-->
Bookmark

Gajendragad : ಕ್ಷೇತ್ರದಲ್ಲಿ ಸೂಪರ್ ಶಾಸಕ ಸಿದ್ದಪ್ಪ ಬಂಡಿ : ಅಭಿಮಾನಿಗಳ ಅಭಿಮತ ಎಂದ ಮಲ್ಲಿಕಾರ್ಜುನ್ ಹಿರೇಕೊಪ್ಪ

Gajendragad : 

ಕ್ಷೇತ್ರದಲ್ಲಿ ಸೂಪರ್ ಶಾಸಕ ಸಿದ್ದಪ್ಪ ಬಂಡಿ : ಅಭಿಮಾನಿಗಳ ಅಭಿಮತ ಎಂದ ಮಲ್ಲಿಕಾರ್ಜುನ್ ಹಿರೇಕೊಪ್ಪ 

ಭಾನುವಾರ ನಡೆಯಲಿರಯವ ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಸನ್ಮಾನ ಕಾರ್ಯಕ್ರಮದ ಸಕಲ ಸಿದ್ಧತೆ ಪೂರ್ಣ ಗೊಂಡಿದೆ. ಕಾರ್ಯಕ್ರಮದ ಸಿದ್ಧತೆ ಬಗ್ಗೆ ಮಾತನಾಡಿದ, ರೋಣ ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ, ಎಲ್ಲ ಸಮಾಜದ ಬಾಂಧವರು ಬಂದು ಸನ್ಮಾನಕ್ಕೆ ಅವಕಾಶ ಇದೆ. ಭೋಜನ ವ್ಯವಸ್ಥೆಯೂ ಇದ್ದು, ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಿದ್ದಪ್ಪ ಬಂಡಿ ಮನವಿ ಮಾಡಿದರು. ಸಮಾಜದ ಬಾಂಧವರು ಸೇರಿ ಎಲ್ಲರೂ ಬೆಂಬಲಿಸಿದ್ದಾರೆ. ಧರ್ಮಕ್ಷೇತ್ರ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಸರ್ವಸಮಾಜದ ಅಧ್ಯಕ್ಷರಾದ ಚಂಬಣ್ಣ ಚವಡಿ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಿದ್ದಪ್ಪ ಬಂಡಿ ಮಾಹಿತಿ ನೀಡಿದರು. 
ಸಮಾಜದ ಮತ್ತೊರ್ವ ಮುಖಂಡ ಮಲ್ಲಿಕಾರ್ಜುನ್ ಹಿರೇಕೊಪ್ಪ ಮಾತನಾಡಿ, ಕಾಂಗ್ರೆಸ್‌ಗೆ ಆನೆ ಬಲವನ್ನ ತಂದಿದ್ದಾರೆ. ಸೂಪರ್ ಸಿಎಂ ಅವರಂತೆ ಸೂಪರ್ ಶಾಸಕರಾಗಿದ್ದಾರೆ ಎಂದು ಕಾರ್ಯಕರ್ತರು ಹೇಳುತ್ತಾರೆ ಎಂದು ಕೃಷ್ಣ ರಾಠೋಡ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಯಕರ್ತರು ಹೇಳುತ್ತಿರುವುದು ನಿಜ. ಶಾಸಕ ಜಿ.ಎಸ್. ಪಾಟೀಲ್ ಮತ್ತು ಸಿದ್ದಪ್ಪ ಬಂಡಿ ಅವರು ಕ್ಷೇತ್ರದಲ್ಲಿನ ಎರಡು ಕಣ್ಣುಗಳು ಇದ್ದಂತೆ ಎಂದು ಹೇಳುತ್ತಾರೆ. ಅದೆಲ್ಲವೂ ನಿಜ. ಅವರು ಶ್ರಮ ವಹಿಸಿ, ಕೆಲಸ ಕಾರ್ಯ ಮಾಡಿದ್ದಾರೆ. ಮತ ಎಣಿಕೆ ನಡೆದ ದಿನ, ಸಿದ್ದಪ್ಪ ಬಂಡಿ ಅವರ ಮನೆಯಲ್ಲಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಸಾವಿರಾರೂ ಜನರು ಜಮಾಯಿಸಿ, ಜಾತ್ರೆಯಂತೆ ಸಂಭ್ರಮಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. 
ಸಿದ್ದಪ್ಪ ಬಂಡಿ ಅವರಿಗೆ ರೋಣ ತಾಲೂಕಿನ ಸರ್ವ ಸಮಾಜ ಬಾಂಧವರ ಬೆಂಬಲವೂ ಇದೆ. ಎಲ್ಲರೊಂದಿಗೂ ಆತ್ಮೀಯರಂತೆ ಬೆರೆಯುತ್ತಾರೆ. ಮುಂಬರುವ ದಿನಗಳಲ್ಲಿ ಉನ್ನತ ಸ್ಥಾನ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು. 

ಇನ್ನೂ, ಮುತ್ತಣ್ಣ ಮ್ಯಾಗೇರಿ ಮಾತನಾಡಿ, ಕಾಂಗ್ರೆಸ್ ಪಕ್ಷ ಎಲ್ಲರಿಗೂ ಅವಕಾಶ ನೀಡುತ್ತದೆ. ಕಾಂಗ್ರೆಸ್‌ನಲ್ಲಿ ಕಡಗಣಿಸುವ ಮಾತೇ ಉದ್ಭವಿಸುವುದಿಲ್ಲ. ಅವರು ಬಡವ ಶ್ರೀಮಂತ ರೆನ್ನದೇ, ಎಲ್ಲರನ್ನೂ ಸಮಾನರಾಗಿ ಕಾಣುವ ದೊಡ್ಡಗುಣ ಇದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆಯುವ ಮನಸ್ಸು ಅವರದ್ದು ಎಂದು ಸಿದ್ದಣ್ಣ ಬಂಡಿ ಅವರನ್ನ ಬಣ್ಣಿಸಿದರು.
Post a Comment

Post a Comment