ಬೆಳಗಾವಿ : (Dec_25_2025)
ಭಾರತಕ್ಕೆ ಮದರ್ ತೆರೆಸಾ ಅವರಂತಹ ಶುಶ್ರೂಷೆ ಮಾಡುವ ಭಾರತ ಮಾತೆಗೆ ಮಗಳನ್ನು ಕೊಟ್ಟ ಕ್ರೈಸ್ತ ಧರ್ಮದ ಕೊಡುಗೆಯನ್ನ ಭಾರತ ಎಂದಿಗು ಮರೆಯಲಾಗದು ಎಂದು ಭಾರತ್ ಸ್ಕೌಟ್ಸ್ & ಗೈಡ್ಸ್ ರಾಜ್ಯಾಧ್ಯಕ್ಷರಾದ ಪಿ.ಜಿ. ಆರ್ ಸಿಂಧ್ಯ ಹೇಳಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ & ಗೈಡ್ಸ್ ಜಾಂಬೋರೇಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ಭಾರತದಲ್ಲಿ ಹಲವು ರಾಜ್ಯಗಳಲ್ಲಿ ಹಿಂದಿನಕಾಲದಲ್ಲಿ ಹರಡುತ್ತಿದ್ದ ಕಾಲರಾ ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳು ಬಂದಾಗ ಮನುಷ್ಯರನ್ನ ಮುಟ್ಟಿ ಮಾತನಾಡುತ್ತಿರಲಿಲ್ಲ. ಅಂತಹ ಸಂಧರ್ಭದಲ್ಲಿ ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ಕೊಟ್ಟು ಭಾರತಕ್ಕೆ ನೊಬೆಲ್ ಪ್ರಶಸ್ತಿ ಬರುವಂತೆ ಮಾಡಿದ್ದು ಒಬ್ಬ ಸಂತ ಮಹಿಳೆ ಅವರೇ, ಮದರ್ ತೆರೇಸಾ ಎಂದು ಹೇಳಿದರು. ಇಂತಹ ಮಹಾನ್ ತಾಯಿಯನ್ನ ಕೊಟ್ಟು ಕ್ರೈಸ್ತರನ್ನ ಭಾರತ ಎಂದಿಗೂ ಸ್ಮರಿಸುತ್ತದೆ ಎಂದು ಹೇಳಿದರು.
ಡಯಾಸ್ ಮೇಲೆ ಕುಳಿತ ಇತರೆ ನಾಯಕರು ಯೇಸು ಕ್ತಿಸ್ತನ ದಯೆ, ಕರುಣೆ, ಜಗತ್ತಿಗೆ ತೋರಿದ ಪ್ರೀತಿಯನ್ನ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ತಿಳಿ ಹೇಳಿದರು.
ಚಳಿಗಾಲದ ಅಧಿವೇಶನ ಬಳಿಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ಬೆಳಗಾವಿ ಗಮನ ಸೆಳೆದಿದೆ.
ಚೈತ್ರ & ಮೌನೇಶ್



Post a Comment