-->
Bookmark

Gajendragad : ಕಸಾಪ ತಾಲೂಕಾಧ್ಯಕ್ಷರ ಬದಲಾವಣೆ, ಜಿಲ್ಲಾಧ್ಯಕ್ಷರ ಜಾಣ ಮೌನ : ದಾವಲಸಾಬ ತಾಳಿಕೋಟಿ

Gajendragad : ಕಸಾಪ ತಾಲೂಕಾಧ್ಯಕ್ಷರ ಬದಲಾವಣೆ, ಜಿಲ್ಲಾಧ್ಯಕ್ಷರ ಜಾಣ ಮೌನ : ದಾವಲಸಾಬ ತಾಳಿಕೋಟಿ 

ಗಜೇಂದ್ರಗಡ : (Oct_20_2025)
ಕನ್ನಡ ಸಾಹಿತ್ಯ ಪರಿಷತ್ತು ನಿಷ್ಕ್ರಿಯಗೊಂಡಿದ್ದು, ಈ ಹಿಂದೆ ದಿ.ಐ ಎ ರೇವಡಿಯವರು ಎಲ್ಲರನ್ನೊಳಗೊಂಡಂತೆ ಕ್ರೀಯಾಶೀಲವಾಗಿ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದರು. 

ಇದೀಗ ಇವರ ಅವಧಿಯಲ್ಲಿ ಇದುವರೆಗೂ ಅಜೀವ ಸದಸ್ಯರ ಸಭೆ ಕಾರ್ಯಕಾರಿ ಮಂಡಳಿ ಸದಸ್ಯರ ಸಭೆ ಸೇರಿದಂತೆ ಯಾವುದೇ ಲೆಕ್ಕಪತ್ರವನ್ನು ಮಂಡನೆ ಮಾಡಿರುವುದಿಲ್ಲ ಎಂದು  ಕಸಾಪ ಅಜೀವ ಸದಸ್ಯ ಹಾಗೂ
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

ಕಿರಾ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಅವರು,
ತಾಲೂಕಿನಲ್ಲಿ ಅನೇಕರು ದತ್ತಿನಿಧಿಗಳನ್ನು ಡೆಪಾಸಿಟ್ ಆಗಿ ಇಟ್ಟಿದ್ದಾರೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಅವುಗಳನ್ನು ಸರಿಯಾಗಿ ಸದ್ಬಳಕೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಜರಿದರು. 

ಪ್ರಶ್ನೆ ಮಾಡಿದವರನ್ನು ಹೊರಗಿಡುವ ಚಾಳಿ ಮುಂದುವರೆಯುತ್ತಿದೆ. ಇದು ಖಂಡನೀಯ. ಕನ್ನಡ ಸಾಹಿತ್ಯ ಪರಿಷತ್ತು, ಪ್ರತಿಯೊಬ್ಬ ಕನ್ನಡಿಗನಿಗೂ ಸೇರಿದ್ದಾಗಿದೆ.

ಈ ಮಧ್ಯೆ, ಜಿಲ್ಲಾಧ್ಯಕ್ಷರು ಈ ಬೆಳವಣಿಗೆಯನ್ನು ಕಂಡು ಕಾಣದಂತೆ ಜಾಣಾ ಮೌನ ವಹಿಸಿರುವುದು ದುರದೃಷ್ಟ.. ತಕ್ಷಣವೇ ಕಸಾಪ ಜಿಲ್ಲಾಧ್ಯಕ್ಷರೂ ಮಧ್ಯಪ್ರವೇಶ ಮಾಡಿ ನಿಷ್ಕ್ರಿಯಗೊಂಡಿರುವ ತಾಲೂಕಾಧ್ಯಕ್ಷರ ರಾಜೀನಾಮೆ ಪಡೆದು ಕ್ರೀಯಾಶೀಲ, ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಸರ್ವರನ್ನು ಒಳಗೊಂಡಂತೆ ಮುನ್ನಡೆಸಿಕೊಂಡು ಹೋಗುವವರನ್ನು ಗುರುತಿಸಿ, ಜವಾಬ್ದಾರಿ ನೀಡಿದರೆ ಸೂಕ್ತ ಎನ್ನುವುದು, ಅನೇಕ ಅಜೀವ ಸದಸ್ಯರ ಅಭಿಪ್ರಾಯ ಕೂಡಾ ಆಗಿದೆ ಎಂದು ತಿಳಿಸಿದರು.‌

ಗಜೇಂದ್ರಗಡದಲ್ಲಿಯೇ ಗದಗ ಜಿಲ್ಲಾ೧೦ ನೇ  ಸಮ್ಮೇಳನ ಹಾಗೂ ಗಜೇಂದ್ರಗಡ ತಾಲೂಕು ಪ್ರಥಮ ಸಮ್ಮೇಳನ ನಡೆದು ಇದೀಗ ವರ್ಷ ಕಳೆಯುತ್ತಾ ಬಂದ್ರು, ಇದುವರೆಗೂ ಲೆಕ್ಕಪತ್ರ ಇಲ್ಲ.. ಅಧ್ಯಕ್ಷರಷ್ಟೆ, ಕಸಾಪ ಗೌರವ ಕಾರ್ಯದರ್ಶಿಗಳು ಕೂಡಾ ನಿಷ್ಕ್ರಿಯಗೊಂಡಿದ್ದಾರೆ. ಅಲ್ಲದೇ ಇಡೀ ಸಮಿತಿಯೇ ಕೇವಲ ಆದೇಶ ಪ್ರತಿಗಳಲ್ಲಿ ಕಾಣಬಹುದೇ ವಿನಹ ಬೇರೆಡೆ ಕಾಣಲು ಸಾಧ್ಯವಿಲ್ಲ ಎಂದು ಖಾರವಾಗಿಯೇ ಉತ್ತರಿಸಿದರು.
Post a Comment

Post a Comment