-->
Bookmark

Belavanaki : ಶ್ರೀ ವೀರಭದ್ರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜ್ ಸಾಮಾಜಿಕ ಕಾರ್ಯ - ಸಾರ್ವಜನಿಕರಿಂದ ಶ್ಲಾಘನೆ


Belavanaki :

ಶ್ರೀ ವೀರಭದ್ರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜ್ ಸಾಮಾಜಿಕ ಕಾರ್ಯ - ಸಾರ್ವಜನಿಕರಿಂದ ಶ್ಲಾಘನೆ

ಬೆಳವಣಕಿ ಗ್ರಾಮ ರೈತಾಪಿ ವರ್ಗವನ್ನ ಹೊಂದಿಗೆ. ಕೃಷಿಯ ಜೊತೆಗೆ ಕೂಲಿ ಕೆಲಸ ಇಲ್ಲಿನ ಜನರಿಗೆ ಜೀವಾಳ. ಹೀಗಾಗಿ, ಬಡವರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಶ್ರೀ ವೀರಭದ್ರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜ್ ಬೆಳವಣಕಿ ಇವರಿಂದ ಉಚಿತ ನೇತ್ರ ತಪಾಸಣಾ ಶಿಬಿರ ಏರ್ಪಡಿಸಿತ್ತು. ಎಲ್ಲರೂ ಉಚಿತ ನೇತ್ರ ತಪಾಸಣಾ ಶಿಬಿರ ಏರ್ಪಡಿಸುವುದು ಸಾಮಾನ್ಯ. ಆದ್ರೆ, ಎಸ್. ವ್ಹಿ. ವ್ಹಿ. ವ್ಹಿ ಸಮಿತಿ ತಮ್ಮ, ಶಾಲಾ ಕಾಲೇಜಿನ ಮಕ್ಕಳ ಪಾಲಕರಿಗೆ ಉಚಿತ ಕನ್ನಡಕವನ್ನೂ ಸಹ ವಿತರಿಸಿದೆ. ಎಸ್. ವ್ಹಿ. ವ್ಹಿ. ವ್ಹಿ ಸಮಿತಿ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. 

ಎಸ್.ವ್ಹಿ. ವ್ಹಿ. ವ್ಹಿ. ಸಮಿತಿ ಬೆಳವಣಕಿ ಹಾಗೂ ರೌಂಡ್ ಟೇಬಲ್ ಇಂಡಿಯಾ ಮತ್ತು ಹುಬ್ಬಳ್ಳಿಯ ಲೇಡಿಸ್ ಸರ್ಕಲ್ ಇಂಡಿಯಾ ಜಂಟಿಯಾಗಿ ಉಚಿತ ನೇತ್ರ ತಪಾಸಣ ಶಿಬಿರ ನಡೆಸಿತು. ಈ ಶಿಬಿರದಲ್ಲಿ ಶಾಲಾ, ಕಾಲೇಜು ಮಕ್ಕಳ ಪಾಲಕರು, ಪೋಷಕರಿಗೆ ಉಚಿತವಾಗಿ ನೇತ್ರ ತಪಾಸಣೆ ನಡೆಸಲಾಗಿತ್ತು. ಹೀಗಾಗಿ ಸೋಮವಾರ ನೇತ್ರ ತಪಾಸಣೆ ಮಾಡಿದ ಪಾಲಕರಿಗೆ ಮತ್ತು ಪೋಷಕರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯ್ತು. ತಮಗೆ ಉಚಿತ ನೇತ್ರ ತಪಾಸಣೆ ಮಾಡಿ, ಕನ್ನಡಕ ವಿತರಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಕಣ್ಣಿನ ತಪಾಸಣೆಗೊಳಗಾದವರು. ಇಂತಹ ಕಾರ್ಯ ಮಾಡಿದ್ದು, ಎಲ್ಲರಿಗೂ ಸಂತಸದ ವಿಷಯ. ಎಸ್. ವ್ಹಿ.ವ್ಹಿ.ವ್ಹಿ ಆಡಳಿತ ಮಂಡಳಿಗೆ ಕೋಟಿ ಕೋಟಿ ನಮನಗಳು ಎಂದು ಸಾಮಾಜಿಕ ಕಾರ್ಯವನ್ನ ಕೊಂಡಾಡಿದ್ದಾರೆ. 
ಎಸ್.ವ್ಹಿ. ವ್ಹಿ. ವ್ಹಿ. ಸಮಿತಿ ಚೇರ್ಮನ್ ಎಸಿ. ಹಕ್ಕಾಪಕ್ಕಿ, ಕಾರ್ಯದರ್ಶಿ ಆರ್.ಸಿ ಶಿರೋಳ್, ನಿರ್ದೇಶಕ ಎಸ್.ಎಸ್ ದಾನರಡ್ಡಿ, ಪಿಸಿ ಹಕ್ಕಾಪುಕ್ಕಿ, ಆರ್. ವ್ಹಿ ಫತೇಪೂರ, ಜಿ.ಹೆಚ್. ಅಗಳವಾಡಿ, ಎಸ್.ಎಸ್. ಮಾಡೊಳ್ಳಿ, ಎಸ್.ಎ ಹಕ್ಕಾಪಕ್ಕಿ, ಪಾಲಕರಿಗೆ ಉಚಿತ ಕನ್ನಡ ವಿತರಿಸಿದರು. ವಿತರಣೆಯಲ್ಲಿ ಕಾಲೇಜಿನ ಪ್ರಿನ್ಸಿಪಲ್ ಎಸ್.ಎಸ್. ನರಗುಂದ್ ಸೇರಿದಂತೆ ಅನೇಕರು ಬಾಗವಹಿಸಿದ್ದರು. 
Post a Comment

Post a Comment