ರೋಣ : (May_20_2025)
ರೋಣದ ಮುಗಳಿ ಗ್ರಾಮದ ಬಳಿ ಭೀಕರ ಕೊಲೆ ನಡೆದಿದೆ. ಪ್ರೀತಿಸಿ ಮದುವೆಯಾದ ಪತ್ನಿಯೆ ಪತಿಯ ಕೊಲೆ ಮಾಡಿಸಿದ್ದಾಳೆ.
ಪ್ರೀಯಕರ ನೊಂದಿಗೆ ಸ್ಕೆಚ್ ಹಾಕಿ ಪತ್ನಿ ವಿದ್ಯಾ ಜೆಸಿಬಿ ಮತ್ತು ಟಿಪ್ಪರ್ ಮಾಲಕನಾಗಿದ್ದ ಶಂಕ್ರಪ್ಪ ಅಲಿಯಾಸ್ ಮುತ್ತಪ್ಪ ತಂದೆ ಬಸವರಾಜ್ ಕೊಳ್ಳಿ ಅವರ ಕೊಲೆ ಮಾಡಿ, ಬಾವಿಗೆ ಎಸೆದಿದ್ದಾರೆ. ಕೊಲೆ ಮಾಡಿದ ಬಗ್ಗೆ ಯಾರಿಗು ಗೊತ್ತಾಗಬಾರದು ಅಂತಾ ಸಾಕ್ಷಿ ಪುರಾವೆಗಳನ್ನು ನಾಶ ಮಾಡುವ ಉದ್ದೇಶದಿಂದ ಶಂಕ್ರಪ್ಪನ ಮುಖಕ್ಕೆ ಪಿಂಕ ಬಣ್ಣದ ಚಾದರ, ಹಳದಿ, ಕೆಂಪು, ಹಸಿರು ಮಿಶ್ರಿತ ಬಣ್ಣದ ತೆಳ್ಳನೆಯ ರಗ್ಗು, ತಿಳಿ ಹಳದಿ ಬಣ್ಣದ ರಗ್ಗು, ಚಿಕ್ಕ ಮಕ್ಕಳ ಜುಡಿಯೋ ಹಾಪ್ ಶರ್ಟ್, ಪಿಂಕ್ ಬಣ್ಣದ ತಿಳಿ ಹಳದಿ ಬಣ್ಣದ ಹೂವಿನ ದಿಂಬನ್ನು ಸುತ್ತಿ, ಬಿಳಿ ಮತ್ತು ಕಡು ನೀಲಿಯ ಬಣ್ಣದ ಎರಡು ವೇಲ್ಗಳನ್ನು ಕುತ್ತಿಗೆ ಮತ್ತು ಎದೆಗೆ ಕಟ್ಟಿ ಮುಗಳಿಯಿಂದ ರೋಣ ರಸ್ತೆಯ ಕಡೆಗೆ ಇರುವ ಮುಗಳಿ ಗ್ರಾಮದ ಬಸಲಿಂಗಪ್ಪ ಆವಾರಿ ರವರ ಜಮೀನದ ನೀರಿನ ಬಾವಿಯಲ್ಲಿ ಒಗೆದು ಹೋಗಿದ್ದಾರೆ. ಬಾವಿಯಲ್ಲಿ ನೀರು ಕಡಿಮೆ ಇದ್ದುದರಿಂದ ಶವ ಮುಳುಗಿದೆ. ಕಳೆದೆರಡು ಮೂರು ದಿನದಿಂದ ಮಳೆಯಾಗಿದೆ. ಹೀಗಾಗಿ, ಬಾವಿಯಲ್ಲಿ ನೀರು ಹೆಚ್ಚಾಗಿದೆ. ಇದರಿಂದ ನೀರಿನೊಂದಿಗೆ ಶವ ತೇಲಾಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆ ನಡೆದು ಸ್ಥಳಕ್ಕೆ ಪೊಲೀಸರ ತಂಡ ತೆರಳಿದೆ. ಪತ್ನಿಯ ಹಾವ, ಭಾವ ಸಂಶಯಾಸ್ಪದ ವಾದುದರಿಂದ ತನಿಖೆ ನಡೆಸಿ, ಆರೋಪಿಗಳನ್ನ ಬಂಧಿಸಲಾಗಿದೆ.
ಶವಕ್ಕೆ ಸುತ್ತಿದ ಹಾಗೂ ಶವದ ಮೈಮೇಲಿನ ಬಟ್ಟೆಗಳನ್ನು ಗುರುತು ಹಚ್ಚಿ ನೋಡಿ ಶವವು ತನ್ನ ಮಗ ಶಂಕ್ರಪ್ಪನದ್ದೆ ಇರುತ್ತದೆ ಅಂತಾ ಗುರ್ತಿಸಿದ್ದು ಇರುತ್ತದೆ ಎಂದು ತಿಳಿದು ಬಂದಿದೆ.
ಮೃತರಿಗೆ ಮೂವರು ಮಕ್ಕಳಿದ್ದಾರೆ. ಪತ್ನಿ ರೋಣ ಪಟ್ಟಣದಲ್ಲಿ ಪ್ರತ್ಯೇಕವಾಗಿ ಎರಡು ಮಕ್ಕಳೊಂದಿಗೆ ವಾಸವಿದ್ದರು ಎಂದು ತಿಳಿದು ಬಂದಿದೆ. 2018ರಲ್ಲಿ ಶಂಕ್ರಪ್ಪ ಅವರು ಕುರಹಟ್ಟಿ ಗ್ರಾಮದ ವಿದ್ಯಾ ಹುಯಿಲಗೋಳ ಅವರೊಂದಿಗೆ ಗುರು ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಶಂಕ್ರಪ್ಪ ಮೇ 14 ರಂದು ಗರಸು ತುಂಬಲು ಹೋಗುತ್ತೇನೆ ಎಂದು ಪತ್ನಿ ಹತ್ತಿರ ಹೇಳಿ, ಬುತ್ತಿಕಟ್ಟಿಕೊಂಡು ಹೋಗಿದ್ದು, ಮೇ 19 ರಂದು ಮಧ್ಯಾಹ್ನ ಎರಡು ಗಂಟೆ ಅವಧಿಯಲ್ಲಿ ಘಟನೆ ನಡೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ, ಪ್ರಕರಣ ಭೇದಿಸಿದ ಪೊಲೀಸರ ಕಾರ್ಯ ಮೆಚ್ಚುವಂತದ್ದು...
ಇದು ಯುಗ ಪುರುಷ ಚಿತ್ರದ ಸನ್ನಿವೇಶ ನೆನಪಿಸುತ್ತಿದೆ. ಕೇಳಿ ಪ್ರೇಮಿಗಳೆ ಎಂಬ ಹಾಡು ಸೂಕ್ತವಾದಂತಿದೆ. ಪ್ರೀತಿಸಿ, ಮದುವೆಯಾದವರೇ, ಕೊಲೆ ಮಾಡಿಸಲು ಮುಂದಾದರೇ, ಮದುವೆಯ ನೆಪ ಮಾಡಿಕೊಂಡು ಮತ್ತೊಂದು ಕುಟುಂಬದ ವಿರುದ್ಧ ಹಗೆತನ ಸಾಧಿಸುವುದು ತಪ್ಪು. ಪರ್ಯಾಯ ಮಾರ್ಗ ಅನುಸರಿಸಬಹುದಿತ್ತು ಎಂದು ಗ್ರಾಮಸ್ಥರು ಚರ್ಚೆ ಮಾಡುತ್ತಿದ್ದಾರೆ.
Post a Comment