-->
Bookmark

Gajendragad : ಹಾಲುಮತ ಸಮಾಜದಿಂದ ಭಾನುವಾರ ಸನ್ಮಾನ - ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಗೌರವ

Gajendragad :

ಭಾನುವಾರ ಜೂನ್ 25 ರಂದು ಬೆಳಗ್ಗೆ 11 ಗಂಟೆಗೆ ಶಾದಿಮಹಲ್‌ನಲ್ಲಿ ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಹಾಲುಮತ ಸಮಾಜದ ಹಿರಿಯ ಮುಖಂಡರಾದ ವಿ.ಆರ್. ಗುಡಿಸಾಗರ್ ಮಾಹಿತಿ ನೀಡಿದ್ರು.  
ಹಾಲಮತ ಸಮಾಜದಿಂದ ಈ ಕಾರ್ಯಕ್ರಮ ನಡೆಯಲಿದೆ. ರೋಣ, ಗಜೇಂದ್ರಗಡ ಗಜೇಂದ್ರಗಡ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು, ಜಿ.ಎಸ್. ಪಾಟೀಲ್ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ರೋಣ ತಾಲೂಕಿನ ಅಧ್ಯಕ್ಷರು, ಸೇರಿದಂತೆ ತಾಲೂಕಿನ ಎಲ್ಲ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ. 
ಹಾಲುಮತ ಸಮಾಜದಿಂದ ನಡೆಯುವ ಕಾರ್ಯಕ್ರಮ ಇದಾದ್ರು, ಎಲ್ಲ ಸಮಾಜದ ಕಾಂಗ್ರೆಸ್ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಿ.ಆರ್. ಗುಡಿಸಾಗರ್ ಕಿರಾ ನ್ಯೂಸ್ ಗೆ ಮಾಹಿತಿ ನೀಡಿದ್ರು
Post a Comment

Post a Comment