ಬೆಳಗಾವಿ : ( Rec_25_2025)
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ವತಿಯಿಂದ ಕ್ರಿಸ್ಮಸ್ ಅದ್ದೂರಿಯಾಗಿ ಆಚರಿಸಲಾಯಿತು. ನಗರದ ಪೀನಿಕ್ಸ ಪಬ್ಲಿಕ್ ಶಾಲೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯಾಧ್ಯಕ್ಷರಾದ ಪಿ.ಜಿ. ಆರ್.ಸಿಂದ್ಯ ಮಾತನಾಡಿ, ಯೇಸು ಜಗತ್ತಿಗೆ ಶಾಂತಿ ಸಂದೇಶ ಸಾರಿದವರು. ಮಾನವೀಯ ಮೌಲ್ಯಗಳನ್ನ ಎತ್ತಿ ತೋರಿದ ಅವರು, ಜನರು ಭಾಂಧ್ಯವ್ಯ ಬೆಸೆಯುವ ಕೆಲಸ ಮಾಡಬೇಕು ಎಂದು ಹೇಳಿದರು. ಇದೇ ವೇಳೆ, ಇತರೆ ನಾಯಕರು ಮಾತನಾಡಿ, ಸತ್ಯಕ್ಕೆ ಸಾವಿಲ್ಲ. ಏಕತೆಯೇ ಧರ್ಮ. ಸಮಾಜದಲ್ಲಿ ಎಲ್ಲ ಸ್ಥರದ ವ್ಯಕ್ತಿಗಳಿದ್ದಾರೆ. ಅವರೆಲ್ಲರಲ್ಲೂ ಮಾನವೀಯ ಮೌಲ್ಯ ಉಳಿಯುವಂತೆ ಮಾಡಿದ ಜಗತ್ತು ಕಂಡ ಸಂತ ಎಂದು ತಮ್ಮ ತಮ್ಮ ಧಾಟಿಯಲ್ಲೆ ಯೇಸು ಕ್ರಿಸ್ತನ ಗುಣಗಾನ ಮಾಡಿದರು. ಈ ಮಧ್ಯೆ, ಮಕ್ಕಳ ನೃತ್ಯ, ನಾಟಕ, ಹಾಡುಗಳು ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಮಧುಸೂದನ್ ಅವಾಲಾ, ಮಂಜುಳಾ ಸಿ. ಚೇತನ್ ಪಾಟೀಲ್, ಪ್ರತಿಭಾ ಪಾಟೀಲ್, ಲತಾ ಮಂಜುನಾಥ್, ವಿಧ್ಯಾರ್ಥಿಗಳಾದ ಚೈತ್ರ, ಮೌನೇಶ್ ಸೇರಿದಂತೆ ಅನೇಕರು ಭಾಗವಹಿಸಿ, ಕ್ರಿಮಸ್ ಹಬ್ಬಕ್ಕೆ ಮೆರಗು ತಂದರು.
ಚೈತ್ರ & ಮೌನೇಶ್



Post a Comment