ಗಜೇಂದ್ರಗಡ : (Oct_19_2025)
ಕನ್ನಡ ಸಾಹಿತ್ಯ ಪರಿಷತ್ ವಿಷಯದಲ್ಲಿ ಕನ್ನಡ ತಾಯಿ ಮಕ್ಕಳೆಲ್ಲರೂ ಪ್ರಶ್ನೆ ಮಾಡಬೇಕು. ಸರ್ವಾಧಿಕಾರಿ ಧೋರಣೆಗೆ ಹೆದರಿದರೇ, ಪ್ರಶ್ನೆ ಮಾಡುವ ಹಕ್ಕನ್ನ ಕಳೆದುಕೊಳ್ಳ ಬೇಕಾಗುತ್ತದೆ ಎಂದು ಯುವಕ ಮೌನೇಶ್ ವಿಶ್ವಬ್ರಾಹ್ಮಣ ಅಭಿಪ್ರಾಯ ಪಟ್ಟಿದ್ದಾರೆ.
ಗಜೇಂದ್ರಗಡ ತಾಲೂಕಾಧ್ಯಕ್ಷರು ಎಲ್ಲರನ್ನ ಕಡೆಗಣಿಸಿದ್ದಾರೆ. ಒಕ್ಕೊರಲಾಗಿ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಕಸಾಪ ಖಸಗಿ ಸ್ವತ್ತಾಗಿ ಪರಿವರ್ತನೆ ಗೊಳ್ಳಲಿದೆ ಎಂದು ಹೇಳಿದರು.
ಕೇವಲ ಆಜೀವ ಸದಸ್ಯರಲ್ಲದೇ, ತಾಲೂಕಿನ ಜನತೆ ಬೀದಿಗಿಳಿದು ಹೋರಾಟ ಮಾಡುವ ಅಗತ್ಯ ಇದೆ. ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಹಾಗೆ ವರ್ತಿಸುತ್ತಾರೆ. ಅವರ ನಡೆಯನ್ನ ತಾಲೂಕಾಧ್ಯಕ್ಷರು ಮುಂದುವರಿಸಿದ್ದಾರೆ. ಈ ಸರ್ವಾಧಿಕಾರಿ ಧೋರಣೆಗೆ ಬ್ರೇಕ್ ಹಾಕಬೇಕು. ಮುಂಬರುವ ಅಧ್ಯಕ್ಷರು ಇದನ್ನೆ ಪಾಲಿಸಿಕೊಂಡು, ಇವರ ಉದಾಹರಣೆ ಕೊಡುವ ದಿನಗಳು ದೂರವಿಲ್ಲ. ಹೀಗಾಗಿ, ಕಸಾಪ ತಾಲೂಕಾಧ್ಯಕ್ಷರು ರಾಜೀನಾಮೆ ಕೊಡುವುದು ಸೂಕ್ತ ಎಂದು ಮೌನಶ್ ಅಭಿಪ್ರಾಯ ಪಟ್ಟಿದ್ದಾರೆ.
Post a Comment