Gajendragad :
ಮೊಹರಂ ಹಬ್ಬದ ಹಿನ್ನೆಲೆ : ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ
ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಹಿನ್ನೆಲೆ ಶಾಂತಿ ಸಭೆ ನಡೆಯಿತು. ಉತ್ತಮ ಮಳೆಯಾಗಿದೆ. ಇದೇ ಖುಷಿಯಲ್ಲಿ ಹಬ್ಬವೂ ಸಹ ನಡೆಯಬೇಕು ಎಂಬ ಗಜೇಂದ್ರಗಡ ಪಿಎಸ್ ಐ ನಾಗರಾಜ್ ಹಚ್ ಗಡಾದ್ ಹೇಳಿದರು.
ಪಟ್ಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು.
ಶಾಂತಿ ಸಭೆಯಲ್ಲಿ ಗಜೇಂದ್ರಗಡ ಸೇರಿದಂತೆ ಸುತ್ತಮುತ್ತಲ ಗ್ರಾಮದ ಜನರು ಭಾಗವಹಿಸಿದ್ದರು.
ಒಂದು ಬಾರಿ ಘಟನೆ ನಡೆದರೇ, ಮುಂಬರುವ ದಿನಗಳಲ್ಲಿ ಅವರ ಮೇಲೆ ನಿಗಾ ಇಡಲಾಗುತ್ತದೆ. ಹೀಗಾಗಿ, ಎಲ್ಲರೂ ಎಚ್ಚರಿಕೆಯಿಂದಿರುವುದು ಒಳಿತು ಎಂದು ಪಿಎಸ್ ಐ ನಾಗರಾಜ್ ಹೆಚ್ ಗಡಾದ್ ಶಾಂತಿಯ ಸಂದೇಶ ಸಾರಿದರು.
ಯಾರು ಕಾನೂನನ್ನ ಉಲ್ಲಂಘಿಸಬೇಡಿ, ಉಲ್ಲಂಘಿಸಿದ್ದೇ ಆದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಹಳ್ಳಿಗಳಲ್ಲೂ ಕಟ್ಟಿನಿಟ್ಟಿನ ಕ್ರಮ ಜರುಗಿಸಿದ್ದೇವ. ಹಬ್ಬಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದೇವೆ. ಈ ಹಿಂದೆಯೂ ಸಮಸ್ಯೆಯಾಗಿಲ್ಲ. ಮುಂದೆಯೂ ಆಗದಿರಲಿ ಎಂದು ತಿಳಿಸಿದರು. ಇದೇ ವೇಳೆ, ಎಸ್ ಪಿ ಕಚೇರಿಯಿಂದಲೂ ಉತ್ತಮ ಕೆಲಸ ಮಾಡುವುದಕ್ಕೆ ಪ್ರಸಂಶಿಸಿದ್ದಾರೆ ಎಂದು ಪಿಎಸ್ ಐ ನಾಗರಾಜ್ ಹೆಚ್ ಗಡಾದ್ ಹೇಳಿದರು.
ಕೆಲ ಸಣ್ಣಪುಟ್ಟ ಘಟನೆಗಳನ್ನ ಹೊರತು ಪಡಿಸಿ, ಬಹುತೇಕ ಹಬ್ಬಗಳು ಶಾಂತಿಯುತವಾಗಿ ನಡೆಯುತ್ತವೆ. ಅಹಿತಕರ ಘನೆಗಳು ನಡೆದರೆ ನಿಮ್ಮ ಗಮನಕ್ಕೆ ತರುತ್ತೇವೆ ಎಂದು ಚಂದೂಕರ್ ಹೇಳಿದರು..
ಇನ್ನೂ ಗ್ರಾಮಗಳಿಂದಲೂ ಬಂದವರು ತಮ್ಮ ತಮ್ಮ ಸಮಸ್ಯಗಳನ್ನ ಹೇಳಿಕೊಂಡರು. ಸಾರ್ವಜನಿಕ ಸಭೆಯಲ್ಲಿ ಎಲ್ಲರಿಗೂ ಸ್ಪಂದಿಸಿದ ಪಿಎಸ್ ಐ ನಾಗರಾಜ್ ಅವರು, ಸೂಕ್ಷ್ಮ ಜಾಗದಲ್ಲಿ ಹೆಚ್ಚಿನ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದರು. ಅವಶ್ಯಕತೆ ಇದ್ದಲ್ಲಿ, ಭದ್ರತೆ ಹೆಚ್ಚಿಸುತ್ತೇವೆ, ಪೊಲೀಸ್ ಇಲಾಖೆ ಎಲ್ಲೆಡೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಿದೆ ಎಂದು ಸ್ಪಷ್ಟ ಸಂದೇಶ ರವಾನಿಸಿದರು.
Post a Comment