-->
Bookmark

Gajendragad : ಮಕ್ಕಳ ಕಲ್ಯಾಣ ಅಧಿಕಾರಿಗಳ ಕಾರ್ಯಾಚರಣೆ : ೬ ಬಾಲ ಕಾರ್ಮಿಕರ ರಕ್ಷಣೆ

ಗಜೇಂದ್ರಗಡ : 

ಮಕ್ಕಳ ಕಲ್ಯಾಣ ಅಧಿಕಾರಿಗಳ ಕಾರ್ಯಾಚರಣೆ : ೬ ಬಾಲ ಕಾರ್ಮಿಕರ ರಕ್ಷಣೆ 

ಕಾಲಕಾಲೇಶ್ವರ ಸೇರಿದಂತೆ ಗಜೇಂದ್ರಗಡ ತಾಲೂಕಿನಾದ್ಯಂತ ಅಪ್ರಾಪ್ತ ಮಕ್ಕಳಿಗೆ ಭಿಕ್ಷಾಟನೆ ಮತ್ತು ಅಂಗಡಿಗಳಲ್ಲಿ ಬಾಲ ಕಾರ್ಮಿಕರನ್ನ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪದ ಮೇರೆಗೆ ಜಿಲ್ಲಾ ಮಕ್ಕಳ ಕಲ್ಯಾಣ ಅಧಿಕಾರಿಗಳು ಭೇಡಿ ನೀಡಿದ್ರು. 
ಕಾಲಕಾಲೇಶ್ವರ ಮತ್ತು ಗಜೇಂದ್ರಗಡದಲ್ಲಿ ಬಾಲಕಾರ್ಮಿಕರ ರಕ್ಷಣೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ಮಾಡಿದ್ರು... 

ಈ ವೇಳೆ, ಬಾಲಕಾರ್ಮಿಕರನ್ನ ಬಳಸಿಕೊಳ್ಳದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ರು. 

ಇದೇ ವೇಳೆ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಅನ್ನಪೂರ್ಷ ಗಾಣಗೇರ್ ಅವರ ತಂಡ ಗಜೇಂದ್ರಗಡದ ಸೇರಿದಂತೆ ಎಲ್ಲೆಡೆ ಬಾಲ ಕಾರ್ಮಿಕರ ರಕ್ಷಣೆ ಮಾಡಿದ್ದಾರೆ. ಇನ್ನು, ೧೪ ವರ್ಷದ ಯುವತಿಯನ್ನ ರಕ್ಷಣೆ ಮಾಡಿ ಬಾಲಕಾರ್ಮಿಕ ರಕ್ಷಣಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಮಗುವಿನ ತಾಯಿಗೆ ಊಟಕ್ಕೆ ಕಳುಹಿಸಲು ಬಂದಾಗ ಮಗುವಿಗೆ ಮಾತನಾಡಿಸಿದ್ದಾರೆ. ಹೀಗೆ ಮಾತನಾಡಿಸಿದಾಗ ನಾನು ಶಾಲೆಗೆ ಹೋಗುತ್ತೇನೆ ನಿಮ್ಮೊಂದಿಗೆ ಕರೆಯೊಯ್ಯಿರಿ ಎಂದು ಆ ಮಗು ಮನವಿ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು, ಬಾಲಕಿ ಮಾತನಾಡಿ, ನಾನು ಅಧಿಕಾರಿಗಳೊಂದಿಗೆ ತೆರಳಿ ಶಾಲೆ‌ ಕಲಿಯುವುದಾಗಿ ಹೇಳಿದ್ದಾರೆ. ಇದರ ಮಧ್ಯೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ರು. 

ಕಾಲಕಾಲೇಶ್ವರದಲ್ಲಿ ಎರಡು ಮಕ್ಕಳು, ಗಜೇಂದ್ರಗಡದಲ್ಲಿ ನಾಲ್ಕು ಬಾಲ ಕಾರ್ಮಿಕರನ್ನ ರಕ್ಷಣೆ ಮಾಡಲಾಗಿದೆ. 

ಅಧಿಕಾರಿಗಳು ಸಹ ಸಾರ್ವಜನಿಕರ ರಕ್ಷಣೆಗೆ ಇರುತ್ತಾರೆ. ಇನ್ನೂ ಪಾಲಕರು ಪೋಷಕರು ಇದನ್ನ ಅರಿಯಬೇಕಿದೆ. ನಾವು ಎಷ್ಟೆ ಮುಂದುವರಿದಿದ್ದೇವೆ ಎಂದರೂ, ಶಿಕ್ಷಣ ಬಹಳ ಮುಖ್ಯ. ಬಡ ಕುಟುಂಬದಲ್ಲಿ ದ್ದವರು, ತಮ್ಮ ಆದಾಯದ ಮೂಲ ಮಾತ್ರ ನೋಡುತ್ತಾರೆ. ಇದು ಮಕ್ಕಳ ಭವಿಷ್ಯದೊಂದಿಗೆ ಆಟವಾಡಿದಂತಾಗುತ್ತದೆ. 
ಸರ್ಕಾರ ಬಾಲ‌ಕಾರ್ಮಿಕರ ಹಿತ ರಕ್ಷಣೆಗೆ ಹಲವಾರು ಯೋಜನೆಗಳನ್ನ ತಂದಿದೆ. ಊಟ, ವಸತಿಯೊಂದಿಗೆ ಶಿಕ್ಷಣವನ್ನು ನೀಡಿ, ಮಕ್ಕಳ ಭವಿಷ್ಯ ರೂಪಿಸುತ್ತಿದೆ. ಇದಕ್ಕಾಗಿಯೇ ಕೋಟ್ಯಾಂತರ ರೂಪಾಯಿ ವ್ಯಯಿಸುತ್ತಿದೆ. 
ಆದ್ರೆ, ಅನಕ್ಷರಸ್ಥರಾದ ನಮಗೆ ಅದೆಲ್ಲವೂ ತಿಳಿಯದಾಗಿದೆ. ಈಗಲಾದರೂ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಅಗತ್ಯ ವಿದೆ‌‌‌‌...
Post a Comment

Post a Comment