-->
Bookmark

Gajendragad : ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದ ಲಾಲಪ್ಪ ರಾಠೋಡ್ - ಸಿ.ಆರ್.ಪಿ ಆರ್. ಜಿ.‌ಮ್ಯಾಕಲ್

Gajendragad : 

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದ ಲಾಲಪ್ಪ ರಾಠೋಡ್ - ಸಿ.ಆರ್.ಪಿ ಆರ್. ಜಿ.‌ಮ್ಯಾಕಲ್ 

ಶಿಕ್ಷಣದಿಂದ ವಂಚಿತರಾದ ಲಾಲಪ್ಪ ರಾಠೋಡ್ ಶಿಕ್ಷಣ ಸಂಸ್ಥೆ ತೆರೆದಿದ್ದು, ಶಿಕ್ಷಣಕ್ಕೆ ಹೊಸ ಭಾಷ್ಯ ಬರೆದಿದ್ದಾರೆ ಎಂದು ಸಿ.ಆರ್.ಪಿ ಆರ್ ಜಿ ಮ್ಯಾಕಲ್ ಅಭಿಪ್ರಾಯ ಪಟ್ಟರು. ಶ್ರೀ ತುಳಜಾ ಭವಾನಿ ಶಿಕ್ಷಣ ಸಂಸ್ಥೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ಲಾಲಪ್ಪ ರಾಠೋಡ್ ಅನಕ್ಷರಸ್ಥರಾದರೂ, ಅಕ್ಷರದ ಮೇಲಿನ ಪ್ರೀತಿ ಕಾಳಜಿಗೆ ನಾವು ಧನ್ಯರು. ಸಮಾಜದ ಎಲ್ಲ ವರ್ಗದವರಿಗೂ ಶಿಕ್ಷಣ ಸಿಗಬೇಕೆಂಬುದು ಅವರ ಮಹದಾಸೆಯಾಗಿದೆ ಎಂದರು. ಜೊತೆಗೆ, ಲಾಲಪ್ಪ ರಾಠೋಡ್ ಅವರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ಗುಣಗಾನ ಮಾಡಿದ್ರು. 

ಮುಖಂಡರಾದ ಶಶಿಧರ್ ಹೂಗಾರ್ ಮಾತನಾಡಿ, ಕಳೆದ ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಶ್ರೀ ತುಳಜಾ ಭವಾನಿ ಶಿಕ್ಷಣ ಸಂಸ್ಥೆ ಬಡವರ ಸೇವೆ ಮಾಡುತ್ತಿದೆ ಎಂದು ಹೇಳಿದರು. 
ಡಿ.ಎಂ ಮುಳಗುಂದ್ ಮಾತನಾಡಿ, ಲಾಲಪ್ಪ ರಾಠೋಡ್ ಮತ್ತು ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. 


ಶಿಕ್ಷಣ ಪ್ರೇಮಿ, ಉತ್ರ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದ ಲಾಲಪ್ಪ ರಾಠೋಡ್ ಶ್ರೀ ತುಳಜಾ ಭವಾನಿ ಶಿಕ್ಷಣ ಸಂಸ್ಥೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಆಚನೆ ನೀಡಿದರು. ಪಾಲಕರೊಂದಿಗೆ ಮಕ್ಕಳು ಅಕ್ಷರಾಭ್ಯಾಸ ಮಾಡಿದರು.
ಶಿಕ್ಷಕರೆಲ್ಲರೂ ಸೇರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಲಾಲಪ್ಪ ರಾಠೋಡ್ ಮತ್ತು 
ಲೋಕಪ್ಪ ರಾಠೋಡ್ ಅವರಿಗೆ ಸನ್ಮಾನಿಸಿದರು. 
ಶ್ರೀ ತುಳಜಾ ಭವಾನಿ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಸಿಆರ್‌ಪಿ ಗಳಾದ ಆರ್.ಜಿ ಮ್ಯಾಕಲ್, ಅಂಬೋರೆ, ಕೆ.ಎಸ್ ವನ್ನಾಲ್, ಶಶಿಧರ್ ಹೂಗಾರ್, ಲೋಕಪ್ಪ ರಾಠೋಡ್, ಡಿ.ಎಂ ಮುಳಗುಂದ್, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. 
ಮುಖ್ಯೋಪಾಧ್ಯಾಯರಾದ ಆರ್.ಎಂ ಮಾನೆ, ಮಂಜುಳಾ ಭಜಂತ್ರಿ, ವೈ.ಎಲ್ ನದಾಫ್, ಸಾವಿತ್ರಿ ಹಿರೇಮನಿ, ಸುನಿತಾ ಹವಾಲ್ದಾರ್, ಭಾಗ್ಯಾ ಅದಾಪೂರ್, ಉಮಾ ಯಂಕಂಚಿ, ಸರಸ್ವತಿ ರಾಠೋಡ್, ರುದ್ರಪ್ಪ ಚವ್ಹಾಣ್, ದೇವಕ್ಕ ಚವ್ಹಾಣ್, ಲಕ್ಷ್ಮೀ ಗಣವಾರಿ, ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದ ಮೆರಗು ಹೆಚ್ಚಿಸಿದರು. 

Post a Comment

Post a Comment