-->
Bookmark

Gajendragad :ಸೂಪರ್ ಶಾಸಕ ಸಿದ್ದಪ್ಪ ಬಂಡಿ ನೇತೃತ್ವದಲ್ಲಿ ಶಾಸಕ GS Patil ಅವರಿಗೆ ಸನ್ಮಾನ

Gajendragad :
ಸೂಪರ್ ಶಾಸಕ ಸಿದ್ದಪ್ಪ ಬಂಡಿ ನೇತೃತ್ವದಲ್ಲಿ ಶಾಸಕ GS Patil ಅವರಿಗೆ ಸನ್ಮಾನ 
ಪಂಚಮಸಾಲಿ ಸಮಾಜದ ಪ್ರಮುಖ ಬೇಡಿಕೆ ವೀರರಾಣಿ ಕಿತ್ತೂರ ಚೆನ್ನಮ್ಮಾ ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ಶಾಸಕ ಜಿ.ಎಸ್. ಪಾಟೀಲ್ ಭರವಸೆ ನೀಡಿದರು. 

ಬಂಡಿ ಗಾರ್ಡನ್ ನಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಬಹುದಿನಗಳ ಬೇಡಿಕೆಯಾದ ಸಮುದಾಯ ಭವನ ನಿರ್ಮಾಣ ಮಾಡುತ್ತೇನೆ. ಜೊತೆಗೆ  
ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಸದಾ ಋಣಿಯಗಿರುತ್ತೇ‌ನೆ. ನನ್ನನ್ನು ಗೆಲ್ಲಿಸಲು ಶ್ರಮಿಸಿದ ಸಮುದಾಯದಲ್ಲಿ ನೀವೂ ಹೌದು ಎಂದು ಭಾವುಕರಾದರು. ಅಲ್ಲದೇ, ಸಿದ್ದಣ್ಣ ಬಂಡಿ ಅವರ ಕೆಲಸ ಕಾರ್ಯವನ್ನ ಶಾಸಕ ಜಿ.ಎಸ್. ಪಾಟೀಲ್ ಅವರು ಹಾಡಿ ಹೊಗಳಿದರು. 
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಕೂಡಲಸಂಗಮ ಮಹಾಪೀಠದ ಪ್ರಥಮ ಜಗದ್ಗುರು  ಬಸವಜಯ ಮೃತ್ಯಂಜಯ ಸ್ವಾಮಿಗಳು ಮಾತನಾಡಿ, ಲಿಂಗಾಯತ ಸಮಾಜವನ್ನು ಕೇಂದ್ರ ಸರಕಾರ, ಓಬಿಸಿ ಮೀಸಲಾತಿಗೆ ಒಳ ಪಡಿಸುವ ಕುರಿತು ಹೋರಾಟ ಮತ್ತು  ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ದೊರೆಕಿಸುವ ಹೋರಾಟ ಮತ್ತೆ ನಡೆಸಿದರೆ ಶಾಸಕ ಜಿ.ಎಸ್. ಪಾಟೀಲ್ ಅವರು ಬೆಂಬಲಿಸಬೇಕೆಂದು ಶಾಸಕರ ಬೆಂಬಲ ಕೋರಿದರು. 
ಜೊತೆಗೆ ವಿಧಾನಸೌಧದಲ್ಲಿ ನಡೆಯುವ ಅಧಿವೇಷನದಲ್ಲಿ ಸಮಾಜ ಪರ ಧ್ವನಿ ಎತ್ತಬೇಕೆಂದು ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳು ಒತ್ತಾಯಿಸಿದರು. 
ಗಜೇಂದ್ರಗಡ-ಉಣಚಗೇರಿ ವಿರಶೈವ ಪಂಚಮಸಾಲಿ ಸಮಾಜ ಅಧ್ಯಕ್ಷ ಸಿದ್ದಣ್ಣಾ ಬಂಡಿ ಮಾತನಾಡಿ, ಅಖಂಡ ಸಮಾಜದ ಪರವಾಗಿ ಶಾಸಕರ ಆಗಿದ್ದಕ್ಕೆ ಅಭಿನಂದನೆ, ಗಜೇಂದ್ರಗಡದಲ್ಲಿ ಹೆಚ್ಚಿನ ಮತದಾನವಾಗಿದೆ ಎಂದು ಮತದಾರರಿಗೆ ಧನ್ಯವಾದ ತಿಳಿಸಿದರು. ಸಮಾಜ ಯುವಕರು ಉನ್ನತ ಶಿಕ್ಷಣ ಪಡೆದು ಮುಂದೆ ಬರಬೇಕು ಎಂದು ಯುವ ಸಮುದಾಯಕ್ಕೆ ಕಿವಿ ಮಾತು ಹೇಳಿದರು. 
 ಪಟ್ಟಣದಲ್ಲಿ ಭಯದ ವಾತಾವರಣ ಇತ್ತು. ಈಗ ನಮ್ಮೊಂದಿಗೆ ಶಾಸಕರಿದ್ದಾರೆ. 
 ಭಯ ಪಡುವ ಅಗತ್ಯ ಇಲ್ಲ ಎಂದು ಅಭಯ ಹಸ್ತ ನೀಡರು. 
ಮಲ್ಲಿಕಾರ್ಜುನ್ ಹಿರೇಕೊಪ್ಪ ಮಾತನಾಡಿ, ಸಚಿವ ಸ್ಥಾನ ಸಿಗಬೇಕಾಗಿತ್ತು. ಆದ್ರೆ, ಯಾವುದೋ ಕಾರಣಕ್ಕೆ ಸಿಕ್ಕಿಲ್ಲ. ಹೀಗಾಗಿ, ಮುಂಬರುವ ದಿನಗಳಲ್ಲಿ ಸಚಿವರನ್ನಾಗಿ ನೋಡುತ್ತೇವೆ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಮಲ್ಲಿಕಾರ್ಜುನ್ ಹಿರೇಕೊಪ್ಪ ತಮ್ಮ ಮನದಾಳ ಹಂಚಿಕೊಂಡರು. ನೆರೆದವರೆಲ್ಲರೂ, ಮಲ್ಲಿಕಾರ್ಜುನ ಹಿರೇಕೊಪ್ಪ ಅವರ ಕೆಲಸ ಕಾರ್ಯಕ್ಕೆ ಶ್ಲಾಘಿಸಿದರು. 
ಪ್ರೊ. ಬಸವರಾಜ ಪಲ್ಲೇದ್,  ಈರಣ್ಣಾ ಯಳವತ್ತಿ, ಬಸವರಾಜ ಮೂಲಿಮನಿ, ವಿಶ್ವನಾಥ ಜಿಡ್ಡಿಬಾಗಿಲ, ಪ್ರಭು ಚವಡಿ, ವೀರೇಶ ಸಂಗಮದ ಶಾಸಕರ ಬಗ್ಗೆ ತಮ್ಮ ಮನದಾಳ ಹಂಚಿಕೊಂಡರು. 

ಸರ್ವ ಸಮಾಜ ಅಧ್ಯಕ್ಷ ಚಂಬಣ್ಣ ಚವಡಿ ಕಾರ್ಯಕ್ರಮ  ಉದ್ಘಾಟಿಸಿದರು. ಲಡ್ಡುಮುತ್ಯಾ ಸಾನಿಧ್ಯ ವಹಿಸಿದ್ದರು. ಐ.ಎಸ್. ಪಾಟೀಲ, ಮಿಥುನ್ ಪಾಟೀಲ, ಡಾ. ಕೆ.ಬಿ. ಧನ್ನೂರ, ಮುತ್ತಣ್ಣಾ ಮ್ಯಾಗೇರಿ, ವೀರಣ್ಣಾ ಶಿರೋಳ, ರಾಜು ಪಲ್ಲೇದ, ಪ್ರಭು ಮೇಟಿ, ಅಶೋಕಕುಮಾರ ಬಾಗಮಾರ, ವೀರಣ್ಣಾ ಶೆಟ್ಟರ್, ಬಸವರಾಜ ಬಿದರೂರ, ರಮೇಶ ಪಲ್ಲೇದ, ಅಕ್ಷಯ ಬಂಡಿ, ಅಕ್ಷಯ ಪಾಟೀಲ, ಎ.ಕೆ. ಮಾಳಗಿ, ಕಳಕನಗೌಡ, ಡಾ. ಆರ್.ಜಿ. ಮಲ್ಲಾಪುರ, ಕಲಕಪ್ಪ ಅಬ್ಬಗೇರಿ, ಶಿವಪ್ಪ ಪಲ್ಲೇದ, ಬಸವಂತಪ್ಪ ಪಲ್ಲೇದ, ಕಳಕಪ್ಪ ಸಂಗನಾಳ, ಮಹೇಶ ಪಲ್ಲೇದ, ಕಳಕಪ್ಪ ಅಬ್ಬಿಗೇರಿ, ಬಸಪ್ಪ ಬನ್ನಿಗೋಳ, ಶಾಂತಪ್ಪ ಅಗಸಿಬಾಗಿಲ, ಅನೀಲ ಸಂಗನಾಳ, ತುಳಜಪ್ಪ ಸುಳ್ಳದ, ಶಶಿಧರ ವಕ್ಕಲರ, ಶರಣಪ್ಪ ದಿಂಡೂರ, ಬಸವಂತಪ್ಪ ಪಲ್ಲೇದ, ಕಳಕಪ್ಪ ಪತಂಗರಾಯ, ಮುತ್ತಣ್ಣಾ ಮಲ್ಲನ ಗೌಡರ, ಅನೀಲ ಸಂಗನಾಳ, ಹುಚ್ಚಿರಪ್ಪ ಹಿರೇಕೊಪ್ಪ ಶೇಖಪ್ಪ ಕಾಶಪ್ಪನವರ, ಕಳಕಪ್ಪ ಅಬ್ಬಿಗೇರಿ, ಅರುಣ ಉಗಲಾಟದ, ಮಂಜುನಾಥ ಅಬ್ಬಿಗೇರಿ, ಮುತ್ತಣ್ಣಾ ಸಂಗಮದ, ರಾಕೇಶ ಮಾರನಬಸರಿ ಸೇರಿದಂತೆ ಸಮಾಜದ ಗುರು-ಹಿರಿಯರು ಭಾಗವಹಿಸಿದ್ದರು. 

ರೋಣ, ಗಜೇಂದ್ರಗಡ, ಮುಂಡರಗಿ, ಸೇರಿದಂತೆ ಜಿಲ್ಲೆಯಾದ್ಯಂತ ದಿಂದ 
ಪಂಚಮಸಾಲಿ ಸಮಾಜದ ಬಾಂಧವರು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ತಂದರು. ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಧನ್ಯವಾದ ತಿಳಿಸಿದರು. 
Post a Comment

Post a Comment