-->
Bookmark

Babaleshwara : ಚಿದಾನಂದ್ ಬಡಿಗೇರ್ ಅಗಲಿಕೆ : ಕುಟುಂಬದಲ್ಲಿ ನಿರವ ಮೌನ

Babaleshwara : ಚಿದಾನಂದ್ ಬಡಿಗೇರ್ ಅಗಲಿಕೆ : ಕುಟುಂಬದಲ್ಲಿ ನಿರವ ಮೌನ 

ಬಬಲೇಶ್ವರ : (Apr_10_2026)
ಚಿದಾನಂದ್ ಗ್ಯಾನಪ್ಪ ಬಡಿಗೇರ್ ಇಂದು ಎಪ್ರಿಲ್ 10 ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಬಿಜಾಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೆಚ್ ( ಹಿರೆಹೊಳಿ ) ಜಂಬಗಿಯ ಸ್ವ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 

ನಿವೃತ್ತ ವೈದ್ಯಾಧಿಕಾರಿಯಾಗಿದ್ದ ಚಿದಾನಂದ್ ಅವರು ಅಪಾರ ಬಂಧುಗಳನ್ನ ಅಗಲಿದ್ದಾರೆ. ನೆಟ್ಸರ್ಫ್ ನಲ್ಲೂ ಕೆಲಸ ಮಾಡಿ ಗುರುತಿಸಿಕೊಂಡಿದ್ದ ಇವರು, ಉತ್ತರ ಕರ್ನಾಟಕದ ರೈತರೊಂದಿಗೆ ಸಂಪರ್ಕ ಹೊಂದಿದ್ದರು. 

ಚಿದಾನಂದ ಅವರ ಅಗಲಿಕೆಯಿಂದ ಕುಟುಂಬದಲ್ಲಿ ನಿರವ ಮೌನ ಆವರಿಸಿದೆ.

ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬರು ಹೆಣ್ಣು ಮಗಳಿದ್ದು, ಮೊಮ್ಮಕಳು ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನ ಹೊಂದಿದ್ದರು. ಎಲ್ಲ ಸಮಾಜದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.
Post a Comment

Post a Comment