ಗಜೇಂದ್ರಗಡ: (Oct_22_2025)
ಬೆಂಗಳೂರು ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಡಾ.ಐ.ಜೆ. ಮ್ಯಾಗೇರಿ ಹಾಗೂ ಸರಕಾರಿ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯನಿ ಶ್ರೀಮತಿ ಫರೀದಾಬೇಗಂ ಢಾಲಾಯತ ಅವರ ಸುಪುತ್ರಿ ಕು. ನೀಲುಫರ್ ಇಮಾಮಸಾಬ ಮ್ಯಾಗೇರಿ ಅವರು ಸದ್ಯ ಬೆಂಗಳೂರಿನ ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ಎಂ ಎ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದು
ಉನ್ನತ ಮಟ್ಟದ ಅಧ್ಯಯನಕ್ಕಾಗಿ ಪ್ರಾನ್ಸ್ ದೇಶಕ್ಕೆ ಪ್ರವಾಸ ಬೆಳೆಸಿದ್ದು ಅವರ ಉನ್ನತ ಅಧ್ಯಯನ ಹಾಗೂ ಪ್ರವಾಸ ಸುಖಕರವಾಗಿರಲಿ ಎಂದು ಅಂಜುಮನ್ ಇಸ್ಲಾಂ ಕಮೀಟಿ ಚೇರಮನ್ನ ಹಸನಸಾಬ ತಟಗಾರ, ಮಾಜಿ ಕಾರ್ಯದರ್ಶಿ ವಕೀಲ ದಾವಲಸಾಬ ತಾಳಿಕೋಟಿ, ಕಾರ್ಯದರ್ಶಿ ಫಯಾಜ್ ತೋಟದ, ಮಾಸುಮಲಿ ಮದಗಾರ, ನಾಸೀರ್ ಸುರಪುರ, ದಾದು ಹಣಗಿ, ಸುಭಾನಸಾಬ ಆರಗಿದ್ದಿ, ಶೌಕತ್ ಅಲಿ ಅರಳಿಕಟ್ಟಿ, ಸೇರಿದಂತೆ ಸಮಾಜ ಭಾಂದವರು, ಗಣ್ಯರು ಶುಭ ಹಾರೈಸಿದರು.
"ಅವರ ತಂದೆ ಡಾ. ಐ.ಜಿ ಮ್ಯಾಗೇರಿಯವರು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಅಧೀಕ್ಷಕರಾಗಿ(SP) ಸೇವೆ ಸಲ್ಲಸುತ್ತಿದ್ದು ಅವರ ಸೇವೆಯನ್ನು ಗುರುತಿಸಿ ಸರ್ಕಾರ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಿದೆ. ಅದೇ ರೀತಿ ಅವರ ತಾಯಿ ಫರೀಧಾಬೇಗಂ ಢಾಲಾಯತ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರು, ಮಗಳು ಕೂಡಾ ಅತ್ಯಂತ ಪ್ರತಿಭಾನ್ವಿತೆ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು, ದೇಶ ಸುತ್ತು ಕೋಶ ಓದು ಎನ್ನುವ ಹಾಗೆ ಮಕ್ಕಳಿಗೆ ಉನ್ನತ ಅಭ್ಯಾಸ ನೀಡುತ್ತಿರುವ ದಂಪತಿಗಳಿಬ್ಬರಿಗೂ ಅಭಿನಂದನೆಗಳು. ನೀಲು ಅವರ ಉನ್ನತ ಮಟ್ಟದ ವಿದೇಶ ಪ್ರವಾಸ ಯಶಸ್ವಿಯಾಗಲಿ."
- ಹಸನಸಾಬ್ ತಟಗಾರ್
-ಅಂಜುಮನ್ ಇಸ್ಲಾಂ ಕಮೀಟಿ ಚೇರಮನ್ನ ಗ.ಗಡ
Post a Comment