ಅರ್ಥಶಾಸ್ತ್ರದಲ್ಲಿ ಮೋದಿ ಅನಕ್ಷರಸ್ತ: ಸುಬ್ರಮಣಿಯನ್ ಸ್ವಾಮಿ
ಪ್ರಧಾನಿ ನರೇಂದ್ರ ಮೋದಿ ಅವರು ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಟ್ವಿಟರ್‌ನಲ್ಲಿ ಶನಿವಾರ ಪೋಸ್ಟ್ ವೊಂದನ್ನು ಪ್ರಕಟಿಸಿರುವ ಸುಬ್ರಮಣಿಯನ್ ಸ್ವಾಮಿ, ಹಣಕಾಸು ಇಲಾಖೆ ಮತ್ತು ಪ್ರಧಾನಿ ಮೋದಿಯನ್ನು ಮೂದಲಿಸಿದ್ದಾರೆ.
'ಭಾರತ ಆರ್ಥಿಕತೆಗೆ ಪ್ರತಿವರ್ಷ ಜಿಡಿಪಿಯ ಶೇ 10ರಷ್ಟು ಪ್ರಗತಿ ಸಾಧಿಸುವ ಸಾಮರ್ಥ್ಯವಿದೆ. ಇದರ ಮೂಲಕ 10 ವರ್ಷಗಳಲ್ಲಿ ನಿರುದ್ಯೋಗವನ್ನು ಕೊನೆಗೊಳಿಸುವ ಶಕ್ತಿ ಹೊಂದಿದೆ. ಈ ಮೂಲಕ ಬಡತನವನ್ನು ತೊಡೆದು ಹಾಕಲು ಶಕ್ತವಾಗಿದೆ. ಆದ್ರೆ, ಹಣಕಾಸು ಇಲಾಖೆಗೆ ಇದರ ಸುಳಿವೇ ಇಲ್ಲ. ಮೋದಿ ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥರು.' ಎಂದು ಗೇಲಿ ಮಾಡಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅರ್ಥಿಕ, ವಿದೇಶಾಂಗ ನೀತಿಗಳು, ಹಣಕಾಸು ಮಂತ್ರಿಯಾಗಿ ನಿರ್ಮಲಾ ಸೀತಾರಾಮನ್ ಅವರ ವೈಫಲ್ಯಗಳು, ಪೆಟ್ರೋಲ್ ಬೆಲೆ ಏರಿಕೆ, ರಾಮಸೇತು, ಪ್ರಧಾನಿ ಮೋದಿ ವಿದ್ಯಾರ್ಹತೆ ಹೀಗೆ ಹಲವು ವಿಷಯಗಳಲ್ಲಿ ಸುಬ್ರಮಣಿಯನ್ ಸ್ವಾಮಿ ನಿರಂತರವಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.
ಕೇಂದ್ರ ಸರ್ಕಾರದ್ದು ಹಿಜಾಡಾ ವಿದೇಶಾಂಗ ನೀತಿ ಎನ್ನುವ ಮೂಲಕ ಸುಬ್ರಮಣಿಯನ್ ಸ್ವಾಮಿ ಅವರು ಹಿಂದೊಮ್ಮೆ ವಿವಾದ ಸೃಷ್ಟಿ ಮಾಡಿದ್ದರು.
ಬಿಜೆಪಿಯಲ್ಲಿದ್ದರೂ, ಸ್ವ ಪಕ್ಷದ ವಿರುದ್ಧ ಮಾತನಾಡುವ ಮತ್ತು ತಪ್ಪನ್ನ ತಪ್ಪು ಎಂದು ಹೇಳುವ ಮೂಲಕ ಸದಾ ಒಂದಿಲ್ಲೊಂದು ಹೇಳಿಕೆಯಿಂದ ಸುದ್ದಿಯಲ್ಲಿರುತ್ತಾರೆ. ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪವರ್ ಫುಲ್ ಹೈ ಕಮಾಂಡ್ ಬಿಜೆಪಿ ಹೊಂದಿದ್ರು, ಸುಬ್ರಹ್ಮಣಿಯನ್ ಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವ ಎದೆಗಾರಿಕೆ ಇಲ್ಲ. ಸ್ವ ಪಕ್ಷದಲ್ಲಿದ್ದರೂ, ಟೀಕೆ ಮಾಡಬಾರದೆಂದಿಲ್ಲ. ಟೀಕೆ ಟಿಪ್ಪಣಿ ಮಾಡಿದಾಗ ಮಾತ್ರ, ಸರ್ಕಾರ ಸೂಕ್ತವಾಗಿ ಕೆಲಸ ಮಾಡಲು ಸಾಧ್ಯ. ಇತ್ತ, ರಾಷ್ಟ್ರಮಟ್ಟದಲ್ಲಿ ಜನರ ಸಮಸ್ಯೆಗಳನ್ನ ಎತ್ತಿ ತೋರಿಸಬೇಕಾದ ಪ್ರತಿಪಕ್ಷವೇ ಇಲ್ಲ. ಆಳುವ ಪಕ್ಷಕ್ಕೆ ಹೇಳುವವರೇ ಇಲ್ಲ ಎನ್ನುತ್ತಿದ್ದವರಿಗೆ, ಸುಬ್ರಹ್ಮಣಿಯನ್ ಸ್ವಾಮಿ ಒಳ್ಳೆ ನಿದರ್ಶನ. ಸಾರ್ವನಿಜಕವಾಗಿ ಜನಸಾಮಾನ್ಯರ ಮನದಾಳವನ್ನ ಹಂಚಿಕೊಳ್ಳುತ್ತಾರೆ ಎಂದು ಒಂದು ಸಮೂಹ ಅವರನ್ನ ಹೇಳಿಕೊಳ್ಳುವುದು ಇದೆ.
Post a Comment