲಾಗಬೇಕಿದೆ ಕಸಾಪ ತಾಲೂಕಾಧ್ಯಕ್ಷರು...? ಹೀಗೊಂದು ಗಾಳಿ ಸುದ್ದಿಯ ಜಾಲ...!!!

Gajendragad : ಬದಲಾಗಬೇಕಿದೆ ಕಸಾಪ ತಾಲೂಕಾಧ್ಯಕ್ಷರು...? ಹೀಗೊಂದು ಗಾಳಿ ಸುದ್ದಿಯ ಜಾಲ...!!!

ಗಜೇಂದ್ರಗಡ : (Oct_18_2025)
ಈಗ ನಾವು ಅಕ್ಟೋಬರ್ ತಿಂಗಳಲ್ಲಿದ್ದೇವೆ ಕನ್ನಡಾಂಬೆಗೆ ನಮಿಸಲು ಸಜ್ಜಾಗಿದ್ದೇವೆ. ಗದಗ ಜಿಲ್ಲೆಯಲ್ಲಿ ಗಜೇಂದ್ರಗಡ ಪಟ್ಟಣದಲ್ಲಿ ಕನ್ನಡ ತಾಯಿಗೆ ಶ್ರಮಿಸಿದವರೂ ಲಕ್ಷಾಂತರ ಜನರಿದ್ದಾರೆ. ಹಲವು ಕನ್ನಡಪರ ಸಂಘಟನೆಗಳು, ಸಂಸ್ಥೆಗಳು, ಸಾಹಿತಿಗಳು, ಕವಿಗಳು, ಶಿಕ್ಷಕರು, ಹಿರಿಯರು, ಕಿರಿಯರು, ಮಹಿಳೆಯರು, ಹೀಗೆ ಹೇಳತೀರದು, ಕನ್ನಡ‌ ಸಾಹಿತ್ಯ ಪರಿಷತ್ ಅನ್ನು ಕಟ್ಟಿ ಬೆಳೆಸಿದವರನ್ನ ನೆನೆಯುತ್ತ ಸಾಗಬೇಕಾದರೇ, ಗಜೇಂದ್ರಗಡ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದರೆ ಬೇಕಾಬಿಟ್ಟಿಯಾಗಿದೆ. 

ಕನ್ನಡ ಸಾಹಿತ್ಯ ಪರಿಷತ್ ನ ಧ್ಯೇಯ_ಉದ್ದೇಶವನ್ನೆ ಮರೆತಿದ್ದಾರೆ. ಸಾಹಿತ್ಯ ಸಮ್ಮೆಳನ ಮಾಡಿ, ಸಾಹಿತ್ಯ ಪರಿಷತ್ ಬೆಳೆಯುತ್ತದೆ ಎಂದು ಮನದಲ್ಲಿರಿಸಿಕೊಂಡು ಸಾಗುವವರಿಗೇಕೆ ಬೇಕು ತಾಲೂಕಾಧ್ಯಕ್ಷರ ಪಟ್ಟ ಎಂದು ತಾಲೂಕಿನಲ್ಲಾಗಲೇ ಚರ್ಚೆಯಾಗುತ್ತಿದೆ. 

ತಾಲೂಕಾಧ್ಯಕ್ಷರ ಬದಲಾವಣೆ ಯಾಗಬೇಕು. ಪರಿಷತ್ ಚುನಾವಣೆ ವೇಳೆ ಮಾಡಿದ ಆಶ್ವಾಸನೆ ಮೂಲೆಗುಂಪಾಗಿದ್ದು, ಒಂದೆಡೆಯಾದ್ರೆ, ಸಾಹಿತ್ಯ ಪರಿಷತ್ ನ ಕಾರ್ಯ ಚಟುವಟಿಕೆಗಳೆ ನಿಂತು ಹೋಗಿವೆ. 

ಅದೆಷ್ಟೋ ಶಿಕ್ಷಕರು ಸಾಹಿತ್ಯ ಪರಿಷತ್ ಗೆ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಾರೆ. ಬದಲಾಗಬೇಕೆಂದು ಹೇಳುತ್ತಾರೆ. ಆದ್ರೆ, ಗಜೇಂದ್ರಗಡ ತಾಲೂಕಿನ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಎ.ಪಿ ಗಾಣಗೇರ್ ಸರ್ವಾಧಿಕಾರ ಧೋರಣೆಯಿಂದ ಬೇಸತ್ತಿದ್ದಾರೆ.  

ಜಿಲ್ಲಾಧ್ಯಕ್ಷರು ಸಹ ಸಹನೆ ತಾಳ್ಮೆಯಿಂದಿದ್ದಾರೆ. ಅವರು ಕನ್ನಡಾಂಬೆಗೆ ನೆನೆಯುವಷ್ಟು. ಪುಸ್ತಕ, ಕಥೆ, ಕವನ ಬರೆದಷ್ಟಾಗದಿದ್ದರೂ, ಕನ್ನಡದ ಮೇಲೆ ಪ್ರೀತಿ, ಕಾಳಜಿ ಆದ್ರೂ, ಇರಬೇಕಲ್ಲ ಎಂದು ಹೇಸರು ಹೇಳಲು ಇಚ್ಚಿಸದವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. 

ಜಿಲ್ಲಾ, ತಾಲೂಕಾ ಸಮ್ಮೇಳನ ಮಾಡಿ, ಪಟ್ಟಣದಲ್ಲಿ ಹಾಕಿದ ಕನ್ನಡಾಂಬೆಯ ಸಂಕೇತವಾದ ಹಳದಿ, ಕೆಂಪು ಬಟ್ಟೆಗಳನ್ನ ಬೀದಿ ದೀಪಗಳ ಖಂಬಗಳಲ್ಲಿ ಕೊಳೆತ ಸ್ಥಿತಿ ತಲುಪಿದರೂ, ಈ ಬಗ್ಗೆ ಸುದ್ದಿ ಮಾಡಿದರೂ, ಕ್ರಮ ಕೈಗೊಳ್ಳದ ಸ್ಥಿತಿ ತಲುಪಿದ್ದು, ಶೋಚನೀಯ. 

ಈಗ ಮತ್ತೆ ನವೆಂಬರ್ ತಿಂಗಳು ಆಗಮಿಸುತ್ತಿದೆ. ಕನ್ನಡ ತಾಯಿಗೆ ನಮಿಸಿ, ಪೂಜಿಸುವ ಹಬ್ಬಗಳು ಬಂದಿವೆ. ಈಗಲಾದರೂ, ತಾಲೂಕಾಧ್ಯಕ್ಷರ ಬದಲಾಗುವಂತೆ ಪಣ ತೊಡೊಣ. ಈ ಬಗ್ಗೆ ಇನ್ನಷ್ಟು ಮಗಷ್ಟು ಸುದ್ದಿಗಳು ಮುಂಬರುವ ದಿನಗಳಲ್ಲಿ ನಿರೀಕ್ಷಿಸಿ...!!

ಕೃಷ್ಣ ರಾಠೋಡ್, 
ಸಂಪಾದಕರು 
ಕಿರಾ ನ್ಯೂಸ್ ಕನ್ನಡ 
ಸಂಪರ್ಕ : 8197474996
Post a Comment

Post a Comment