-->
Bookmark

Gajendragad : ಬೀದಿ ಬದಿ ವ್ಯಾಪಾರಿಗಳ ಮಹಾ ಮಂಡಳದಿಂದ ಗಜೇಂದ್ರಗಡ ತಾಲೂಕಿಗೆ ನೂತನ ಪ್ರದಾನ ಕಾರ್ಯದರ್ಶಿ - ಜವಾಬ್ದಾರಿ ಹೆಚ್ಚಿಸಿದೆ ಎಂದ ಮಹಮ್ಮದಗೌಸ್ ಅಕ್ಕಿGajendragad :

ಗದಗ ಜಿಲ್ಲಾ ರಾಜ್ಯ ಸಮಿತಿ ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾ ಮಂಡಳ ಗದಗ ಇವರ ಸಹಯೋಗದಲ್ಲಿ ಗಜೇಂದ್ರಗಡ ತಾಲೂಕಿಗೆ ನೂತನ ಪ್ರಧಾನ ಕಾರ್ಯದರ್ಶಿ ಆಯ್ಕೆ ಮಾಡಲಾಯ್ತು.. ತಾಲೂಕಾಧ್ಯಕ್ಷ ಕಳಕಪ್ಪ ಪೋತಾ ಅವರು, ನೂತನವಾಗಿ ಆಯ್ಕೆಯಾದ ಪ್ರಧಾನ ಕಾರ್ಯದರ್ಶಿ ಮಹಮ್ಮದಗೌಸ್ ಮುಸ್ತಾಕಅಹ್ಮದ ಅಕ್ಕಿ ಪ್ರಮಾಣ ಪತ್ರ ವಿತರಿಸಿದ್ರು. ಈ ವೇಳೆ, ಮಾತನಾಡಿದ ತಾಲೂಕಾಧ್ಯಕ್ಷ ಪೋತಾ ಅವರು, ಬೀದಿಬದಿ ವ್ಯಾಪಾರಸ್ಥರಿಗೆ ಮೂಲಭೂತ ಸೌಲಭ್ಯಗಳೆ ಇಲ್ಲ. ಬೀದಿಬದಿ ವ್ಯಾಪಾರಸ್ಥರ ಸಮಸ್ಯೆಗಳನ್ನ ಮುಂಬರುವ ದಿನಗಳಲ್ಲಿ ಒಂದೊಂದಾಗಿ ಬಗೆಹರಿಸುವುದಾಗಿ ಭರವಸೆ ನೀಡಿದ್ರು. ಇದೇ ವೇಳೆ, ಪ್ರಧಾನ ಕಾರ್ಯದರ್ಶಿ ಮಹಮ್ಮದಗೌಸ್ ಮುಸ್ತಾಕಅಹ್ಮದ ಅಕ್ಕಿ ಮಾತನಾಡಿ, ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದು, ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದ್ರು.
Post a Comment

Post a Comment