-->
Bookmark

Gajendragad: ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲ ಆರೋಪ

Gajendragad : 
ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲ ಆರೋಪ – ಕಾನೂನಿನ ಮೊರೆಹೋಗಿ ಎಂದ ಜಿಲ್ಲಾಧಿಕಾರಿ ವೈಶಾಲಿ ಎಂ 

ಜಿಲ್ಲಾಧಿಕಾರಿ ವೈಶಾಲಿ ಎಂ ಅವರು, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಕುರಿತು ಮಾಹಿತಿ ನೀಡುವಾಗ ಕೆಲಕಾಲ ಗೊಂದಲದ ಗೂಡಾಗಿತ್ತು. ಗಜೇಂದ್ರಗಡದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಿತು. ಪ್ರತಿ ಎರಡು ವರೆ  ವರ್ಷಕ್ಕೊಮ್ಮೆ ಮೀಸಲಾತಿ ಬದಲಾಗುತ್ತದೆ. ಈ ಪ್ರಕಾರ ಮೀಸಲಾತಿ ಮೇರೆಗೆ ಗ್ರಾಮ ಪಂಚಾಯತ್ ಸದಸ್ಯರೆಲ್ಲರೂ ಭಾಗವಹಿಸಿದ್ರು. ಮೀಸಲಾತಿ ಪ್ರಕ್ರಿಯೆಯಲ್ಲಿ ಗೊಂದಲ ಇದೆ ಎಂದು ಸದಸ್ಯರು ಆರೋಪಿಸಿ, ಆವರಣದಲ್ಲೇ, ಗೋಗೇರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸುತ್ತಿದ್ದಾಗ, ಕೆಲಕಾಲ ಗೊಂದಲ ಉಂಟಾಗಿತ್ತು. ಈ ವೇಳೆ, ಪೊಲೀಸರು ಮಧ್ಯ ಪ್ರವೇಶ ಮಾಡಿ, ಪ್ರತಿಭಟನಾ ಕಾರರನ್ನ ಆವರಣದಿಂದ ಹೊರ ಹಾಕಿದ್ರು. ಗ್ರಾ.ಪಂ ಸದಸ್ಯರಲ್ಲದವರೂ, ಭಾಗವಹಿಸಿದ್ರು. ಅವರನ್ನ ಆವರಣದಿಂದ ಹೊರ ಹೋಗುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ ಮನವಿ ಮಾಡಿದ್ರು. ಮನವಿಗೆ ಸ್ಪಂದಿಸಿದ ಗ್ರಾಮಸ್ಥರು ಹೊರ ನಡೆದರು. ಬಳಿಕ ಮತ್ತೆ ಆಯ್ಕೆ ಪ್ರಕ್ರಿಯೆ ನಡೆಯಿತು. 

ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದಲ್ಲೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಆಯ್ಕೆ ಪ್ರಕ್ರಿಯೆಗೆ ತೊಂದರೆಯಾಗುತ್ತಿದೆ. ಸದಸ್ಯರಲ್ಲದವರು ಹೊರಹೋಗಿ ಎಂದು ಮನವಿ ಮಾಡಿದ್ರು. 

ಪೊಲೀಸರು ಸಹ ಪ್ರತಿಭಟನಾಕಾರರನ್ನ ಹೊರ ಹಾಕಿದ್ರು. ಇದನ್ನ ತೀವ್ರವಾಗಿ ಖಂಡಿಸಿದ ಗೋಗೇರಿ ಗ್ರಾಮಸ್ಥರು, ಮುಂಬರುವ ದಿನಗಳಲ್ಲಿ ಕಾನೂನಿನ ಮೊರೆ ಹೋಗುವುದಾಗಿ ತಿಳಿಸಿದ್ರು. 

ಮೀಸಲಾತಿ ಪ್ರಕ್ರಿಯೆ ನಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವೈಶಾಲಿ ಎಂ. ಅಧ್ಯಕ್ಷ, ಉಪಾಧ್ಯಕ್ಷ ಲಾಟರಿ ಮೂಲಕ ಆಯ್ಕೆ ಮಾಡಿದ್ದೇವೆ. ಆಯ್ಕೆಯಲ್ಲಿ ಗೊಂದಲಗಳಿದ್ದರೇ, ಅವರು ಕಾನೂನಿನ ಮೊರೆ ಹೋಗಬಹುದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ ಹೇಳಿದ್ರು. 

ಇನ್ನೂ, ಗೊಂದಲ ಗಳಿಲ್ಲದೇ, ನಡೆಯಬೇಕಿದ್ದ ಆಯ್ಕೆ ಪ್ರಕ್ರಿಯೆ ಕೈಕೈ ಮಿಲಾಯಿಸಿದ್ದೂ ಮಾತ್ರ ಅಳಿಸದೇ, ಅಳುಸದೇ ಅಚ್ಚಳಿಯಾಗಿ ಉಳಿಯಲಿದೆ. 

ಮುಂಬರುವ ದಿನಗಳಲ್ಲಿ ಈ ಪ್ರಕರಣ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನ ಕಾದು ನೋಡಬೇಕಿದೆ.
Post a Comment

Post a Comment