Gadag :
ಎ.ಎಸ್.ಎಸ್. ಕಾಮರ್ಸ್ ಕಾಲೇಜಿನಲ್ಲಿ ಕಿರುಚಿತ್ರ ಪ್ರದರ್ಶನ ಸ್ಪರ್ಧೆ
ಪರಿಸರ ಜಾಗೃತಿ ಮೂಡಿಸುವ ಕಿರುಚಿತ್ರ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳು
--
ಗದಗ ನಗರದಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎ.ಎಸ್.ಎಸ್. ಕಾಮರ್ಸ್ ಕಾಲೇಜಿನಲ್ಲಿ ಪಿ.ಜಿ.ಕೋರ್ಸ್ ಎಂ.ಕಾಂ. ವತಿಯಿಂದ ಭಾನುವಾರ ಆಯೋಜನೆ ಮಾಡಲಾಗಿದ್ದ ಕಿರುಚಿತ್ರ ಪ್ರದರ್ಶನ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ ಕ್ಷಣ.
ಈ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳನ್ನು 15 ತಂಡಗಳನ್ನಾಗಿ ವಿಂಗಡಿಸಿ
" ಪರಿಸರ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಗೃತಿ " ಎಂಬ ವಿಷಯವನ್ನು ನೀಡಲಾಗಿತ್ತು.
ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಮಾತನಾಡದೆ ನಟಿಸಿ, ಯಾವುದೇ ರೇಡಿಮೇಡಿ ವಿಡಿಯೋಗಳನ್ನು ಬಳಕೆ ಮಾಡದೆ ತಮ್ಮದೇ ಸ್ವಂತಿಕೆಯಲ್ಲಿ ಪರಿಸರ ಜಾಗೃತಿ ಮೂಡಿಸುವ ವಿಚಾರಧಾರೆಗಳನ್ನು ತಮ್ಮ ನಟನೆಯ ಮೂಲಕ ಪ್ರದರ್ಶನ ಮಾಡಿದರು.
ಇದರಲ್ಲಿ ನಮಗೆ ಎಲ್ಲಾ ಕಿರುಚಿತ್ರಗಳು ಇಷ್ಟವಾದವು. ಆದರೆ ಸ್ಪರ್ಧಾತ್ಮಕವಾಗಿ ಮೂರು ಕಿರುಚಿತ್ರಗಳು ಗಮನ ಸೆಳೆದವು. ಅವುಗಳು ಅಂದರೆ,
1) ಪರಿಸರದಲ್ಲಿ ಪಂಚಭೂತಗಳ ಮಹತ್ವದ ಬಗ್ಗೆ ಹಾಗೂ ಪರಿಸರದಲ್ಲಿ ನಡೆಯುತ್ತಿರುವ ಬದಲಾವಣೆ ಮತ್ತು ಪರಿಣಾಮಗಳ ಬಗ್ಗೆ ಇರುವ ಕಿರುಚಿತ್ರ
2) ಸಾನಿಟರಿ ಪ್ಯಾಡ್ ಬಳಕೆ, ಅದರ ಮಹತ್ವ, ಜಾಗೃತಿ ಹಾಗೂ ಅದನ್ನು ಡಿಸ್ಪೋಸಲ್ ಮಾಡುವ ಮಹತ್ವದ ಬಗ್ಗೆ ಹಾಗೂ ಪರಿಸರ ಮಾಲಿನ್ಯದಿಂದ ಆಗುತ್ತಿರುವ ಪರಿಣಾಮದ ಬಗ್ಗೆ ಇರುವ ಕಿರುಚಿತ್ರ
3) ಕೆಕ್ ಕಟ್ ಮಾಡಿ, ಡ್ರಿಂಕ್ಸ್ ಕುಡಿದು ಆಚರಣೆ ಮಾಡುವ ಜನ್ಮದಿನ ಹಾಗೂ ಪರಿಸರದಲ್ಲಿ ಎಸೆಯುವ ಬಾಟಲ್, ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಹಾಗೂ ಸಸಿ ನೆಟ್ಟು, ಹಿರಿಯರ, ದೇವರ ಆಶೀರ್ವಾದ ಪಡೆಯುವ ಮೂಲಕ ಜನ್ಮ ದಿನ ಆಚರಣೆ ಮಾಡುವಲ್ಲಿ ಇರುವ ಖುಷಿ ಇದರ ಮಹತ್ವದ ಬಗ್ಗೆ ಇರುವ ಕಿರುಚಿತ್ರ
ಸೇರಿದಂತೆ ಉಳಿದ ಎಲ್ಲಾ ಕಿರುಚಿತ್ರಗಳು ನೀರು ಸಂರಕ್ಷಣೆ, ಮೊಬೈಲ್ ಬಳಕೆಯ ದುಷ್ಪರಿಣಾಮ, ಗಿಡಮರಗಳ, ಪ್ರಾಣಿಗಳ ಸಂರಕ್ಷಣೆಯ ಮಹತ್ವ ಹಾಗೂ ಕೃಷಿಯಲ್ಲಿ ಕೀಟನಾಶಕಗಳ ಬಳಕೆಯ ದುಷ್ಪರಿಣಾಮ ಇಂತಹ ಅನೇಕ ವಿಷಯಕ್ಕೆ ಸಂಬಂಧಿಸಿದಂತೆ ಕಿರುಚಿತ್ರಗಳ ಪ್ರದರ್ಶನ ನಡೆಯಿತು.
ಇಂತಹ ಉತ್ತಮ ವಿಷಯಕ್ಕೆ ಹಿರಿಯ ಅನುಭವಿಗಳ ಜೊತೆಗೆ ನನ್ನನ್ನು ನಿರ್ಣಾಯಕರಾಗಿ ಆಹ್ವಾನ ಮಾಡಿದ ಆತ್ಮೀಯ ಸ್ನೇಹಿತರಾದ ಶ್ರೀ ಜಾಧವ್ ಸರ್ ಅವರಿಗೆ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಕೆ. ಗಿರಿರಾಜ ಕುಮಾರ್, ಎಂ.ಕಾಂ. ನಿರ್ದೇಶಕರಾದ ಪಿ. ಆರ್. ಅಡವಿ, ಎಂ.ಕಾಂ. ಕೋ-ಆರ್ಡಿನೇಟರ್ ಆದ ಡಾ. ವಿ. ಟಿ. ನಾಯ್ಕರ್ ಸೇರಿದಂತೆ ಸಂಸ್ಥೆಯ ಎಲ್ಲರಿಗೂ ಹಾಗೂ ಎಲ್ಲಾ ವಿದ್ಯಾರ್ಥಿ ಸ್ನೇಹಿತರಿಗೂ ಅನಂತ ಧನ್ಯವಾದಗಳು.
ಚಂದ್ರು ಎಂ. ರಾಥೋಡ್ : ಪತ್ರಕರ್ತರು
Post a Comment