-->
Bookmark

Gajendragad: ಬಣಜಿಗ ಕ್ಷೇಮಾಭಿವೃದ್ಧಿ ಸಂಘದ 11ನೇ ವಾರ್ಷಿಕೋತ್ಸವ : ವಚನ ಗಾಯನ ರಂಗೋಲಿ ಸ್ಪರ್ಧೆ

ಬಣಜಿಗ ಕ್ಷೇಮಾಭಿವೃದ್ಧಿ ಸಂಘದ 11ನೇ ವಾರ್ಷಿಕೋತ್ಸವ : ವಚನ ಗಾಯನ ರಂಗೋಲಿ ಸ್ಪರ್ಧೆ 

ಗಜೇಂದ್ರಗಡ : 

ಗಜೇಂದ್ರಗಡ - ಉಣಚಗೇರಿ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ 11ನೇ ವಾರ್ಷಿಕೋತ್ಸವದ ಅಂಗವಾಗಿ ಬಣಜಿಗ ಸಮಾಜದ ಮಹಿಳಾ ಘಟಕದ ವತಿಯಿಂದ ನಗರದ ಮತ್ತಿಕಟ್ಟಿಯವರ ಗಂಗೋತ್ರಿ ಶಾಲೆಯಲ್ಲಿ ವಚನ ಗಾಯನ ಹಾಗೂ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ವಚನ ಹಾಗೂ ರಂಗೋಲಿ  ಸ್ಪರ್ಧೆಯಲ್ಲಿ 38 ವಿದ್ಯಾರ್ಥಿಗಳು ಪಾಲ್ಗೊಂಡಿದ್ರು. 
 ಶಂಕ್ರಣ್ಣ ಅಂಗಡಿ ಹಾಗೂ ಬಿ ಎಸ್ ಶೀಲವಂತರ ವಚನ ಗಾಯನದ ನಿರ್ಣಾಯಕರಾಗಿದ್ರು. ಹಾಗೂ ರಂಗೋಲಿ ಸ್ಪರ್ಧೆಯ ನಿರ್ಣಾಯಕರಾಗಿ ಶ್ರೀಮತಿ ಎಂ.ಬಿ ಬಿರಾದರ್ ಮತ್ತು ಜಾಲವಾದಿ ಟೀಚರ್ ಪಾಲ್ಗೊಂಡಿದ್ದರು.
ಇದೇ 25ರಂದು ನಡೆಯುವ ಸಮಾಜದ 11ನೇ ವಾರ್ಷಿಕೋತ್ಸವದಲ್ಲಿ ವಿಜೇತರಿಗೆ ಬಹುಮಾನ ನೀಡುವುದಾಗಿ  ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ  ಬಣಜಿಗ ಸಮಾಜದ ಮಹಿಳಾ ಘಟಕದ ಗೌರವಾಧ್ಯಕ್ಷರಾದ ಶ್ರೀಮತಿ ಸುವರ್ಣ ನಂದಿಹಾಳ, ಅಧ್ಯಕ್ಷರಾದ ಶ್ರೀಮತಿ ಕೀರ್ತಿ ಬ ಕೊಟಗಿ, ಶ್ರೀಮತಿ ಅನುಸೂಯ ಎಸ್ ವಾಲಿ, ಶ್ರೀಮತಿ ಸಹನಾ ಎಂ ಕೊಟಗಿ, ಶ್ರೀಮತಿ ಶರಣಮ್ಮ ಅಂಗಡಿ, ಶ್ರೀಮತಿ ಭುವನೇಶ್ವರಿ ಬಿ ಕತ್ತಿಶೆಟ್ಟರ, ಸುಕನ್ಯಾ ಹೋಗರಿ, ಗೀತಾ ವಾಲಿ , ದಾನಮ್ಮ ಪಟ್ಟೇದ್, ವಿಜಯಲಕ್ಷ್ಮಿ ಚಟ್ಟರ್ ಸೇರಿದಂತೆ ಅನೇಕರು  ಉಪಸ್ಥಿರಿದ್ದರು.
Post a Comment

Post a Comment