ಗಜೇಂದ್ರಗಡ : (Oct_19_2025)
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನಲ್ಲಿ ಕಸಾಪ ಹಲ್ಲಿಲ್ಲದ ಹಾವಿನಂತಾಗಿದೆ ಎಂದು ಕಸಾಪ ಆಜೀವ ಸದಸ್ಯರಾದ ಚೈತ್ರಾ ವಿಶ್ವ ಬ್ರಾಹ್ಮಣ ಹೇಳಿದ್ದಾರೆ. ಕಸಾಪ ಚುನಾವಣೆ ನಡೆದಾಗ ಬಹಳಷ್ಟು ಆಶ್ವಾಸನೆಗಳನ್ನ ನೀಡಿದ್ದಾರೆ. ಅದರಲ್ಲಿ ಒಂದಾದರೂ ಈಡೇರಿಸಿದ್ದಾರೆಯೇ ಎಂದು ಅಸಮಾಧಾನ ಹೊರಹಾಕಿದರು.
ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಾ ಬಂದಿದ್ದಾರೆ. ಕಸಾಪ ವಾರದ ಗೋಷ್ಠಿ ನಡೆಸಿದರೇ, ಸಾಲದು ಎನ್ನುವವರು ಈಗ ಏನು ಮಾಡಿದ್ದಾರೆ.
ಮಕ್ಕಳ ಸಾಹಿತ್ಯ ಮಣ್ಣು ಪಾಲಾಗಿದೆ. ಮಹಿಳಾ ಸಾಹಿತಿಗಳಿಗೆ, ಬರಹಗಾರರಿಗೆ ದೂರ ಇರಿಸಿದ್ದಾರೆ. ಇವರು ಯಾರಿಗೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಿದರು.
ಖರ್ಚು ವೆಚ್ಚದ ಬಗ್ಗೆಯೂ ಯಾರಿಗೂ ಹೇಳಿಲ್ಲ. ಈ ಬಗ್ಗೆ ಪ್ರಶ್ನೆ ಮಾಡುವವರನ್ನ ಮೂಲೆ ಗುಂಪು ಮಾಡುತ್ತಾರೆ ಎಂದು ಚೈತ್ರಾ ಅಸಮಾಧಾನ ಹೊರ ಹಾಕಿದ್ದಾರೆ.
Post a Comment