-->
Bookmark

Gajendragad : *೨೩ ರಂದು ಕಸಾಪ ಅಜೀವ ಸದಸ್ಯರ ಸಭೆ.*

Gajendragad : *೨೩ ರಂದು ಕಸಾಪ ಅಜೀವ ಸದಸ್ಯರ ಸಭೆ.*

*ನಿಷ್ಕ್ರಿಯಗೊಂಡ ಕಸಾಪ ಕುರಿತು ಮಹತ್ವದ ಚರ್ಚೆ*

*ಹೆಚ್ಚಿದ ಕಸಾಪ ಅಧ್ಯಕ್ಷರ ಬದಲಾವಣೆ ಕೂಗು*

ಗಜೇಂದ್ರಗಡ : (Oct_22_2025)
ಕಿರಾ ನ್ಯೂಸ್ ಕನ್ನಡದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಗಜೇಂದ್ರಗಡದ ತಾಲೂಕಾಧ್ಯಕ್ಷರ ಬದಲಾವಣೆ ಕುರಿತು ಪ್ರಕಟಿಸಿದ ಸುದ್ದಿ ಫಲಶೃತಿ..‌.

ತಾಲೂಕಾಧ್ಯಕ್ಷರ ಬದಲಾವಣೆಗೆ ಸಾಹಿತ್ಯಾಸಕ್ತರು, ಚಿಂತಕರು, ಸಾಹಿತಿಗಳು, ಪತ್ರಕರ್ತರು, ಕಸಾಪ ಅಜೀವ ಸದಸ್ಯರು, ಸಂಘಟನೆಗಳು, ಸಂಘಸಂಸ್ಥೆಗಳು, ಮತ್ತು ಕನ್ನಡ ಮನಸ್ಸುಗಳು ಬೆಂಬಲ ಸೂಚಿಸಿ ಇದೆ ಅಕ್ಟೋಬರ್ 23 ರಂದು ಗುರುವಾರ ಸಂಜೆ 5: 30 ಗಂಟೆಗೆ ಗಜೇಂದ್ರಗಡದ ಮೈಸೂರು ಮಠದಲ್ಲಿ ಸಭೆ ನಡೆಸಲಿದ್ದಾರೆ.

ಈ ಸಭೆಯಲ್ಲಿ    ತಾಲೂಕಾಧ್ಯಕ್ಷರ ಬದಲಾವಣೆ- ನಿಷ್ಕ್ರಿಯಗೊಂಡ ಸಮಿತಿ ಕುರಿತು. ಹಾಗೂ ಕಸಾಪದ ಲೆಕ್ಕಪತ್ರ, ಮತ್ತು ಇನ್ನುಮುಂದೆ ಕಸಾಪ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 
*ಪ್ರಮುಖವಾಗಿ ಚರ್ಚೆಯಾಗಲಿರುವ ವಿಷಯಗಳು*
1.ಕಸಾಪ ಕಾರ್ಯ ಚಟುವಟಿಕೆಗಳ ಪುನಶ್ಚೇತನ
2.ನಿಷ್ಕ್ರಿಯ ಸಮಿತಿ ಕುರಿತು.
3.ಲೆಕ್ಕಪತ್ರ ಕುರಿತು
4.2021 ರಿಂದ ದತ್ತಿನಿಧಿಗಳ ಬಳಕೆ ಮಾಹಿತಿ ಸೇರಿದಂತೆ ಇತರೆ ವಿಷಯಗಳು ಚರ್ಚೆಯಾಗಲಿವೆ. 

ಸಭೆ ನಡೆಸುವ ಕುರಿತು ಹಾಗೂ ಸಮಿತಿಯ ನಿಷ್ಕ್ರಿಯತೆ ಕುರಿತು  ಜಿಲ್ಲಾಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ್ ಅವರಿಗೂ ಮಾಹಿತಿ ನೀಡಲಾಗಿದ್ದು ಕಸಾಪ ತಾಲೂಕಿನ ಅಜೀವ ಸದಸ್ಯರಿಗೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಈ ಮಧ್ಯೆ, ಕಸಾಪ ಅಧ್ಯಕ್ಷರಾದ ಎ.ಪಿ.ಗಾಣಗೇರಿ ಅವರು ಇದೆ ಶನಿವಾರ ಅಕ್ಟೋಬರ್ 25 ರಂದು ಸಭೆ ಕರೆದಿದ್ದು ಈ ಹಿನ್ನೆಲೆ 23 ರಂದು ಗುರುವಾರ ನಡೆಯಲಿರುವ ಪೂರ್ವಭಾವಿ ಸಭೆ ಮಹತ್ವ ಪಡೆದುಕೊಂಡಿದೆ. 

ಕಸಾಪ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಕಸಾಪ ಅಧ್ಯಕ್ಷರು failure ಎದ್ದು ಕಾಣುತ್ತಿದೆ. ಹಾಲಿ ಅಧ್ಯಕ್ಷರ ವಿರುದ್ಧವೇ ಇಂತಹ ಆರೋಪಗಳು ಕೇಳಿ ಬಂದಿದೆ ಎಂದರೆ ತಾಲೂಕಾಧ್ಯಕ್ಷರಾದ ಎ.ಪಿ ಗಾಣಗೇರ್ ಅವರು ತಾವಾಗಿಯೇ ರಾಜೀನಾಮೆ ‌ಕೊಡ್ತಾರಾ ? ಇಲ್ಲ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಪಡೆಯುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ. 

23 ರಂದು ನಡೆಯುವ ಸಭೆಗೆ ಅವರಿರವನ್ನೆದೆ ಕನ್ನಡದ ಎಲ್ಲ ಮನಸ್ಸುಗಳು ಭಾಗವಹಿಸಬಹುದಾಗಿದೆ.
ಅಕ್ಟೋಬರ್ 23 ರಂದು ನಡೆಯಲಿರುವ ಸಭೆಗೆ ಹೆಚ್ಚಿನ‌ ಮಹತ್ವ ಪಡೆದುಕೊಂಡಿದ್ದು ಸಭೆ ಬಳಿಕ ಏನಾಗಲಿದೆ ಎನ್ನುವುದು ಅತ್ಯಂತ ಕುತೂಹಲ ಮೂಡಿಸಿದೆ. 

ಬಹಿರಂಗವಾಗಿಯೇ ಈಗಾಗಲೇ ಅಧ್ಯಕ್ಷರು ಹಾಗೂ ಸಮಿತಿಯ ಕುರಿತು ಅಸಮಾಧಾನ ಹೊರಹಾಕಿರುವ ಕಸಾಪ ಮಾಜಿ ಕಾರ್ಯದರ್ಶಿ ದಾವಲಸಾಬ್ ತಾಳಿಕೋಟಿ, ಬಸವರಾಜ್ ಶೀಲವಂತರ್, ಕಸಾಪ ಮಾಜಿ ಅಧ್ಯಕ್ಷ ಆರ್.ಕೆ.ಬಾಗವಾನ್ ಸೇರಿದಂತೆ ಇನ್ನು ಅನೇಕ ಪ್ರಮುಖ ಸದಸ್ಯರು ಇದರ ನೇತೃತ್ವ ವಹಿಸಿದ್ದು ಕೂಡಾ ಮತ್ತಷ್ಟು ಬಲ ತಂದಿದೆ.

ನಾಳೆ ನಡೆಯುವ ಸಭೆಯಲ್ಲಿ ಮತ್ತಣ್ಣ ಯಲಬುಣಚಿ, ಹುಚ್ಚಪ್ಪ ಹಾವೇರಿ, ಚೈತ್ರಾ ವಿಶ್ವಬ್ರಾಹ್ಮಣ, ಮೌನೇಶ್ ವಿಶ್ವಬ್ರಾಹ್ಮಣ, ರವಿ ಗುರಿಕಾರ್,
 ಬಸವರಾಜ್ ಅಂಗಡಿ, ಕೆ.ಎಸ್.ಕೊಡತಗೇರಿ, ಭೀಮಣ್ಣ ಇಂಗಳೆ, ಅಶೋಕ್ ಬೇವಿನಕಟ್ಟಿ, ಮಾಹಂತೇಶ್ ಮಳಗಿ, ವಿಜಯಕುಮಾರ್ ನೂಲ್ವಿ, ಬಿ ಸಿ ಗೌರಿಮಠ, ಆರ್.ಬಿ ಹೋಳಗಿ ಸೇರಿದಂತೆ ಅಜೀವ  ಸದಸ್ಯರು ಭಾಗವಹಿಸಲಿದ್ದಾರೆ.

ಕೃಷ್ಣ ರಾಠೋಡ್, 
ಸಂಪಾದಕರು,
ಕಿರಾ ನ್ಯೂಸ್ ಕನ್ನಡ
ಸಂಪರ್ಕ : 8197474996
Post a Comment

Post a Comment