-->
Bookmark

Belagavi : ಜಾಂಬೋರೇಟ್ ನಲ್ಲಿ ಅನಾರೋಗ್ಯ ಪೀಡಿತರಾದ್ರೆ ಚಿಕಿತ್ಸೆಗೆ ಸಕಲ ಸಿದ್ಧತೆ : ಡಾ. C.V ಕೃಪಾ ಹೇಳಿಕೆ

Belagavi : ಜಾಂಬೋರೇಟ್ ನಲ್ಲಿ ಅನಾರೋಗ್ಯ ಪೀಡಿತರಾದ್ರೆ ಚಿಕಿತ್ಸೆಗೆ ಸಕಲ ಸಿದ್ಧತೆ :  ಡಾ. C.V ಕೃಪಾ ಹೇಳಿಕೆ 

ಬೆಳಗಾವಿ : ( Dec_26_2025)
ಇಲ್ಲಿ ನಡೆಯುತ್ತಿರುವ ಜಾಂಬೋರೇಟ್ ಕ್ಯಾಂಪ್ ನಲ್ಲಿ ಐದು ಸಾವಿರ ಮಕ್ಕಳು ಸೇರಿದಂತೆ ಎಲ್ಲರಿಗೂ ಚಿಕಿತ್ಸೆಗೆ ಸಕಲ ಸಿದ್ಧತೆ ನಡೆದಿದೆ. ಕೊರೆಯುವ ಚಳಿಯಲ್ಲಿ ಬೆಳಗಾವಿಯ ಕಾಡಿನಲ್ಲಿ ಸ್ಕೌಟ್ಸ್ & ಗೈಡ್ಸ್ ಕ್ಯಾಂಪ್ ಹಮ್ಮಿಕೊಳ್ಳಲಾಗಿದೆ. ಈ ಕ್ಯಾಂಪ್ ನಲ್ಲಿ ಭಾಗವಹಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವೈಧ್ಯಕೀಯ ಸೌಲಭ್ಯಕ್ಕೆ ಸಕಲ ಸಿದ್ಧತೆ ನಡೆದಿದೆ. 

ವೈದ್ಯಕೀಯ ಸೇವೆಯ ಜವಾಬ್ದಾರಿಯನ್ನ ಅಧ್ಯಕ್ಷರಾದ ಪಿ.ಜಿ. ಆರ್ ಸಿಂಧ್ಯ ಅವರು ಡಾ. C.V ಕೃಪಾ ಹೆಗಲಿಗೀರಿಸಿದ್ದಾರೆ. ಈ ಜವಾಬ್ದಾರಿಯನ್ನ ವೈದ್ಯಕೀಯ ಸೇವೆಯಲ್ಲಿ ನೀವೃತ್ತರಾಗಿ ಸಮಾಜ ಸೇವೆ ಮಾಡುತ್ತಿರುವ ಡಾ. C.V ಕೃಪಾ ಸಮಾಜ ಸುಧಾರಣೆಗೆ ವಿವಿಧ ಆಯಾಮಗಳಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ. ಡಾ. C.V ಕೃಪಾ ಅವರೊಂದಿಗೆ ಹಲವು ವಿದ್ಯಾರ್ಥಿಗಳು ಸಾಥ್ ನೀಡಿದ್ದು, ನಾಳೆಯಿಂದ ಜಾಂಬೋರೇಟ್ ಕಾರ್ಯಕ್ರಮ ಉದ್ಘಾಟನೆಯಾಗಲಿದೆ.
Post a Comment

Post a Comment