Bagalakote : ವೈದ್ಯಕೀಯ ಕಾಲೇಜಿನಲ್ಲೂ ಜಾತಿ ರಾಜಕಾರಣ...? ಮುಸ್ಲೀಂ ಒಲೈಕೆಗೆ ಮುಂದಾಯ್ತಾ ಸರ್ಕಾರಿ ಶಿಕ್ಷಣ ಸಂಸ್ಥೆ...?
ಬಾಗಲಕೋಟೆ : (Apr_10_2025)
ನಗರದ ಪ್ಯಾರಾ ಮೇಡಿಕಲ್ ಕಾಲೇನಜಿನಲ್ಲೂ ಜಾತಿ ರಾಜಕಾರಣ ಶುರುವಾದಂತಿದೆ. ಸರ್ಕಾರಿ ಅರೆ ವೈದ್ಯಕೀಯ ಕಾಲೇಜು ಜಿಲ್ಲಾಸ್ಪತ್ರೆ ಬಾಗಲಕೋಟೆಯಲ್ಲಿ ಇಂತಹ ಆರೋಪ ಕೇಳಿ ಬಂದಿದೆ. ಮೊದಲ ವರ್ಷದಲ್ಲಿ ಕಾಲೇಜಿನಲ್ಲಿ ಅಂದಾಜು 75 ವಿದ್ಯಾರ್ಥಿಗಳಿದ್ದು, ಈಗಾಗಲೇ ಮಹಿಳಾ ಸಿಆರ್ ಅವರನ್ನ ಆಯ್ಕೆ ಮಾಡಲಾಗಿದೆ. ಅವರು ಸಹ ಮುಸ್ಲೀಂ ಆಗಿದ್ದು, ಹುಡುಗರಲ್ಲೂ ಅಲ್ಪ ಸಂಖ್ಯಾತರನ್ನೆ ಆಯ್ಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರಾಜಕಾರಣ ಈಗ ಕಾಲೇಜಿನ ವಿದ್ಯಾರ್ಥಿಗಳಲ್ಲೂ ಕಂಡು ಬಂದಿದೆ ಎನ್ನಲಾಗಿದೆ. Co_Ordinator ಮಲ್ಲನಗೌಡ ಅವರ ಗಮನಕ್ಕೆ ಬಂದಿದೆಯೋ ಇಲ್ವೋ ಗೊತ್ತಿಲ್ಲ. ಆದ್ರೆ, ಪುರುಷರಲ್ಲಿ ನೂತನ ಸಿಆರ್ ಅವರನ್ನ ಹಳೆಯ ಸಿ.ಆರ್ ವಿದ್ಯಾರ್ಥಿನಿ ಸುಮಯ್ಯ ಬಾನು ಎಂಬುವವರು ಆಯ್ಕೆ ಮಾಡಿದ್ದಾರೆ ಎಂದು ಸಹ ತಿಳಿದು ಬಂದಿದೆ. ವಿದ್ಯಾರ್ಥಿನಿಯೇ ಆಯ್ಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಅವರ ಬೆಂಬಲಕ್ಕಿರುವ ಕೆಲ ಮುಸ್ಲೀಂ ವಿದ್ಯಾರ್ಥಿಗಳು ಇತರೆ ವಿದ್ಯಾರ್ಥಿಗಳ ಮೇಲೆ ಹಿಡಿತ ಸಾಧಿಸಲು ಈ ಕ್ರಮ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಲ್ಲಿ ಅವರದ್ದೆ ಜಾತಿಯ ಲಕ್ಚರರ್ಸ್ ಗಳು ಸಾಥ್ ನೀಡುತ್ತಿದ್ದಾರೆ ಎಂದು ಕಾಲೇಜಿನಲ್ಲಿ ಚರ್ಚೆಯಾಗುತ್ತಿದೆ.
ಮೇಲ್ನೋಟಕ್ಕೆ ಇದು ಒಂದೇ ಜಾತಿಯ ಪ್ರಾಬಲ್ಯ ಕಂಡು ಬರುತ್ತಿದೆ. ಇದು ಯಾರ ಗಮನಕ್ಕೂ ಬಾರದೇ, ಇಂತಹ ಅಘಾತಕಾರಿ ಅಂಶ ನಡೆಯುತ್ತಿರುವುದು ಆಡಳಿತ ಮಂಡಳಿಗೆ ಕಾಣದಿರುವುದು ವಿಪರ್ಯಾಸ. ಇನ್ನೂ, ಖುಲ್ಲಂ ಖುಲ್ಲಾ ಜಾತಿ ರಾಜಕಾರಣ ನಡೆಯುತ್ತಿದ್ದು, ಹಿಂದುಪರ ಸಂಘಟನೆಗಳಿಂದ ಯಾವ ಪ್ರತಿಕ್ರಿಯೆ ಬರಲಿದೆ ಎಂಬುದನ್ನ ಕಾದು ನೋಡಬೇಕಿದೆ.
ಮಹಿಳಾ ಸಿ.ಆರ್ ಅವರನ್ನು ಸಹ ಅಲ್ಪಸಂಖ್ಯಾತರನ್ನೆ ಆಯ್ಕೆ ಮಾಡಿದ್ದಲ್ಲದೇ, ಈಗ ಹುಡುಗರಲ್ಲೂ ಸಹ ಮುಸ್ಲೀಂ ಅವರನ್ನೆ ಆಯ್ಕೆ ಮಾಡಿ ಸರ್ಕಾರಿ ಅರೆ ವೈದ್ಯಕೀಯ ಕಾಲೇಜು ಜಿಲ್ಲಾಸ್ಪತ್ರೆ ವಿದ್ಯಾರ್ಥಿಗಳ ಜೀವನದಲ್ಲಿ ರಾಜಕಾರಣ ಮಾಡಲು ಮುಂದಾಗಿದೆ.
ಬಾಗಲಕೋಟೆ ಜಿಲ್ಲೆಯ ಪ್ಯಾರಾ ಮೇಡಿಕಲ್ ಕಾಲೇಜು ದೇಶದಲ್ಲೇ ಪ್ರತಿಷ್ಠಿತ ಕಾಲೇಜ್ ಆಗಿದ್ದು, ಸರ್ಕಾರಿ ಸಂಸ್ಥೆಯಲ್ಲಿ ಇಂತಹ ಘಟನೆ ಸಹಿಸಲಾಗದು ಎಂದು ಸಾರ್ಜನಿಕರು ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜಿನ ಎಲ್ಲ ಜವಾಬ್ದಾರಿ ನೀಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇನ್ನೂ, ಮೊದಲ ವರ್ಷದ ವಿದ್ಯಾರ್ಥಿಗಳು ಇರತೆ ವಿದ್ಯಾರ್ಥಿಗಳ ಮೇಲೆ ಹಿಡಿತ ಸಾಧಿಸುವ ಹುನ್ನಾರ ನಡೆದಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಈ ಹಿಂದೆ ಡಿಎಸ್ ಪ್ರಕಾಶ್ ಬಿರಾದಾರಗ ಎನ್ನುವವರು ಇದ್ದಾಗ ಯಾವುದೇ ರೀತಿಯ ಘಟನೆ ನಡೆದಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಕಾಲೇಜಿನ ವಿದ್ಯಾರ್ಥಿಗಳು ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
ವೈದ್ಯೋ ನಾರಾಯಣೋ ಹಹರಿಃ ಎನ್ನುತ್ತಾರೆ. ಆದ್ರೆ, ಬಾಗಲಕೋಟೆಯ ಸರ್ಕಾರಿ ಅರೆ ವೈದ್ಯಕೀಯ ಕಾಲೇಜಿನಲ್ಲಿ ಜಾತಿ ತಾರತಮ್ಯ ಮಾತ್ರ ಸಹಿಸಲಾಗದು.
ತಮ್ಮ ತಮ್ಮ ಮನೆಯಲ್ಲಿ ಏನಾದ್ರೂ ಮಾಡಲಿ, ಆದ್ರೆ, ಜಾತ್ಯಾತೀತವಾಗಿ ಜನರ ಜೀವ ರಕ್ಷಿಸಬೇಕಾದ ಮುಂದಿನ ಭವಿಷ್ಯ ರೂಪಿಸಬೇಕಾದ ಭಾವಿ ವೈದ್ಯರಿಗೆ ಇಂತಹ ಜಾತಿ ರಾಜಕಾರಣ ಕಾಲೇಜಿನಲ್ಲಿ ಸರಿಯಲ್ಲ. ಮುಂಬರುವ ದಿನಗಳಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
ವರದಿ :
ಕೃಷ್ಣಾ ರಾಠೋಡ್
ಸಂಪಾದಕರು,
ಕಿರಾ ನ್ಯೂಸ್ ಕನ್ನಡ
ಮೊ : 8197474996
Post a Comment